ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ವಾನುಮತಕ್ಕೆ ಸಮಾಜವಾದಿ ಪಕ್ಷ ಅಡ್ಡಿ

ಲೋಕಪಾಲ ಇಂದು ಅಂಗೀಕಾರ ಸಾಧ್ಯತೆ
Last Updated 16 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ರಾಜ್ಯಸಭೆ­ಯಲ್ಲಿ ಮಂಗಳವಾರ ಲೋಕಪಾಲ ಮಸೂ­ದೆಯ ಚರ್ಚೆ ನಿಗದಿಯಾಗಿದೆ. ಸೋಮ­­ವಾರ ನಡೆದ ಸರ್ವಪಕ್ಷ ಸಭೆಯಲ್ಲಿ ಬಹುತೇಕ ಸರ್ವಾನುಮತ ರೂಪುಗೊಂಡಿದೆ. ಆದರೆ ಯುಪಿಎಗೆ ಬಾಹ್ಯ ಬೆಂಬಲ ನೀಡುತ್ತಿರುವ ಸಮಾ­ಜ­ವಾದಿ ಪಕ್ಷ (ಎಸ್‌ಪಿ) ಮಸೂದೆ­ಯನ್ನು ವಿರೋಧಿಸುತ್ತಿದ್ದು, ಅಂಗೀಕಾ­ರಕ್ಕೆ ತೊಡಕಾಗಿ ಕಾಡುವ ಸಾಧ್ಯತೆಯೇ ಹೆಚ್ಚಾಗಿದೆ. 

  ಕೇಂದ್ರ ಸಚಿವ ಸಿಸ್‌ರಾಮ್‌ ಓಲಾ ನಿಧನದಿಂದಾಗಿ ಸೋಮವಾರ ಸದನ­ವನ್ನು ಮುಂದೂಡಲಾಯಿತು. ಹೀಗಾಗಿ ಸೋಮವಾರ ಚರ್ಚೆಗೆ ಬರಬೇಕಿದ್ದ ಮಸೂದೆಯನ್ನು ಮಂಗಳ­ವಾರ ಕೈಗೆತ್ತಿಕೊಳ್ಳ­ಲಾಗುವುದು.

  ಮಸೂದೆಗೆ ಸಂಬಂಧಿಸಿದ ಬಿಕ್ಕಟ್ಟು ಪರಿಹಾರಕ್ಕೆ ರಾಜ್ಯಸಭಾಧ್ಯಕ್ಷ ಹಮೀದ್‌ ಅನ್ಸಾರಿ ತುರ್ತಾಗಿ ಕರೆದ ಸರ್ವಪಕ್ಷ ಸಭೆಯನ್ನು ಸಮಾಜವಾದಿ ಪಕ್ಷ ಬಹಿಷ್ಕರಿಸಿತ್ತು. ಲೋಕಪಾಲ ಮಸೂದೆಯಿಂದಾಗಿ ಇಡೀ ನಿರ್ಧಾರ ಕೈಗೊಳ್ಳುವಿಕೆ ಪ್ರಕ್ರಿಯೆ ಸ್ಥಗಿತಗೊ­ಳ್ಳಲಿದೆ ಎಂಬ ಭೀತಿ ಸಮಾಜವಾದಿ ಪಕ್ಷ ಮಸೂದೆಯನ್ನು ವಿರೋಧಿಸುವು­ದಕ್ಕೆ ಕಾರಣವಾಗಿದೆ.

ಬಿಎಸ್‌ಪಿ ಮತ್ತು ಡಿಎಂಕೆ ಕೂಡ ಸಭೆಗೆ ಹಾಜರಾಗಿರಲಿಲ್ಲ. ಆದರೆ ಬಿಎಸ್‌ಪಿ ಮಸೂದೆಗೆ ಬಹಿರಂಗವಾಗಿ ಬೆಂಬಲ ಘೋಷಿಸಿದೆ.
ಸಭೆಗೆ ಹಾಜರಾಗಿದ್ದ ಎಲ್ಲ ಪಕ್ಷಗಳೂ ಮಸೂದೆ ಅಂಗೀಕಾರದ ಬಗ್ಗೆ ಸಹ­ಮತ ಹೊಂದಿದ್ದವು ಎಂದು ಸಭೆಯ ನಂತರ ಸಂಸದೀಯ ವ್ಯವಹಾರಗಳ ಸಚಿವ ಕಮಲ್‌ನಾಥ್‌ ಹೇಳಿದರು.

ಮಸೂದೆ ಅಂಗೀಕಾರಕ್ಕೆ ಬೆಂಬಲ ನೀಡುವಂತೆ ಮತ್ತು ಸದನದಲ್ಲಿ ಗದ್ದಲ ಉಂಟು ಮಾಡದಂತೆ ಎಲ್ಲ ಪಕ್ಷಗಳೂ ಸಮಾಜವಾದಿ ಪಕ್ಷದ ಮನವೊಲಿಸಲಿವೆ ಎಂದೂ ಕಮಲ್‌ನಾಥ್‌ ತಿಳಿಸಿದ್ದಾರೆ.

*ಶಿಷ್ಯನಿಗೆ ಅಣ್ಣಾ ತಿರು­ಗೇಟು
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT