ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರದ ವಿರುದ್ಧ ಪ್ರತಿಭಟನೆ

Last Updated 6 ಫೆಬ್ರುವರಿ 2011, 10:40 IST
ಅಕ್ಷರ ಗಾತ್ರ

ಹಿರೇಕೆರೂರ: ‘ಕಾಂಗ್ರೆಸ್ ಸರ್ಕಾರ ಬಡವರಿಗೆ ನೀಡಿದ್ದ ಭಾಗ್ಯಜ್ಯೋತಿ ವಿದ್ಯುತ್ ಸಂಪರ್ಕವನ್ನು ಕಡಿತ ಗೊಳಿಸಲು ಬಿಜೆಪಿ ಸರ್ಕಾರ ಮುಂದಾಗಿದೆ. ಒಂದೇ ಬಾರಿ 15ರಿಂದ 20 ಸಾವಿರ ರೂಪಾಯಿ ಬಿಲ್ ನೀಡಿ ಬಡವರನ್ನು ಸಂಕಷ್ಟಕ್ಕೆ ದೂಡಿದ್ದು, ಭಾರಿ ಭ್ರಷ್ಟಾಚಾರದಲ್ಲಿ ತೊಡಗಿ ರಾಜ್ಯದ ಜನತೆಯ ಹಿತವನ್ನು ಸಂಪೂರ್ಣ ಕಡೆಗಣಿಸಿದೆ’ ಎಂದು ಶಾಸಕ ಬಿ.ಸಿ.ಪಾಟೀಲ ಆರೋಪಿಸಿದರು.

ರಾಜ್ಯ ಸರ್ಕಾರದ ವೈಫಲ್ಯಗಳನ್ನು ಖಂಡಿಸಿ ಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷದ ತಾಲ್ಲೂಕು ಘಟಕ ಶನಿವಾರ ತಹಸೀಲ್ದಾರ ಕಚೇರಿಗೆ ಬೀಗಹಾಕಿ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಅವರು  ಮಾತನಾಡಿದರು.

‘ಬಿಲ್ ಪಾವತಿಸದ ಭಾಗ್ಯಜ್ಯೋತಿ ಸಂಪರ್ಕವನ್ನು ಕಡಿತಗೊಳಿಸುವುದನ್ನು ತಕ್ಷಣ ನಿಲ್ಲಿಸಬೇಕು. ಇಲ್ಲದಿದ್ದರೆ ಸಂಪರ್ಕ ಕಡಿತ ಮಾಡಲು ಬರುವ ಅಧಿಕಾರಿಗಳನ್ನು ಕೂಡಿ ಹಾಕಲಾಗುವುದು’ ಎಂದು ಎಚ್ಚರಿಕೆ ನೀಡಿದ ಅವರು ಜನತೆಗೆ ಸ್ಪಂದಿಸದ ಇಲಾಖೆಯ ಕಚೇರಿ ಎದುರು ಪ್ರತಿವಾರ ಪ್ರತಿಭಟನೆ ನಡೆಸಲಾಗುವುದು’ ಎಂದು ಎಚ್ಚರಿಸಿದರು.
‘ಪಟ್ಟಣಕ್ಕೆ ತುಂಗಭದ್ರಾ ನದಿಯಿಂದ ಕುಡಿಯುವ ನೀರು ಪೂರೈಸುವ ಕಾಮಗಾರಿ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕಳೆದ 5 ವರ್ಷಗಳಿಂದ ನಿಧಾನಗತಿಯಲ್ಲಿ ಸಾಗಿದೆ. ತುಂಗಾ ಮೇಲ್ದಂಡೆ ಯೋಜನೆಗಾಗಿ ಭೂಮಿ ಕಳೆದುಕೊಂಡ ರೈತರಿಗೆ ಇಲ್ಲಿಯವರೆಗೆ ಪರಿಹಾರ ವಿತರಣೆ ಆಗಿಲ್ಲ. ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಪೊಲೀಸರು ದೌರ್ಜನ್ಯ ನಡೆಸುತ್ತಿದ್ದಾರೆ’ ಎಂದು ಅವರು ಆರೋಪಿಸಿದರು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಮನೋಹರ ತಹಸೀಲ್ದಾರ ಮಾತನಾಡಿ, ರಾಜ್ಯ ಬಿಜೆಪಿ ಸರ್ಕಾರ ಭ್ರಷ್ಟಾಚಾರದ ಕೂಪದಲ್ಲಿ ಮುಳುಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಸ್ವತಃ ಭ್ರಷ್ಟಾಚಾರದಲ್ಲಿ ತೊಡಗಿದ್ದು, ಕ್ರಿಮಿನಲ್ ಮೊಕದ್ದಮೆ ದಾಖಲಾದರೂ ಕುರ್ಚಿಗೆ ಅಂಟಿಕೊಂಡಿದ್ದಾರೆ ಎಂದು ದೂರಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ದೊಡ್ಡಗೌಡ ಸಿ.ಪಾಟೀಲ, ಎಸ್.ಕೆ. ಕರಿಯಣ್ಣನವರ, ತಾ.ಪಂ. ಸದಸ್ಯ ಆರ್.ಎನ್.ಗಂಗೋಳ, ಜಿ.ಪಂ. ಮಾಜಿ ಸದಸ್ಯ ಪಿ.ಡಿ.ಬಸನಗೌಡ್ರ, ಬಿ.ಎನ್.ಬಣಕಾರ, ಹನುಮಂತಪ್ಪ ಮೇಗಳಮನಿ, ಬಸವರಾಜ ಕಾಲ್ವೀಹಳ್ಳಿ, ಜಗದೀಶ ಲಕ್ಕನಗೌಡ್ರ, ಮಂಜುನಾಥ ಮುರುಡಕ್ಕನವರ, ಪೂಮ್ಯಾನಾಯ್ಕ, ಬಿದ್ದಾಡೆಪ್ಪ ಉಕ್ಕುಂದ ಮಾತನಾಡಿದರು.

ಪ.ಪಂ. ಅಧ್ಯಕ್ಷ ದುರಗೇಶ ತಿರಕಪ್ಪನವರ, ಉಪಾಧ್ಯಕ್ಷ ರಾಮಣ್ಣ ಗುಡ್ಡಳ್ಳಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಹನುಮವ್ವ ದೊಡ್ಡಮನಿ, ಎಸ್.ಬಿ. ತಿಪ್ಪಣ್ಣನವರ, ಪ.ಪಂ. ಸದಸ್ಯರಾದ ಶಂಭು ತಂಬಾಕದ, ಕುಸುಮಾ ವರದ, ಶಂಭು ತಂಬಾಕದ, ಅನಸೂಯಾ ಬಾಳಂಬೀಡ, ಪರಮೇಶಪ್ಪ ಗವಿಯಪ್ಪನವರ, ಬಸನಗೌಡ ಬಂಗೇರ, ಬಸವರಾಜ ಎಲ್ಲಕ್ಕನವರ, ಚನ್ನಬಸಪ್ಪ ಅಜ್ಜಪ್ಪನವರ, ರಾಮಜ್ಜಿ ಕಡೂರ, ಜಬಿ ಲೋಹಾರ, ಪ್ರಕಾಶಗೌಡ ಪಾಟೀಲ, ಮರಿಗೋಣೆಪ್ಪ ದೂಳಣ್ಣನವರ, ಸುಭಾಸ ಕುರುಬರ, ಕರೇಗೌಡ ಸಣ್ಣಕ್ಕಿ, ಶೇಖರ ಮಾಸೂರ ಮೊದಲಾದವರು ಹಾಜರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT