ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ವಧರ್ಮ ಸಮ್ಮೇಳನ ಆರಂಭ

Last Updated 20 ಡಿಸೆಂಬರ್ 2012, 8:29 IST
ಅಕ್ಷರ ಗಾತ್ರ

ಮೂಡಲಗಿ: ಇಲ್ಲಿಗೆ ಸಮೀಪದ ಹಳ್ಳೂರ ಗ್ರಾಮದ ಶಂಕರೆಪ್ಪ ಸಂತಿ ಪ.ಪೂ. ಕಾಲೇಜಿನ ಆವರಣದಲ್ಲಿ ಏರ್ಪಡಿಸಿರುವ ಮಹಾರುದ್ರ ಯಜ್ಞ ಹಾಗೂ ಸರ್ವಧರ್ಮ ಸಮ್ಮೇಳನಕ್ಕೆ ದೇಶದ ವಿವಿಧೆಡೆಯಿಂದ ಆಗಮಿಸಿದ ಧರ್ಮಗುರುಗಳು, ಋಷಿಗಳಿಂದ ಬುಧಾರ ವಿಧ್ಯುಕ್ತ ಚಾಲನೆ ದೊರೆಯಿತು.

ಬೆಳಿಗ್ಗೆ ಗ್ರಾಮ ದೇವತೆ ಮಹಾಲಕ್ಷ್ಮೀದೇವಿ ದೇವಸ್ಥಾನದಿಂದ ಕುಂಭಮೇಳವು ವಿವಿಧ ವಾದ್ಯಗಳ ಮೆರವಣಿಗೆಯೊಂದಿಗೆ ಸಾಗಿ ಯಜ್ಞ ನಡೆಯುವ ಮಂಟಕ್ಕೆ ಬಂದಿತು. ಒಂಬತ್ತು ಯಜ್ಞ ಕುಂಡಗಳಿಗೆ ವಿವಿಧ ಧರ್ಮಗುರುಗಳು ವಿಧಿವಿಧಾನಗಳ ಮೂಲಕ ಪೂಜೆ ಸಲ್ಲಿಸಿ, ಮಂತ್ರಘೋಷ ಹೇಳಿ ಚಾಲನೆ ನೀಡಿದರು. ನಂತರ ಜರುಗಿದ ಸರ್ವಧರ್ಮ ಸಮ್ಮೇಳನವನ್ನು ದೆಹಲಿಯ ಮಹಾಮಂಡಲೇಶ್ವರ ರಮತಾಯೋಗಿ, ನಾಂದಣಿಯ ಜಿನಸೇನ ಭಟ್ಟಾರಕ ಪಟ್ಟಾಚಾರ್ಯರು ಉದ್ಘಾಟಿಸಿದರು.

ಸಮ್ಮುಖ ವಹಿಸಿದ್ದ ಮುಚಳಂಬಾದ ಪ್ರಣವಾನಂದ ಸ್ವಾಮೀಜಿ, `ಯಜ್ಞವು ಮನುಷ್ಯ ಉತ್ತಮ ದಾರಿಯಲ್ಲಿ ನಡೆಯಲು ಪ್ರೇರಣೆ ನೀಡುತ್ತದೆ' ಎಂದರು. ಗುಜರಾತದ ಕಬೀರಜೀ ಮಾತನಾಡಿದರು. ಪಂಜಾಬದ ಬಾಲಯೋಗಿ ಸಂತ ಸ್ವತಂತ್ರನಾಮಧಾರಿ ಸಾನ್ನಿಧ್ಯ ವಹಿಸಿದ್ದರು. ನಾಂದಣಿಯ ಜಿನಸೇನ ಭಟ್ಟಾರಕ ಪಟ್ಟಾಚಾರ್ಯರು ನೇತೃತ್ವ ವಹಿಸಿದ್ದರು, ಬಾಗಲಕೋಟೆಯ ರಾಮಾರೂಢ ಸ್ವಾಮೀಜಿ, ಆಂಧ್ರದ ಡಾ. ಸಿದ್ಧೇಶ್ವರ ಸ್ವಾಮೀಜಿ, ಬೆಂಗಳೂರಿನ ರಾಜೇಶ್ವರ ಶಿವಾಚಾರ್ಯರು, ಬಬಲಾದದ ಡಾ. ಶಿವಪುತ್ರ ಸ್ವಾಮೀಜಿ ಉಪಸ್ಥಿತರಿದ್ದರು.

ಸಂಘಟಕ ಡಾ. ಅಲ್ಲಮಪ್ರಭು ಸ್ವಾಮೀಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿ.ಪಂ. ಅಧ್ಯಕ್ಷೆ ಶಾಂತಾ ಕಲ್ಲೋಳಕರ, ಅಶೋಕ ಪೂಜಾರಿ, ಶ್ಯಾಮಾನಂದ ಪೂಜಾರಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT