ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ವೆ ಕಾರ್ಯ ಆದಷ್ಟು ಬೇಗ ಆಗಲಿ

Last Updated 8 ಸೆಪ್ಟೆಂಬರ್ 2013, 19:46 IST
ಅಕ್ಷರ ಗಾತ್ರ

ರಾಜ್ಯದಾದ್ಯಂತ ಕಂದಾಯ ಮತ್ತು ಅರಣ್ಯ ಜಮೀನುಗಳ ಗಡಿಯನ್ನು ನಿಖರವಾಗಿ ಗುರುತಿಸಲು ಜಂಟಿ ಸರ್ವೆ ಆರಂಭಿಸುವಂತೆ ಮುಖ್ಯಮಂತ್ರಿಯವರು ಎರಡೂ ಇಲಾಖೆಗಳ ಅಧಿಕಾರಿಗಳಿಗೆ ನಿರ್ದೇಶನ ನೀಡಿರುವುದು ಸ್ವಾಗತಾರ್ಹ (ಪ್ರ.ವಾ. ಸೆ. 5). ಈ ಕೆಲಸ ಹಿಂದೆಯೇ ಆಗಬೇಕಿತ್ತು. ಈಗ ಕಾಲ ಮಿಂಚಿದೆ. ಆದರೂ ಇದು ಕಾರ್ಯರೂಪಕ್ಕೆ ಬಂದರೆ ಈಗ ಇರುವ ಅಲ್ಪಸ್ವಲ್ಪ ಅರಣ್ಯ ಉಳಿಯಲು ಸಾಧ್ಯ.

ನಾನು ಕೊಡಗಿನ ಪಶ್ಚಿಮಘಟ್ಟ ಅರಣ್ಯದ ಸಮೀಪ ವಾಸವಾಗಿದ್ದೇನೆ. ರಕ್ಷಿತಾರಣ್ಯವಾದರೂ ಅರಣ್ಯವನ್ನು ಗುರುತಿಸುವ ಖಚಿತ ಗಡಿ ಗುರುತು ಇಲ್ಲದೇ ಇರುವುದರಿಂದ ಅತಿಕ್ರಮಣ ಮಿತಿಮೀರಿ ಆಗಿದೆ. ನನ್ನ ಕಣ್ಣ ಮುಂದೆಯೇ ಅರಣ್ಯ, ಖಾಸಗಿಯವರ ರಬ್ಬರ್ ತೋಟವಾಗಿ ಪರಿವರ್ತನೆ ಆಗುತ್ತಿದೆ.

ಸಂಬಂಧಪಟ್ಟ ಅಧಿಕಾರಿಗಳು ಮೌನ ವಹಿಸಿದ್ದಾರೆ. ಇದಕ್ಕೆ ಶಾಶ್ವತ ಪರಿಹಾರವಾಗಿ ಅರಣ್ಯ ಗಡಿಯನ್ನು ಗುರುತಿಸಿ, ಅತಿಕ್ರಮಣವನ್ನು ತೆರವುಗೊಳಿಸಿ ಭದ್ರ ಬೇಲಿ ಹಾಕಬೇಕು. ಇಲ್ಲದಿದ್ದರೆ ಅರಣ್ಯ ಇನ್ನಷ್ಟು ಸೊರಗಲಿದೆ. ಈ ನಿಟ್ಟಿನಲ್ಲಿ ಸರ್ಕಾರ ದಿಟ್ಟವಾದ ಕ್ರಮವನ್ನು ಕೈಗೊಳ್ಳಲಿ.
-ಸಹನಾ ಕಾಂತಬೈಲು, ಬಾಲಂಬಿ, ಮಡಿಕೇರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT