ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ವಧರ್ಮೀಯರ ಸಮರ್ಪಣೆ: ದೇಶಕ್ಕೆ ಸ್ವಾತಂತ್ರ್ಯ

Last Updated 16 ಅಕ್ಟೋಬರ್ 2012, 6:15 IST
ಅಕ್ಷರ ಗಾತ್ರ

ಧಾರವಾಡ: `ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡು ವಾಗ ತನು, ಮನ, ಧನವನ್ನು ಸರ್ವಧರ್ಮೀಯರು ಸಮರ್ಪಿಸಿದ್ದರಿಂದಲೇ ನಮ್ಮ ದೇಶ ಗುಲಾಮರ ಬೇಡಿಗಳಿಂದ ಬಿಡುಗಡೆಗೊಂಡಿತು~ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.

ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ಸಭಾಭವನದಲ್ಲಿ ಕಲಾ ಸಂಗಮದ ವತಿಯಿಂದ ಭಾನುವಾರ ಆಯೋಜಿಸಿದ್ದ, ಮಹ್ಮದಅಲಿ ಗೂಡುಬಾಯಿ ಅವರು ಅನುವಾದಿಸಿದ `ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮುಸ್ಲಿಮರು~ ಎಂಬ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.

`ದೇಶದ ಸ್ವಾತಂತ್ರ್ಯಕ್ಕಾಗಿ ಬಲಿದಾನಗೈದ ಹೋರಾಟಗಾರರ ಜೀವನ ಕಥನವನ್ನು ಇಂದಿನ ಯುವ ಪೀಳಿಗೆಗೆ ಪರಿಚಯಿಸುವ ದೃಷ್ಟಿಯಿಂದ ಪಠ್ಯದಲ್ಲಿ ಅಳವಡಿಸಬೇಕಿದೆ~ ಎಂದು ಅವರು ಹೇಳಿದರು.

ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಲಿಂಗರಾಜ ಅಂಗಡಿ ಮಾತನಾಡಿ, `ದೇಶಕ್ಕಾಗಿ ರಕ್ತ ಹರಿಸಿದವರಲ್ಲಿ, ಪ್ರಾಣ ನೀಡಿದವರಲ್ಲಿ ಹಾಗೂ ಗಲ್ಲಿಗೇರಿದವರಲ್ಲಿ ಮುಸ್ಲಿಮರದ್ದೂ ಬಹುದೊಡ್ಡ ಪಾತ್ರವಿದೆ. ದೇಶಪ್ರೇಮ ಪ್ರಶ್ನಿಸುವವರಿಗೆ ಈ ಕೃತಿ ಕನ್ನಡಿ ಹಿಡಿದಂತಾಗಿದೆ~ ಎಂದರು.

ಹೃದಯರೋಗ ತಜ್ಞ ಡಾ.ಇಕ್ಬಾಲ್ ಶೇಖ್ ಮಾತನಾಡಿ, `ಈ ದೇಶ ನಮ್ಮದು. ನಾವು ಇಲ್ಲಿಯೇ ಹುಟ್ಟಿ ಇಲ್ಲಿಯೇ ಬೆಳೆದವರು. ನಮ್ಮ ಪೂರ್ವಜರು ಇಲ್ಲಿಯೇ ಹುಟ್ಟಿ ಇಲ್ಲಿಯೇ ಬೆಳೆದವರು. ಸಂಶಯದ ದೃಷ್ಟಿಯಿಂದ ಪರಸ್ಪರ ದ್ವೇಷಭಾವನೆ ಬೆಳೆಸಿಕೊಳ್ಳುವುದನ್ನು ಬಿಟ್ಟು ನಾವೆಲ್ಲ ಒಂದು ಎಂಬ ಭಾವನೆ ಬೆಳೆಸಿಕೊಂಡಲ್ಲಿ ನಮ್ಮ ದೇಶವನ್ನು ರಕ್ಷಿಸಬಹುದು~ ಎಂದರು.

ಹಿಂದಿ ಚಿತ್ರನಟ ಹಾಗೂ ಗಾಯಕ ಪಂಕಜ್ ರೈನಾ ಮಾತನಾಡಿ, `ಅನ್ಯಭಾಷೆಯಲ್ಲಿದ್ದ ಅಮೂಲ್ಯ ಕೃತಿ ಗಳೆಲ್ಲ ಆಯಾ ರಾಜ್ಯದ ಭಾಷೆಯಲ್ಲಿ ಪ್ರಕಟಗೊಂಡಲ್ಲಿ ಸಾಹಿತ್ಯ ಕ್ಷೇತ್ರ ಶ್ರೀಮಂತಗೊಳ್ಳುತ್ತದೆ~ ಎಂದರು. ಸಾಹಿತಿ ಮೋಹನ ನಾಗಮ್ಮನವರ ಅಧ್ಯಕ್ಷತೆ ವಹಿಸಿದ್ದರು.  ಫಕ್ಕೀರವ್ವಾ ಗುಡಿಸಾಗರ ಅವರಿಗೆ, ಪಂ.ಬಸವರಾಜ ಮನ್ಸೂರ ಸಂಸ್ಥೆ ವತಿಯಿಂದ  ಸನ್ಮಾನಿಸಲಾಯಿತು. 

ಅನೀಸ್ ಬಾರೂದವಾಲೆ, ಹಾಫೀಜಾ ಗೂಡು ಬಾಯಿ, ಎಂ.ಎಸ್.ಇನಾಂದಾರ, ಹುಂಡೇಕಾರ, ಅಕ್ಬರ್ ಬೆಳಗಾಂವಕರ, ಯಕ್ಕೇರಪ್ಪ ನಡುವಿನಮನಿ, ಇರ್ಷ್ಯಾದ ಬಿಸ್ತಿ ಶಿವಾನಂದ ಅಮರಶೆಟ್ಟಿ, ರಫೀಕ್ ತಡಕೋಡ, ಬಿ.ಎಚ್.ಮೋರೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT