ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸವಣೂರು ಪುರಸಭೆ ಕಾಂಗ್ರೆಸ್‌ ಮಡಿಲಿಗೆ

Last Updated 13 ಸೆಪ್ಟೆಂಬರ್ 2013, 9:35 IST
ಅಕ್ಷರ ಗಾತ್ರ

ಸವಣೂರ: ಸ್ಥಳೀಯ ಪುರಸಭೆಯ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್‌ನ  ಮಹಬೂಬಿ ಸೌದಾಗರ ಹಾಗೂ ಉಪಾಧ್ಯಕ್ಷರಾಗಿ ರಾಜೇಸಾಬ್‌ ಜಕನಿ ಆಯ್ಕೆಗೊಂಡಿದ್ದಾರೆ. ಇದರೊಂದಿಗೆ ಪುರಸಭೆ ಸಂಪೂರ್ಣವಾಗಿ ಕೈ ವಶವಾಗಿದೆ.

ಪುರಸಭೆಯ ೨೩ ಸದಸ್ಯರಲ್ಲಿ ಕಾಂಗ್ರೆಸ್ ೧೨ ಸದಸ್ಯ ಬಲ ಹೊಂದಿದ್ದು, ಚುನಾವಣೆಯಲ್ಲಿ ಜೆ.ಡಿ.ಎಸ್ ಸದಸ್ಯರ ಬೆಂಬಲವನ್ನೂ ಪಡೆದುಕೊಂಡಿತು.  ಹಿಂದುಳಿದ ಅ ವರ್ಗ ಮಹಿಳೆ ಮೀಸಲಾತಿ ಹೊಂದಿದ್ದ ಅಧ್ಯಕ್ಷ ಸ್ಥಾನಕ್ಕೆ ೧೧ನೇ ವಾರ್ಡಿನ ಕಾಂಗ್ರೆಸ್ ಸದಸ್ಯೆ ಮೆಹಬೂಬಿ ಎಸ್. ಸೌದಾಗರ ಮತ್ತು ೮ನೇ ವಾರ್ಡಿನ ಬಿಜೆಪಿ ಸದಸ್ಯೆ ನವಾಜಬಿ ಮುಂಡರಗಿ ಆಕಾಂಕ್ಷಿಗಳಾ ಗಿದ್ದರು. ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ೭ನೇ ವಾರ್ಡಿನ ಕಾಂಗ್ರೆಸ್ ಸದಸ್ಯ ರಾಜೇಸಾಬ್‌ ಜಕನಿ, ೨೧ನೇ ವಾರ್ಡಿನ ಬಿಜೆಪಿ ಸದಸ್ಯ ಮಂಜುನಾಥ ಗಾಣಿಗೇರ ನಾಮಪತ್ರಗಳನ್ನು ಸಲ್ಲಿಸಿದ್ದರು.

ಚುನಾವಣಾ ಪ್ರಕ್ರಿಯೆಯಲ್ಲಿ ಮೆಹಬೂಬಿ ಸೌದಾಗರ ಮತ್ತು ರಾಜೇಸಾಬ್‌ ಜಕನಿ ಪರವಾಗಿ ಕಾಂಗ್ರೆಸ್‌ನ ೧೨ ಮತ್ತು ಜೆಡಿಎಸ್‌ನ ೨ ಸದಸ್ಯರು ಸೇರಿದಂತೆ ಒಟ್ಟೂ ೧೪ ಜನ ಸದಸ್ಯರ ಬೆಂಬಲ ವ್ಯಕ್ತವಾಯಿತು. ಬಿಜೆಪಿ ಅಭ್ಯರ್ಥಿಗಳಿಗೆ ೯ ಮತಗಳು ಲಭ್ಯವಾದವು.

ಚುನಾವಣಾಧಿಕಾರಿಗಳಾಗಿ ತಹಶೀಲ್ದಾರ್‌ ಎಸ್.ಎಫ್. ಸಂಜೀವಣ್ಣ ನವರ, ಎಂ.ಬಿ ಪಾಟೀಲ ಕಾರ್ಯ ನಿರ್ವಹಿಸಿದರು. ಮುಖ್ಯಾಧಿಕಾರಿ ಎಚ್.ಎಫ್ ಬಿದರಿ, ಕಂದಾಯ ಇಲಾಖೆ ಅಧಿಕಾರಿಗಳಾದ ಆರ್.ಎಲ್ ನಾಯ್ಕ, ಸಿ.ಕೆ ಹೂಗಾರ, ಪುರಸಭೆ ಅಧಿಕಾರಿಗಳಾದ ರೇಣುಕಾ ದೇಸಾಯಿ ಉಪಸ್ಥಿತರಿದ್ದರು.

ನೂತನ ಅಧ್ಯಕ್ಷ ಉಪಾಧ್ಯಕ್ಷರನ್ನು ಅಭಿನಂದಿಸಿದ ಮಾಜಿ ಶಾಸಕ ಅಜ್ಜಂ ಪೀರ್‌ ಖಾದ್ರಿ, ಉತ್ತಮ ಆಡಳಿತ ನೀಡುವಂತೆ ಸೂಚಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗಪ್ಪ ತಿಪ್ಪಕ್ಕನವರ, ಶಿಗ್ಗಾಂವ ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷ ಎಂ.ಎನ್ ವೆಂಕೋಜಿ, ಪುರಸಭೆ ಸದಸ್ಯರಾದ ಅಬ್ದುಲ್‌ ಖಾದರ್‌ ಫರಾಶ, ಖಲಂದರ್‌ ಗೌಡಗೇರಿ, ಇದ್ದರು. ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT