ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಬಸ್‌ನಲ್ಲಿ ಕಾಣಿಸಿಕೊಂಡ ಬೆಂಕಿ

Last Updated 5 ಡಿಸೆಂಬರ್ 2013, 9:13 IST
ಅಕ್ಷರ ಗಾತ್ರ

ಬಳ್ಳಾರಿ: ತಾಲ್ಲೂಕಿನ ಮೋಕಾ ಗ್ರಾಮದಿಂದ ಬಳ್ಳಾ­ರಿಗೆ ಆಗಮಿಸುತ್ತಿದ್ದ ಸಾರಿಗೆ ಸಂಸ್ಥೆಯ ಬಸ್‌ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡ ಘಟನೆ ಬುಧವಾರ ಮಧ್ಯಾಹ್ನ  ಸಂಭವಿಸಿದೆ.

ಕೆ.ಎ–32, ಎಫ್‌–1106 ಸಂಖ್ಯೆಯ ಈ ಬಸ್‌, ಮೋಕಾ ಬಸ್‌ ನಿಲ್ದಾಣದಿಂದ ಬಳ್ಳಾರಿಯತ್ತ ಹೊರಡಲು ಅಣಿಯಾಗುತ್ತಿ­ದ್ದಂತೆಯೇ, ಚಾಲಕನ ಪಕ್ಕದಲ್ಲಿದ್ದ ಎಂಜಿನ್‌ನಲ್ಲಿ ದಿಢೀರ್‌ ಬೆಂಕಿ ಕಾಣಿಸಿಕೊಂಡಿತು. ತೀವ್ರ ಹೊಗೆ ಕಾಣಿಸಿ­ಕೊಂಡಿದ್ದರಿಂದ ಕೂಡಲೇ ಎಚ್ಚೆತ್ತುಕೊಂಡ ಚಾಲಕ ಬಸ್‌ನ ಎಂಜಿನ್‌ ಸ್ಥಗಿತಗೊಳಿಸಿ, ನೀರು ಸಿಂಪ­ಡಿಸಿದ್ದರಿಂದ ಹೆಚ್ಚಿನ ಅನಾಹುತ ಸಂಭವಿಸಲಿಲ್ಲ. ಬಸ್‌ನಲ್ಲಿ ಕೇವಲ ಐವರು ಪ್ರಯಾಣಿಕರು ಮಾತ್ರ ಇದ್ದರು.

ಎಂಜಿನ್‌ನಲ್ಲಿ ಹೊಗೆ ಕಾಣಿಸಿ­ಕೊಂಡಿದ್ದರಿಂದ ಅವರೂ ಕೆಳಗಿಳಿದು ನೀರು ತಂದು ಸಿಂಪಡಿಸಿ ಚಾಲಕನಿಗೆ ಸಹಾಯ ಮಾಡಿದರು. ಇತ್ತೀಚೆಗೆ ಆಂಧ್ರದ ಪಾಲೆಂ ಹಾಗೂ ರಾಜ್ಯದ ಹಾವೇರಿ ಸಮೀಪ ನಡೆದಿರುವ ಬೆಂಕಿ ಆಕಸ್ಮಿಕ­ದಂತೆ ಇಲ್ಲಿ ಯಾವುದೇ ದುರ್ಘಟನೆ ನಡೆದಿಲ್ಲ. ಎಂಜಿನ್‌­ನಲ್ಲಿ ದೋಷ ಇದ್ದುದರಿಂದ ಹೊಗೆ ಕಾಣಿಸಿ­ಕೊಂಡಿದೆ. ಚಾಲಕ ಹಾಗೂ ಪ್ರಯಾ­ಣಿಕರ  ಸಮಯಪ್ರಜ್ಞೆಯಿಂದ ಅನಾಹುತ ಆಗಿಲ್ಲ ಎಂದು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಳ್ಳಾರಿ ವಿಭಾಗೀಯ ನಿಯಂತ್ರಣಾಧಿಕಾರಿ ದುರ್ಗಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ಘಟನೆ ನಡೆದ ಕೂಡಲೇ ಬಳ್ಳಾರಿಯಿಂದ ಮೆಕ್ಯಾನಿಕ್‌ ಸಿಬ್ಬಂದಿ ಸ್ಥಳಕ್ಕೆ ತೆರಳಿ, ಅಗತ್ಯ ದುರಸ್ತಿ ಕಾರ್ಯ ಪೂರೈಸಿದ್ದಾರೆ. ಈ ಬಸ್‌ಗೆ ಎರಡು ಬಾಗಿಲುಗಳಿದ್ದು, ಬೆಂಕಿ ಕಾಣಿಸಿಕೊಂಡರೂ ಪ್ರಯಾಣಿಕರಿಗೆ ಅಪಾಯ ಇಲ್ಲ. ಬಸ್‌ ಅನ್ನು ಎಂದಿನಂತೆ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ  ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT