ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ವೆಲೆನ್ಸ್ ಕ್ಯಾಮೆರಾಗೆ ಎಚ್‌ಡಿಟಿವಿ ಗುಣಮಟ್ಟ

Last Updated 15 ಮೇ 2012, 19:30 IST
ಅಕ್ಷರ ಗಾತ್ರ

ಕೆಲವು ತಿಂಗಳ ಹಿಂದೆ ಬೆಂಗಳೂರಿನಲ್ಲಿ ಚಿನ್ನಾಭರಣ ಮಳಿಗೆಗೆ ರಾತ್ರಿ ವೇಳೆ ನುಗ್ಗಿದ ಕಳ್ಳರು ಲಕ್ಷಾಂತರ ಮೌಲ್ಯದ ಒಡವೆ ದೋಚಿದ್ದರು. ಚಾಲಾಕಿ ಕಳ್ಳರು ಹೊರ ಹೋಗುವುದಕ್ಕೂ ಮುನ್ನ ಮಳಿಗೆ ತಾರಸಿಗೆ ಮೂಲೆಯಲ್ಲಿ ಜೋಡಿಸಲಾಗಿದ್ದ ಸಿಸಿ (ಕ್ಲೋಸ್ಡ್ ಸರ್ಕೀಟ್) ಕ್ಯಾಮೆರಾ ಅವರ ಕಣ್ಣಿಗೆ ಬಿದ್ದಿತು. ಕ್ಯಾಮೆರಾವನ್ನು ಸುತ್ತಿಗೆಯಿಂದ ಜಖಂಗೊಳಿಸಿದ್ದರು.

ತಮ್ಮ ಚೌರ್ಯ ಚಿತ್ರಿತವಾಗಿದ್ದರೂ ಕ್ಯಾಮೆರಾ ಜಜ್ಜಿಹಾಕಿದ್ದರಿಂದ ಪೊಲೀಸರಿಗೆ ಯಾವುದೇ ಸುಳಿವು ಸಿಗುವುದಿಲ್ಲ ಎಂಬುದು ಅವರ ಲೆಕ್ಕಾಚಾರವಾಗಿತ್ತು. ಆದರೆ, ಅದಾಗಲೇ ಕಂಪ್ಯೂಟರ್ ಮಸ್ತಿಷ್ಕದಲ್ಲಿ ಅವರ ಕಳವು ಚಟುವಟಿಕೆಯೆಲ್ಲಾ ಭದ್ರವಾಗಿ ದಾಖಲಾಗಿ ಹೋಗಿತ್ತು.

ಇನ್ನೊಂದೆಡೆ ಎಟಿಎಂ ದೋಚಿದ ಕಳ್ಳರ ಚಿತ್ರವೂ ಸಿಸಿ ಟಿವಿ ಕ್ಯಾಮೆರಾದಲ್ಲಿ ದಾಖಲಾಗಿತ್ತು.ಬೆಂಗಳೂರಿನಲ್ಲಿ ತಡರಾತ್ರಿ ಹೋಟೆಲೊಂದಕ್ಕೆ ನುಗ್ಗಿ ಕುಡಿಯಲು ಮದ್ಯ ನೀಡುವಂತೆ ದಾಂದಲೆ ನಡೆಸಿದ್ದವರ ಮುಖಗಳೂ ಸಿಸಿ ಟಿವಿ ಕ್ಯಾಮೆರಾದಲ್ಲಿ ದಾಖಲಾಗಿದ್ದವು.

ಆದರೆ ಈ ಎಲ್ಲ ಪ್ರಕರಣಗಳೂ ರಾತ್ರಿ ವೇಳೆ ಕತ್ತಲೆ ಇದ್ದಾಗಲೋ, ಕಡಿಮೆ ಬೆಳಕು ಇದ್ದ ಕಡೆಯೋ ನಡೆದಿದ್ದರಿಂದ ಯಾರೊಬ್ಬರ ಮುಖವೂ ಸ್ಪಷ್ಟವಾಗಿ ಚಿತ್ರಿತವಾಗಿರಲಿಲ್ಲ. ಕಾರಣ ಇವೆಲ್ಲವೂ ಅನಲಾಗ್ ಕ್ಯಾಮೆರಾಗಳ ಮೂಲಕ ಸೆರೆ ಹಿಡಿದಿದ್ದವಾಗಿದ್ದವು.

ಒಂದು ಹಣಕಾಸು ಸಂಸ್ಥೆ, ಕಂಪೆನಿ, ವ್ಯಾಪಾರಿ ಸಂಸ್ಥೆ, ವಸತಿ ಸಂಕೀರ್ಣದ ಮೇಲೆ ಕಳ್ಳರು, ಲೂಟಿಕೋರರು, ದುಷ್ಟರು ದಾಳಿ ನಡೆಸಿದಾಗ ಘಟನೆ ಸೆರೆ ಹಿಡಿಯಲು ಅಳವಡಿಸಿಕೊಂಡ `ವೀಡಿಯೋ ಸರ್ವೆಲೆನ್ಸ್~ ವ್ಯವಸ್ಥೆ ಸಮರ್ಪಕವಾಗಿಲ್ಲದೇ ಇದ್ದರೆ ಉಪಯೋಗವಾದರೂ ಏನು?

ಈ ಪ್ರಶ್ನೆಗೆ ಇದೀಗ ಮಾರುಕಟ್ಟೆಗೆ ಪರಿಚಯವಾಗಿರುವ ಹೊಸದಾದ ಹೈಡೆಫೆನಿಷನ್ ಟೆಲಿವಿಷನ್ ಗುಣಮಟ್ಟದ `ಡಿಜಿಟಲ್ ವೀಡಿಯೊ ಸರ್ವೆಲೆನ್ಸ್~ ಸಾಧನ ಉತ್ತರ ನೀಡುವಂತಿದೆ ಎನ್ನುತ್ತಾರೆ ಆಕ್ಸಿಸ್ ಕಮ್ಯುನಿಕೇಷನ್‌ನ ಭಾರತದಲ್ಲಿ ವ್ಯವಸ್ಥಾಪಕ ಸುಧೀಂದ್ರ ಹೊಳ್ಳ.

ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳು, ವ್ಯಾಪಾರಿ ಸಂಸ್ಥೆಗಳು, ವಸತಿ ಸಂಕೀರ್ಣಗಳನ್ನೇ ಗಮನದಲ್ಲಿಟ್ಟುಕೊಂಡು ಆಕ್ಸಿಸ್ ಕಮ್ಯುನಿಕೇಷನ್ಸ್    (w-ww.axis.com ) ಸಿದ್ಧಪಡಿಸಿರುವ `ಆಕ್ಸಿಸ್ ಕ್ಯಾಮೆರಾ ಕಂಪ್ಯಾನಿಯನ್~(ಎಸಿಸಿ) ಆರಂಭಿಕ ಹಂತದ ಐಪಿ ವೀಡಿಯೊ ಸಲ್ಯೂಷನ್ ಆಗಿದೆ. 1ರಿಂದ 16 ಕ್ಯಾಮೆರಾಗಳವರೆಗೆ ಕಣ್ಗಾವಲು ವ್ಯವಸ್ಥೆ ಹೊಂದಿದೆ ಎನ್ನುವುದು ಅವರ ವಿವರಣೆ.

ದಟ್ಟ ಕತ್ತಲಲ್ಲಿಯೂ ನಡೆಯುವ ಘಟನೆಗಳನ್ನು ಇದು ಸ್ಪಷ್ಟವಾಗಿ ಚಿತ್ರೀಕರಿಸಬಲ್ಲದಾಗಿದೆ. ಈ ಕ್ಯಾಮೆರಾ ಚಿತ್ರೀಕರಣ ದಾಖಲಿಸಿಕೊಳ್ಳಲು ಸದಾ ಕಂಪ್ಯೂಟರ್ ಚಾಲನೆಯಲ್ಲಿ ಇರಲೇಬೇಕೆಂದೇನಿಲ್ಲ. ಕ್ಯಾಮೆರಾದಲ್ಲಿಯೇ `ಎಸ್‌ಡಿ~ ಕಾರ್ಡ್ ಇದ್ದು, ಅದೇ ಚಿತ್ರೀಕರಣದ ದತ್ತಾಂಶವನ್ನು ಶೇಖರಿಸಿಟ್ಟುಕೊಳ್ಳಬಲ್ಲದಾಗಿದೆ.
 
ವಾಣಿಜ್ಯ ಕೇಂದ್ರದಲ್ಲಿ ಚಿತ್ರಿತವಾದ ದೃಶ್ಯಗಳನ್ನು ಮನೆಯಲ್ಲಿನ  ಕಂಪ್ಯೂಟರ್‌ನಲ್ಲೋ, ಟ್ಯಾಬ್ಲೆಟ್‌ನಲ್ಲೋ, ಐಫೋನ್, ಐಪ್ಯಾಡ್ ಅಥವಾ ಆಂಡ್ರಾಯ್ಡ ಇರುವ ಸ್ಮಾರ್ಟ್‌ಫೋನ್‌ಗಳಲ್ಲಿ ವೀಕ್ಷಿಸಬಹುದಾಗಿದೆ. ಅದಕ್ಕೆ ಅಗತ್ಯವಾದ ಸಂಪರ್ಕ ಜಾಲ ತಂತ್ರಾಶವನ್ನು ಎಸಿಸಿಯಲ್ಲಿ ಅಳವಡಿಸಲಾಗಿದೆ ಎನ್ನುತ್ತಾರೆ ಸುಧೀಂದ್ರ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT