ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರದ ವಿರುದ್ಧ ದಾಳಿಂಬೆ ಬೆಳೆಗಾರರ ಆಕ್ರೋಶ

Last Updated 2 ಅಕ್ಟೋಬರ್ 2012, 5:00 IST
ಅಕ್ಷರ ಗಾತ್ರ

ಗಜೇಂದ್ರಗಡ: ದಾಳಿಂಬೆ ಹಣ್ಣು ಬೆಳೆ ಗಾರರ ಸಾಲ ಮೂರು ಪಟ್ಟಾದರೂ ರಾಜ್ಯ ದಾಳಿಂಬೆ ಬೆಳೆಗಾರರ ಸಾಲ ಮನ್ನಾಕ್ಕೆ ರಾಜ್ಯ ಸರ್ಕಾರ ಸಕಾರಾತ್ಮಕ ರೀತಿಯಲ್ಲಿ ಸ್ಪಂದಿಸದಿರುವುದರಿಂದ ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಗದಗ ಜಿಲ್ಲಾ ದಾಳಿಂಬೆ ಬೆಳೆಗಾರ ಸಂಘದ ಅಧ್ಯಕ್ಷ ವೀರನಗೌಡ ಗೌಡರ ಆಕ್ರೋಶ ವ್ಯಕ್ತಪಡಿಸಿದರು.

ಇಲ್ಲಿನ ಪರಿವೀಕ್ಷಣಾ ಮಂದಿರದಲ್ಲಿ ಜಿಲ್ಲಾ ದಾಳಿಂಬೆ ಬೆಳೆಗಾರರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಾಂಪ್ರದಾಯಿಕ ಕೃಷಿ ಮಾಡಿ ಕೊಂಡು ನೆಮ್ಮದಿಯ ಬದುಕು ಸಾಗಿ ಸುತ್ತಿದ್ದ ಜಿಲ್ಲೆಯ ರೈತರಿಗೆ ದಾಳಿಂಬೆ ಹಣ್ಣು ಬೆಳೆಯುವಂತೆ ದುಂಬಾಲು ಬಿದ್ದ ರಾಷ್ಟ್ರೀಕೃತ ಬ್ಯಾಂಕುಗಳು ಒತ್ತಾಯ ಪೂರ್ವಕವಾಗಿ ರೈತರನ್ನು ದಾಳಿಂಬೆ ಬೆಳೆಯುವಂತೆ ಪ್ರೇರೇಪಿಸಿ ದರು.

ಆದರೆ, ಸಾಲ ಮಾಡಿ ದಾಳಿಂಬೆ ಬೆಳೆದ ರೈತನಿಗೆ ಮಹಾಮಾರಿ ದುಂಡಾಣು ಅಂಗರೋಗ ದಾಳಿಂಬೆ ಬೆಳೆಯನ್ನು ಇನ್ನಿಲ್ಲದ ರೀತಿ ಕಾಡಿ ದಾಳಿಂಬೆ ಫಸಲು ಬೆಳೆಗಾರನ ಕೈಸೇರದಂತೆ ಮಾಡಿತು. ದುಂಡಾಣು ರೋಗದ ಬಗ್ಗೆ ಕೃಷಿ ವಿಶ್ವವಿದ್ಯಾಲ ಯದ ತಜ್ಞರು `ರಾಜ್ಯದ 13 ಜಿಲ್ಲೆಗಳ ಭೌಗೋಳಿಕ ಕ್ಷೇತ್ರ ದಾಳಿಂಬೆ ಬೆಳೆ ಯಲು ಯೋಗ್ಯವಿಲ್ಲ ಎಂದು ಬೆಳೆಗಾ ರರಿಗೆ ಸಲಹೆ ನೀಡಿದ್ದರು. ಆದರೂ ಕೂಡಾ ಬ್ಯಾಂಕ್‌ಗಳ ಸಾಲವನ್ನು ನಂಬಿ ಅನೇಕರು ಬೆಳೆ ಬೆಳೆದು ಬೀದಿ ಪಾಲಾಗುವ ಸ್ಥಿತಿ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಹಿನ್ನೆಲೆಯಲ್ಲಿ ಬೆಳೆಗಾರರು ಬೀದಿಗಿಳಿದು ಹೋರಾಟಕ್ಕೆ ಮುಂದಾ ಗುವುದಕ್ಕಿಂತ ಪೂರ್ವದಲ್ಲಿ ಬೆಳೆಗಾರರ ಸಮಸ್ಯೆ ನಿವಾರಣೆಗೆ ಸರ್ಕಾರಗಳು ಸ್ಪಂದಿಸಬೇಕು ಎಂದರು.

ರಾಜ್ಯ ಸರ್ಕಾರ ಕಾಫಿ ಬೆಳೆಗಾರರನ್ನು ಪರಿಗಣಿಸುವ ರೀತಿಯಲ್ಲಿಯೇ ದಾಳಿಂಬೆ ಬೆಳೆಗಾರರನ್ನು ಕಾಣಬೇಕು ಎಂದು ಬೆಳೆಗಾರರು ಸಾಕಷ್ಟು ಬಾರಿ ಮನವಿ ಮಾಡಿದ್ದರೂ ಸ್ಪಂದಿಸಿಲ್ಲ. ಸದ್ಯ ಚುನಾವಣೆಯನ್ನು ಗಮನದಲ್ಲಿಟ್ಟು ಕೊಂಡು ನೆಪ ಮಾತ್ರಕ್ಕೆ ಎನ್ನುವಂತೆ ರಾಜ್ಯ ಸರ್ಕಾರ ದಾಳಿಂಬೆ ಬೆಳೆಗಾರರ ಸಾಲ ಮನ್ನಾಮಾಡುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವಣೆ ಸಲ್ಲಿಸಿದೆ. ಸರ್ಕಾರದ ಕಪಟ ರೈತ ಪ್ರೇಮ ಅರ್ಥವಾಗಿದೆ ಎಂದು ಕಿಡಿ ಕಾರಿದರು.

ಶಶಿಧರ ಹೂಗಾರ, ಅಜಿತ್ ವಂಟ ಕುದರಿ, ಲೋಕಪ್ಪ ರಾಠೋಡ್, ಕುಬೇರ ಹೂಗಾರ, ಅಂಬಾಸಾ ರಾಯ ಬಾಗಿ, ಬಸಣ್ಣ ಕಡಬಲಕಟ್ಟಿ, ಮಲ್ಲಿಕಾ ರ್ಜುನ ಅವಾರಿ, ಗಿರೀಶ ವರ್ಣೇಕರ್ ಮುಂತಾದವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT