ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರೋದ್ ಮಾಂತ್ರಿಕನಿಗೆ ಸಮ್ಮಾನ

Last Updated 3 ಜನವರಿ 2012, 19:30 IST
ಅಕ್ಷರ ಗಾತ್ರ

ಧಾರವಾಡ: ಖ್ಯಾತ ಸರೋದ್ ವಾದಕ ಉಸ್ತಾದ್ ಅಮ್ಜದ್ ಅಲಿಖಾನ್ ಅವರಿಗೆ ಮಂಗಳವಾರ ಇಲ್ಲಿಗೆ ಸಮೀಪದ ಸತ್ತೂರಿನ ಡಾ. ಡಿ.ವೀರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ನಡೆದ ಹೃದಯಸ್ಪರ್ಶಿ ಸಮಾರಂಭದಲ್ಲಿ ಡಾ. ಮಲ್ಲಿಕಾರ್ಜುನ ಮನ್ಸೂರ್ ರಾಷ್ಟ್ರೀಯ ಸಮ್ಮಾನವನ್ನು ಪ್ರದಾನ ಮಾಡಲಾಯಿತು.

ಕರ್ನಾಟಕ ಸರ್ಕಾರ ಸ್ಥಾಪಿಸಿರುವ ~ಡಾ. ಮ್ಲ್ಲಲಿಕಾರ್ಜುನ ಮನ್ಸೂರ್ ರಾಷ್ಟ್ರೀಯ ಟ್ರಸ್ಟ್~ ವತಿಯಿಂದ ನೀಡಲಾದ ಈ ಪ್ರಶಸ್ತಿಯು ಒಂದು ಲಕ್ಷ ರೂಪಾಯಿ ನಗದು, ಪ್ರಶಸ್ತಿ ಫಲಕವನ್ನು ಹೊಂದಿದೆ. ಪ್ರಶಸ್ತಿಯನ್ನು ಸಂಸದ ಪ್ರಹ್ಲಾದ ಜೋಶಿ ಪ್ರದಾನ ಮಾಡಿದರು.

ಪ್ರಶಸ್ತಿ ಸ್ವೀಕರಿಸಿದ ಬಳಿಕ ಚುಟುಕು ಭಾಷಣ ಮಾಡಿದ ಅಮ್ಜದ್ ಅಲಿಖಾನ್, ~ಇಂದು ಸಂಗೀತವೂ ಸಾಂಸ್ಥೀಕರಣಗೊಳ್ಳುತ್ತಿದೆ. ಮೊದಲಿದ್ದ ಗುರುಕುಲ ಪದ್ಧತಿಯ ಶಿಕ್ಷಣ ಈಗ ಇಲ್ಲ. ಗುರುಕುಲದಲ್ಲಿ ಗುರುವಿನ ಆಶೀರ್ವಾದ ಸಿಗುತ್ತದೆ. ಸಂಸ್ಥೆಯಲ್ಲಿ ಪ್ರಮಾಣಪತ್ರವಷ್ಟೇ ದೊರೆಯುತ್ತದೆ~ ಎಂದು ಮಾರ್ಮಿಕವಾಗಿ ನುಡಿದರು.

~ಸಂಗೀತವು ಎಲ್ಲರಿಗೂ ಸೇರಿದ್ದು ಮತ್ತು ಅದು ಎಲ್ಲರಿಂದಲೂ ಪ್ರೀತಿಸಲ್ಪಡುತ್ತದೆ. ಸಂಗೀತ ದಿಗ್ಗಜ ಪಂ.ಮಲ್ಲಿಕಾರ್ಜುನ ಅವರ ಹೆಸರಲ್ಲಿ ನೀಡಲಾದ ಈ ಪ್ರಶಸ್ತಿಯನ್ನು ಅತ್ಯಂತ ಹೃದಯಪೂರ್ವಕವಾಗಿ ಸ್ವೀಕರಿಸುತ್ತಿದ್ದೇನೆ~ ಎಂದರು.

ಶಾಸಕರಾದ ಚಂದ್ರಕಾಂತ ಬೆಲ್ಲದ, ಸೀಮಾ ಮಸೂತಿ, ಟ್ರಸ್ಟ್ ಅಧ್ಯಕ್ಷ ಜಿಲ್ಲಾಧಿಕಾರಿ ದರ್ಪಣ ಜೈನ್, ಪಂ. ಮ್ಲ್ಲಲಿಕಾರ್ಜುನ ಮನ್ಸೂರ್ ಅವರ ಪುತ್ರ ಹಾಗೂ ಟ್ರಸ್ಟ್ ಸದಸ್ಯ ಡಾ.ರಾಜಶೇಖರ ಮನ್ಸೂರ್, ಪುತ್ರಿ ನೀಲಾ ಎಂ.ಕೊಡ್ಲಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT