ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಶಾಲೆಯತ್ತ ಮಕ್ಕಳ ದಂಡು

Last Updated 28 ಜೂನ್ 2012, 9:00 IST
ಅಕ್ಷರ ಗಾತ್ರ

ಹಳೇಬೀಡು: ಖಾಸಗಿ ಶಾಲೆಗಳ ಆರ್ಭಟದಲ್ಲಿ ಮುಚ್ಚುವ ಸ್ಥಿತಿಯಲ್ಲಿದ್ದ ಸರ್ಕಾರಿ ಶಾಲೆಗಳತ್ತ ಈಗ ಪೋಷಕರ ಗಮನಹರಿಯುತ್ತಿದೆ ಎಂಬುದಕ್ಕೆ ಹಳೇಬೀಡಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಉತ್ತಮ ನಿದರ್ಶನ.

ಸಮವಸ್ತ್ರ ಧರಿಸಿದ ಮಕ್ಕಳು ಖಾಸಗಿ ಶಾಲೆಯ ಮಕ್ಕಳಿಗಿಂತ ಕಡಿಮೆ ಅಲ್ಲ ಎನ್ನುವಂತೆ ಲವಲವಿಕೆಯಿಂದ ಕಲಿಕೆಯಲ್ಲಿ ತೊಡಗಿದ್ದಾರೆ. ದುಪ್ಪಟ್ಟು ವೆಚ್ಚದ ಖಾಸಗಿ ಶಾಲೆಯ ಮಕ್ಕಳಿಗಿಂತ ನಾವೇನೂ ಕಡಿಮೆ ಅಲ್ಲ ಎಂಬಂತೆ ವಿದ್ಯಾರ್ಥಿಗಳು ಶಿಸ್ತು ಬೆಳೆಸಿಕೊಂಡಿದ್ದಾರೆ.

ಶಾಲೆಯಲ್ಲಿ ಪೂರ್ವ ಪ್ರಾಥಮಿಕ ಹಂತದಿಂದ 8ನೇ ತರಗತಿ ವರೆಗೆ ಕಲಿಯುವ ಅವಕಾಶವಿದೆ. 1ರಿಂದ 8ರ ವರೆಗೆ 350 ವಿದ್ಯಾರ್ಥಿಗಳು ಕಲಿಯು ತ್ತಿದ್ದಾರೆ. 1ರಿಂದ 7ನೇ ತರಗತಿ ವರೆಗೆ ಕಳೆದ ವರ್ಷ 310 ಇದ್ದ ವಿದ್ಯಾರ್ಥಿಗಳ ಸಂಖ್ಯೆ ಪ್ರಸಕ್ತ ವರ್ಷ 330ಕ್ಕೆ ಏರಿಕೆಯಾಗಿದೆ. ಎರಡು ವರ್ಷದ ಹಿಂದೆ ಶಾಲೆಯಲ್ಲಿ ಕೇವಲ 250 ವಿದ್ಯಾರ್ಥಿಗಳು ಮಾತ್ರ ಇದ್ದರು ಎಂಬುದು ಶಾಲೆ ಪ್ರಗತಿಯತ್ತ ಸಾಗುತ್ತಿದೆ ಎಂಬುದಕ್ಕೆ ಸಾಕ್ಷಿ.

ಕಳೆದ ವರ್ಷದಿಂದ 6ನೇ ತರಗತಿಯಿಂದ ಇಂಗ್ಲಿಷ್ ಮಾಧ್ಯಮ ಆರಂಭವಾಗಿದೆ. ಇಂಗ್ಲಿಷ್ ಮಾಧ್ಯಮ ವಿಭಾಗಕ್ಕೆ ಖಾಸಗಿ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳನ್ನು ಪೋಷಕರು ಕರೆತ ರುತ್ತಿದ್ದಾರೆ.  `ಶಾಲೆಯಲ್ಲಿ ಕಲಿಯುವ ಬಹುತೇಕ ಮಕ್ಕಳು ಹಿಂದುಳಿದ ವರ್ಗಕ್ಕೆ ಸೇರಿದ್ದಾರೆ. ಪರಿಶಿಷ್ಟ ಜನಾಂಗದ 150 ಮಕ್ಕಳು ಶಾಲೆಯಲ್ಲಿದ್ದಾರೆ~ ಎನ್ನುತ್ತಾರೆ ಪಂಚಾಯಿತಿ ಮಾಜಿ ಅಧ್ಯಕ್ಷ ನಿಂಗಪ್ಪ.

ದಾನಿಗಳ ಸಹಕಾರ: ಪ್ರಸಕ್ತ ವರ್ಷ ಆರಂಭವಾದ ಪೂರ್ವ ಪ್ರಾಥಮಿಕ ಶಾಲೆಯಲ್ಲಿ 60 ಮಕ್ಕಳು ಕಲಿಯುತ್ತಿದ್ದಾರೆ. ದಾನಿಗಳ ಸಹಕಾರದಿಂದ ಮಕ್ಕಳಿಗೆ ಆಟದ ವ್ಯವಸ್ಥೆ ಮಾಡಲಾಗಿದೆ. ಇಂಗ್ಲಿಷ್ ಭಾಷಾ ಜ್ಞಾನ ಹೆಚ್ಚಿಸಲು 1ರಿಂದ 4ನೇ ತರಗತಿಯಲ್ಲಿ ಕಲಿಯುವ ಮಕ್ಕಳಿಗೆ ಇಂಗ್ಲಿಷ್ ಕಲಿಕಾ ಪುಸ್ತಕವನ್ನು ದಾನಿಗಳ ನೆರವಿನಿಂದ ವಿತರಿಸಲಾಗಿದೆ.
ಶಿಕ್ಷಕರ ಕೊರತೆ: ಮಕ್ಕಳ ಸಂಖ್ಯೆ ಹೆಚ್ಚಾಗಿದ್ದರಿಂದ 6 ಹಾಗೂ 7ನೇ ತರಗತಿಗೆ ಹೆಚ್ಚುವರಿ ವಿಭಾಗಗಳ ರಚನೆ ಮಾಡಲಾಗಿದೆ. 1ರಿಂದ 8ರ ವರೆಗೆ ಶಾಲೆಯಲ್ಲಿ 10 ತರಗತಿಗಳು ನಡೆಯುತ್ತಿದೆ. ಎಂಟು ಮಂದಿ ಶಿಕ್ಷಕರು ಪ್ರಯಾಸದಿಂದ ತರಗತಿ ನಿರ್ವಹಣೆ ಮಾಡುತ್ತಿದ್ದಾರೆ, ಸಾರ್ವಜನಿಕ ಶಿಕ್ಷಣ ಇಲಾಖೆ ನಾಲ್ವರು ಹೆಚ್ಚುವರಿ ಶಿಕ್ಷಕರನ್ನು ನೇಮಕ ಮಾಡಬೇಕು ಎಂಬುದು ಪೋಷಕರ ಬೇಡಿಕೆ.

`ಗುಣಮಟ್ಟದ ಶಿಕ್ಷಣ ನೀಡುತ್ತಿದ್ದೇವೆ. ಮಕ್ಕಳ ಪ್ರಗತಿಗೆ ಪೋಷಕರು ಶಾಲೆಯ ಶಿಕ್ಷಕವರ್ಗ ದೊಂದಿಗೆ ಸಹಕಾರ ನೀಡಿದರೆ, ಸರ್ಕಾರಿ ಶಾಲೆಯ ಮಕ್ಕಳು ಉನ್ನತ ವ್ಯಾಸಂಗದೊಂದಿಗೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು~ ಎನ್ನುತ್ತಾರೆ ಮುಖ್ಯಶಿಕ್ಷಕಿ ಶಾಂತಮ್ಮ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT