ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಲಹೆ ಪಡೆದು ರಾಜ್ಯದ ನಿಲುವು ಪ್ರಕಟ

ಕೃಷ್ಣಾ ನ್ಯಾಯಮಂಡಳಿ ತೀರ್ಪು
Last Updated 11 ಜನವರಿ 2014, 6:09 IST
ಅಕ್ಷರ ಗಾತ್ರ

ಹಂಪಿ: ‘ತಾಂತ್ರಿಕ ತಂಡ, ಕಾನೂನು ತಂಡ ಹಾಗೂ ವಕೀಲ ನಾರಿಮನ್‌ ಅವರ ಸಲಹೆ ಪಡೆದು ಕೃಷ್ಣಾ ನ್ಯಾಯ ಮಂಡಳಿ ತೀರ್ಪು ವಿಷಯದಲ್ಲಿ ರಾಜ್ಯ ಸರ್ಕಾರ ತನ್ನ ನಿಲುವು ಪ್ರಕಟಿಸಲಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಶುಕ್ರವಾರ ಹಂಪಿ ಉತ್ಸವ ಉದ್ಘಾಟಿ ಸಿದ ಬಳಿಕ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ‘ಕೃಷ್ಣಾ ನ್ಯಾಯಮಂಡಳಿ ತೀರ್ಪು ವಿಷಯದಲ್ಲಿ ವಿರೋಧ ಪಕ್ಷಗಳು ತಮ್ಮದೇ ಆದ ನಿಲುವನ್ನು ವ್ಯಕ್ತಪಡಿಸಿವೆ. ಈ ಕಾರಣ ದಿಂದ ಎಲ್ಲರ ಸಲಹೆ ಪಡೆದು ಸರ್ಕಾರ ತೀರ್ಮಾನಕ್ಕೆ ಬರಲಿದೆ’ ಎಂದರು.

‘ಹೊಸ ಗಣಿ ಪರವಾನಗಿ ನೀಡಲು ರಾಜ್ಯ ಸರ್ಕಾರ ಸಿದ್ಧವಿದ್ದು, ಕಾನೂನು ಪಾಲನೆಯೊಂದಿಗೆ ಪಾರದರ್ಶಕವಾಗಿ ನಡೆದುಕೊಳ್ಳಲಿದೆ. ಅಲ್ಲದೆ ಸಿ ಕೆಟಗರಿಯ 51 ಗಣಿ ಕಂಪೆನಿಗಳನ್ನು ಬಹಿರಂಗ ಹರಾಜು ಮೂಲಕ ಹಂಚಿಕೆ ಮಾಡಲಾಗುವುದು. ಗಣಿ ಹಗರಣದ ತನಿಖೆಯನ್ನು ಸಿಬಿಐ ನಡೆಸುತ್ತಿರುವು ದರಿಂದ ಈಗಲೇ ಯಾವ ತೀರ್ಮಾ ನಕ್ಕೂ ಬರುವುದಿಲ್ಲ’ ಎಂದು ತಿಳಿಸಿದರು.

‘ಹಂಪಿ ಉತ್ಸವದಲ್ಲಿ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗಿದ್ದು, ಯಾರ ಭಾವನೆಗಳಿಗೂ ಧಕ್ಕೆಯಾಗದಂತೆ ನೋಡಿಕೊಳ್ಳಲಾಗಿದೆ. ಅಲ್ಲದೆ ಉತ್ಸವಕ್ಕೆ ಜನರ ಕೊರತೆ ಇಲ್ಲ. ಉತ್ಸವದ ಪ್ರವೇಶಕ್ಕೆ ವಿಧಿಸಿದ್ದ ಎಲ್ಲ ಶುಲ್ಕವನ್ನೂ ರದ್ದುಗೊಳಿಸಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT