ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರದ ನಿರ್ಧಾರ ಖಂಡಿಸಿ ಮನವಿ

Last Updated 26 ಮಾರ್ಚ್ 2011, 9:25 IST
ಅಕ್ಷರ ಗಾತ್ರ

ಸಾಗರ: ಇಲ್ಲಿನ ಕೆ.ಎಚ್. ಶ್ರೀನಿವಾಸ್ ಸ್ನಾತಕೋತ್ತರ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳು ಪದವಿಪೂರ್ವ ಕಾಲೇಜುಗಳಿಗೆ ಪ್ರೌಢಶಾಲಾ ಶಿಕ್ಷಕರಿಗೆ ಬಡ್ತಿ ನೀಡಿ ಉಪನ್ಯಾಸಕರಾಗಿ ನೇಮಿಸುವ ಸರ್ಕಾರದ ನಿರ್ಧಾರವನ್ನು ಖಂಡಿಸಿ ಶುಕ್ರವಾರ ಉಪ ವಿಭಾಗಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು.

ಪದವಿಪೂರ್ವ ಕಾಲೇಜುಗಳಿಗೆ ಉಪನ್ಯಾಸಕರ ನೇಮಕ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ ಆರಂಭಿಸಿರುವುದು ಸಂತೋಷದ ವಿಷಯ. ಆದರೆ, ಪ್ರೌಢಶಾಲಾ ಶಿಕ್ಷಕರಿಗೆ ಬಡ್ತಿ ನೀಡಿ ಕಾಲೇಜುಗಳಿಗೆ ಉಪನ್ಯಾಸಕರಾಗಿ ನೇಮಿಸುವುದರಿಂದ ಸ್ನಾತಕೋತ್ತರ ಪದವಿ ಪಡೆದ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತದೆ ಎಂದು ಮನವಿಯಲ್ಲಿ ಹೇಳಲಾಗಿದೆ.

ಸ್ನಾತಕೋತ್ತರ ಪದವಿ ಪಡೆದ ಅನೇಕ ವಿದ್ಯಾರ್ಥಿಗಳು ನಿರುದ್ಯೋಗಿಗಳಾಗಿದ್ದಾರೆ. ಇಂತಹ ಹೊತ್ತಿನಲ್ಲಿ ಪ್ರೌಢಶಾಲಾ ಶಿಕ್ಷಕರ ನೇಮಕದಿಂದ ಮತ್ತಷ್ಟು ವರ್ಷ ಅವರು ನಿರುದ್ಯೋಗಿಗಳಾಗಿಯೇ ಉಳಿಯಬೇಕಾಗುತ್ತದೆ. ಭವಿಷ್ಯದಲ್ಲಿ ವಯೋಮಿತಿ ಕಾರಣಕ್ಕೆ ಉಪನ್ಯಾಸಕ ಹುದ್ದೆಯೇ ಸಿಗದ ಸಾಧ್ಯತೆ ಹೆಚ್ಚಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ವಿದ್ಯಾವಂತ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಿರುವಾಗ ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು ಏರಿಸುವ ನಿರ್ಧಾರವನ್ನು ಸರ್ಕಾರ ತೆಗೆದುಕೊಳ್ಳಬಾರದು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.ಸ್ನಾತಕೋತ್ತರ ಕೇಂದ್ರದ ವಿದ್ಯಾರ್ಥಿಗಳಾದ ಅಣ್ಣಪ್ಪ, ಚೇತನ, ಮಧು, ರಾಜೇಂದ್ರ, ತೇಜಸ್, ಕಾಂತ, ಅಮೃತ, ವೀಣಾ, ಸಂತೋಷ್, ಸುಮಾ ಮೊದಲಾದವರು ಹಾಜರಿದ್ದರು.

ಅಂಚೆ ವಿಮಾಮೇಳ
ಹೊಸನಗರ: ಸಮಾಜದಲ್ಲಿ ತುಳಿತಕ್ಕೆ, ಅಲಕ್ಷ್ಯಕ್ಕೆ ಒಳಗಾದ ಬಡ ಗ್ರಾಮೀಣರ ಆರ್ಥಿಕ ಭದ್ರತೆಯೇಗ್ರಾಮೀಣ ಅಂಚೆ ವಿಮಾ ಯೋಜನೆಯ ಪ್ರಮುಖ ಗುರಿ ಆಗಿದೆ ಎಂದು ಅಂಚೆ ಅಧೀಕ್ಷಕ ಜಿ.ಸಿ. ಶ್ರೀನಿವಾಸ್ ಹೇಳಿದರು.

ಶುಕ್ರವಾರ ಸಮೀಪದ ಜಯನಗರದಲ್ಲಿ ತಾಲ್ಲೂಕುಮಟ್ಟದ ಗ್ರಾಮೀಣ ಅಂಚೆ ಜೀವವಿಮಾ ಮೇಳದಲ್ಲಿ ಮಾತನಾಡಿದ ಅವರು, ಯೋಜನೆಯನ್ನು ಕೊನೆ ಹಂತಕ್ಕೆ ತಲುಪಿಸುವ ಗುರುತರವಾದ ಜವಾಬ್ದಾರಿ ಅಂಚೆ ನೌಕರರ ಮೇಲಿದೆ ಎಂದರು.ಮೇಲಿನಬೆಸಿಗೆ ಗ್ರಾ.ಪಂ. ಅಧ್ಯಕ್ಷ ವೀರಭದ್ರಪ್ಪ ಗೌಡ ಮೇಳಕ್ಕೆ ಚಾಲನೆ ನೀಡಿ ಶುಭ ಕೋರಿದರು.

ಸಾಗರ ವಿಭಾಗ ಅಂಚೆ ನಿರೀಕ್ಷಕ ಡಿ. ಗಣೇಶ್ ಮೇಳದ ಅಧ್ಯಕ್ಷತೆ ವಹಿಸಿ, 1996ರಲ್ಲಿ ಆರಂಭವಾದ ಅಂಚೆ ವಿಮಾ ಯೋಜನೆಯು ಇಂದು ದೇಶದಲ್ಲಿಯೇ 2ನೇ ಸ್ಥಾನದಲ್ಲಿದೆ ಎಂದರು.
 ತಾ.ಪಂ. ಸದಸ್ಯ ಶುಭಕರ, ಕಾರ್ಯದರ್ಶಿ ಗಂಗಾಧರ್, ಅಂಚೆ ನೌಕರರ ಸಂಘದ ಶಶಿಧರ್, ನಾಗರಾಜ್, ಪ್ರಭಾಕರ್, ಪುರಂದರ್, ಪ್ರಕಾಶ್ ಹಾಜರಿದ್ದರು.ಎಸ್.ಎಂ. ಲೀಲಾವತಿ ಪ್ರಾರ್ಥಿಸಿದರು. ವಡ್ಡಿನಬೈಲು ವೆಂಕಟೇಶ್ ಸ್ವಾಗತಿಸಿದರು.   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT