ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್‌ಎಂವಿ ಆದರ್ಶ ಪಾಲಿಸಿ

Last Updated 16 ಸೆಪ್ಟೆಂಬರ್ 2011, 6:20 IST
ಅಕ್ಷರ ಗಾತ್ರ

 ಹನುಮಸಾಗರ:  ಸರ್.ಎಂ.ವಿಶ್ವೇಶ್ವರಯ್ಯನವರ ಕ್ರಿಯಾಶೀಲತೆ ಬದುಕು, ಶಿಸ್ತುಬದ್ಧಕಾರ್ಯ, ಸಮಯಪ್ರಜ್ಞೆ ಯುವಕರಿಗೆ ಮಾದರಿಯಾಗಿದೆ ಎಂದು ಸರ್ವೋದಯ ವಿಕಾಸ ಸಂಸ್ಥೆಯ ಅಧ್ಯಕ್ಷ ವಿಶ್ವನಾಥ ನಾಗೂರ ಹೇಳಿದರು.

ಗುರುವಾರ ಸರ್.ಎಂ.ವಿಶ್ವೇಶ್ವರಯ್ಯನವರ ಜನ್ಮದಿನಾಚರಣೆ ಅಂಗವಾಗಿ ಇಲ್ಲಿನ ಸರ್ವೋದಯ ವಿಕಾಸ ಸಂಸ್ಥೆಯಲ್ಲಿ ಏರ್ಪಡಿಸಿದ್ದ ಎಂಜಿನಿಯರ್ಸ್‌ಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕನ್ನಂಬಾಡಿ ಆಣೆಕಟ್ಟು ನಿರ್ಮಾಣಕ್ಕೆ ಕಾರಣೀಭೂತರಾಗಿರುವ ವಿಶ್ವೇಶ್ವರಯ್ಯನವರು ಮೈಸೂರ ಭಾಗದ ರೈತರ ಮನದಲ್ಲಿ ಸದಾ ನೆಲೆ ನಿಲ್ಲುವಂತಾಗಿದ್ದಾರೆ. ಅವರ ಜನ್ಮದಿನಾಚರಣೆಯನ್ನು ಎಂಜಿನಿಯರ್ಸ್‌ಡೆ ಎಂದು ಆಚರಿಸುತ್ತಿರುವ ಪ್ರತಿಯೊಬ್ಬ ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದ್ದು ಮುಂದಿನ ದಿನಗಳಲ್ಲಿ ವಿಶ್ವೇಶ್ವರಯ್ಯನಂತವರು ನಮ್ಮ ನಾಡಿನಲ್ಲಿ ಹುಟ್ಟಿ ಬಂದು ನಾಡಿಗೆ ಬೆಳಕಾಗಲಿ ಎಂದು ಹೇಳಿದರು.

ರೇಣುಕಾ ಗರಗ ಮಾತನಾಡಿ ಕನ್ನಂಬಾಡಿ ಆಣೆಕಟ್ಟೆ ನಿರ್ಮಾಣಕ್ಕೆ ಕಾರಣೀಭೂತರಾಗಿರುವ ಕೃಷ್ಣರಾಜ ಒಡೆಯರು ಹಾಗೂ ವಿಶ್ವೇಶ್ವರಯ್ಯನವರ ಪ್ರತಿಮೆಗಳನ್ನು ಕೃಷ್ಣರಾಜಸಾಗರದಲ್ಲಿ ಅನಾವರಣಗೊಳಿಸಬೇಕೆಂಬ ಜನರ ಬೇಡಿಕೆ ಇದುವರೆಗೂ ಈಡೇರದಿರುವುದು ವಿಷಾದನೀಯ ಎಂದು ಹೇಳಿದರು. ಸುಮಿತ್ರಾ ಸಿನ್ನೂರ, ಸಂಜಯ ಶಿರೋಳಕರ, ಜಯಶ್ರೀ ಜೋಷಿ ಮಾತನಾಡಿದರು.

ಡಾ.ಎಂ.ಜಿ.ರಂಗ್ರೇಜಿ, ರಮೇಶ ಅಂಬಿಗ, ಗಿರಿಜಾ ಸಂಕ ಇತರರು ಕಾರ್ಯಕ್ರಮದಲ್ಲಿದ್ದರು.
ವೀಣಾ ಶೀಲವಂತರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT