ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರದ ಸಾಮೂಹಿಕ ವೈಫಲ್ಯ

Last Updated 2 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): 2 ಜಿ ತರಂಗಾಂತರ ಹಂಚಿಕೆ ಪ್ರಕರಣದ ಸುಪ್ರೀಂಕೋರ್ಟ್ ತೀರ್ಪು ಭಾರಿ ಹಗರಣವನ್ನು ಬಯಲುಗೊಳಿಸಿದೆ. ಈ ಸಂಬಂಧ ಮಹಾ ಲೆಕ್ಕಪರಿಶೋಧಕರು ಮತ್ತು ಕೇಂದ್ರ ಜಾಗೃತ ಆಯೋಗ ನೀಡಿದ್ದ ಎಚ್ಚರಿಕೆಗಳನ್ನು ಉಪೇಕ್ಷಿಸಿ ಭ್ರಷ್ಟಾಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದು ಸರ್ಕಾರದ ಸಾಮೂಹಿಕ ವೈಫಲ್ಯವನ್ನು ಎತ್ತಿ ತೋರಿಸುತ್ತದೆ ಎಂದು ಅರ್ಜಿದಾರ ಸುಬ್ರಮಣಿಯನ್ ಸ್ವಾಮಿ ಪ್ರತಿಕ್ರಿಯಿಸಿದ್ದಾರೆ.

ಹಗರಣಕ್ಕೆ ಸಂಬಂಧಿಸಿದಂತೆ ಪಿ.ಚಿದಂಬರಂ ಅವರನ್ನು ವಿಚಾರಣೆಗೆ ಒಳಪಡಿಸಬೇಕೋ ಅಥವಾ ಬೇಡವೋ ಎಂಬುದು ಅಧೀನ ನ್ಯಾಯಾಲಯಕ್ಕೆ ಬಿಟ್ಟ ವಿಷಯ ಎಂದೂ ಹೇಳಿದ್ದಾರೆ.

2 ಜಿ ತರಂಗಾಂತರ ಪರವಾನಗಿಯನ್ನು ಅಕ್ರಮವಾಗಿ ಹಂಚಿ ಭ್ರಷ್ಟಾಚಾರ ಎಸಗಲಾಗಿತ್ತು. ಆದರೆ ಸಚಿವ ಸಂಪುಟ ಸಭೆ ಕರೆದು ಪರವಾನಗಿಗಳನ್ನು ರದ್ದುಗೊಳಿಸಬೇಕೆಂದು ಯಾರಿಗೂ ಅನಿಸಲೇ ಇಲ್ಲ ಎಂದು ಸ್ವಾಮಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಮೂವರು ನ್ಯಾಯಮೂರ್ತಿಗಳು ನೀಡಬಹುದಾದ ಅತ್ಯುತ್ತಮವಾದ ಹಾಗೂ ಇಡೀ ರಾಷ್ಟ್ರವೇ ಸುಪ್ರೀಂಕೋರ್ಟ್ ಬಗ್ಗೆ ಹೆಮ್ಮೆ ಪಡಬಹುದಾದ ತೀರ್ಪು ಇದು ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT