ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್‌ ಎಂ.ವಿಶ್ವೇಶ್ವರಯ್ಯ ಮಹಾನ್‌ ಚೇತನ

ಕಾರ್ಯಕ್ರಮದಲ್ಲಿ ಶಾಸಕ ವೈ.ಎಸ್‌.ವಿ.ದತ್ತಾ ಬಣ್ಣನೆ
Last Updated 16 ಸೆಪ್ಟೆಂಬರ್ 2013, 6:36 IST
ಅಕ್ಷರ ಗಾತ್ರ

ದಾವಣಗೆರೆ: ‘ಸರ್‌ ಎಂ. ವಿಶ್ವೇಶ್ವರಯ್ಯ ಅವರು ಕೇವಲ ಎಂಜಿನಿಯರ್‌ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿರಲ್ಲಿಲ್ಲ. ಬ್ಯಾಂಕ್‌, ಶಿಕ್ಷಣ ಮತ್ತು ಸಾಹಿತ್ಯ ಸೇರಿದಂತೆ ವಿವಿಧ ರಂಗಗಳಲ್ಲಿಯೂ ತಮ್ಮನ್ನು ತಾವು ತೊಡಿಗಿಸಿಕೊಂಡ ಮಹಾನ್‌ ಚೇತನ ಅವರು’ ಎಂದು ಶಾಸಕ ವೈ.ಎಸ್‌.ವಿ.ದತ್ತಾ ಬಣ್ಣಿಸಿದರು.

ನಗರದ ಬಾಪೂಜಿ ಸಭಾಂಗಣದಲ್ಲಿ ಭಾನುವಾರ ಸರ್‌ಎಂವಿ ಕಾಲೇಜು ಒಂದೇ ವೇದಿಕೆಯಲ್ಲಿ ಹಮ್ಮಿಕೊಂಡಿದ್ದ ಸರ್‌ ಎಂ.ವಿಶ್ವೇಶ್ವರಯ್ಯ ದಿನಾಚರಣೆ ಹಾಗೂ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಸಮಾರಂಭಕ್ಕೆ ನಾನು ಶಾಸಕನಾಗಿ ಆಗಮಿಸಿಲ್ಲ. ಒಬ್ಬ ಶಿಕ್ಷಕನಾಗಿ ಇಲ್ಲಿಗೆ ಬಂದಿರುವೆ. ಇಂದು ಸರ್‌ಎಂವಿ ಅವರಂತಹ ಪ್ರಾಮಾಣಿಕ ಎಂಜಿನಿಯರ್‌ ಇಲ್ಲ. ರಾಧಾಕೃಷ್ಣನ್‌ ಅವರಂತಹ ವಿಶಾಲವಾದ ಶಿಷ್ಯ ಬಳಗವನ್ನೇ ಹೊಂದಿರುವಂತಹ ಗುರುಗಳು ಇರುವುದು ತುಂಬಾ ವಿರಳ.  ಕೋಟಿ ಕೋಟಿ ಹಣ ಗಳಿಸಬಹುದು ಆದರೆ, ಉತ್ತಮ ವಿದ್ಯಾರ್ಥಿ ವೃಂದವನ್ನು ಸಂಪಾದಿಸುವುದು ತುಂಬಾ ಕಷ್ಟ ಎಂದು ಅಭಿಪ್ರಾಯಪಟ್ಟರು.

ಗಣಿತ ಮತ್ತು ವಿಜ್ಞಾನ ವಿಷಯಗಳು ಬಹುತೇಕ ವಿದ್ಯಾರ್ಥಿಗಳಿಗೆ ಕಠಿಣದ ವಿಷಯಗಳಾಗಿವೆ. ಈ ವಿಷಯಗಳ ಕುರಿತು ಶಿಕ್ಷಕರು ಪಾಠ ಮಾಡುವಾಗ ನಿತ್ಯ ಜೀವನದಲ್ಲಿ ನಡೆಯುವಂತಹ ಘಟನೆ, ಸಂಗತಿಗಳನ್ನು ಆಧಾರವಾಗಿಟ್ಟುಕೊಂಡು, ತುಂಬ ಸರಳವಾಗಿ ಸೂತ್ರಗಳನ್ನು ಬಿಡಿಸುವುದರ ಮೂಲಕ ವಿಷಯಗಳನ್ನು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿಕೊಡಬೇಕು ಎಂದು ಹೇಳಿದರು.

ಶಿಕ್ಷಕರು ಸಹ ಕಠಿಣ ವಿಷಯಗಳ ಕುರಿತು ಪಾಠ ಮಾಡುವಾಗ ವಿಷಯ, ಸೂತ್ರದ ಹಿಂದಿನ ರೋಚಕ ಸಂಗತಿಯನ್ನು ಮಕ್ಕಳಿಗೆ ಬಿಡಿಸಿ, ತಿಳಿ ಹೇಳಬೇಕು. ಆಗ, ಮಕ್ಕಳ ಮನಸ್ಸಿನಲ್ಲಿ ಶಾಶ್ವತವಾಗಿ ಆ ವಿಷಯ ಉಳಿಯುತ್ತದೆ ಎಂದು ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ದತ್ತಾ ಅವರು ಗಣಿತಶಾಸ್ತ್ರಜ್ಞ ರಾಮಾನುಜ ಅವರನ್ನು ನೆನೆಯುತ್ತಾ, ಅವರು ನೀಡಿರುವ ಸರಳ ಸೂತ್ರಗಳನ್ನು ಯಾವ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಮರೆಯಬಾರದು ಎಂದು ಹೇಳಿದರು.

ವಿಜಾಪುರದ ಶ್ರೀರಾಮಕೃಷ್ಣ ಆಶ್ರಮದ ಕೃಷ್ಣಾನಂದ ಸ್ವಾಮೀಜಿ ಮಾತನಾಡಿ, ‘ನಾನು, ನನ್ನಿಂದ, ನನಗಾಗಿ ಎಂದು ಬದುಕುವವರೇ ಇಂದು ಹೆಚ್ಚು. ಆದರೆ, ಸರ್‌ಎಂವಿ ಮತ್ತು ರಾಧಾಕೃಷ್ಣನ್‌ ಅವರಂತಹ ಮಹಾನ್‌ ವ್ಯಕಿ್ತಿಗಳು ಎಂದಿಗೂ ತಮಗಾಗಿ ಬದುಕು ನಡೆಸಲಿಲ್ಲ. ಇದರಿಂದಾಗಿಯೇ ಅವರನ್ನು ನಾವು ಸರ್ವಕಾಲದಲ್ಲಿಯೇ ಸ್ಮರಿಸುತ್ತೇವೆ ಎಂದರು.

ಇದೇ ಸಂದರ್ಭದಲ್ಲಿ ಸ್ವಾಮೀಜಿ ಅವರು, ಸಭೆಯಲ್ಲಿ 5 ನಿಮಿಷ ಓಂಕಾರ ಧ್ಯಾನವನ್ನು ನಡೆಸಿಕೊಟ್ಟರು.
ನಂತರ ನಾನು, ನನ್ನಿಂದ, ನನಗಾಗಿ ಯಾವುದು ಇಲ್ಲ ಎಂಬ ವಿಷಯಗಳ ಅರ್ಥ ಬರುವಂತೆ ದಾಸರ ಕೆಲ ಪದಗಳನ್ನು ಹಾಡಿ, ನರ್ತಿಸಿ ಅದರ ಒಳಾರ್ಥವನ್ನು ಬಿಡಿಸಿ ಹೇಳಿದರು.

ಸರ್‌ಎಂವಿ ಕಾಲೇಜಿನ ಕಾರ್ಯದರ್ಶಿ ಎಸ್‌.ಜೆ.ಶ್ರೀಧರ್‌ ಮಾತನಾಡಿ, ಇಂದು ಶಿಕ್ಷಕ ಮತ್ತು ವಿದ್ಯಾರ್ಥಿಗಳ ನಡುವಿನ ಬಾಂಧವ್ಯ ಕ್ಷೀಣಿಸುತ್ತಿದೆ ಎನಿಸುತ್ತಿದೆ. ಶಿಕ್ಷಕರಾಗಬೇಕು ಎಂಬ ಭಾವನೆ ಇಂದು ಬಹುತೇಕ ವಿದ್ಯಾರ್ಥಿಗಳಿಲ್ಲ ಎಂದು ವಿಷಾದಿಸಿದರು.

ಶಿಕ್ಷಕ ವಿನಾಯಕ ಮತ್ತು ಶಿಕ್ಷಕಿ ರಾಧಾ ಅವರನ್ನು ಸನ್ಮಾನಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ಡಾ.ವಿ.ಆರ್‌.ನಾಯ್ಡು ಮಾತ ನಾಡಿದರು. ಕೊಟ್ಟೂರು ಮಹಾದೇವ ಶಾಲೆಯ ಪ್ರಾಂಶುಪಾಲ ಪಂಪಾಪತಿ, ಸೈಯದ್‌ ಶಂಷೀರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT