ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸವದತ್ತಿ: ಹತ್ತು ನಕಲಿ ವೈದ್ಯರ ಪತ್ತೆ

Last Updated 22 ಜನವರಿ 2011, 10:05 IST
ಅಕ್ಷರ ಗಾತ್ರ

ಸವದತ್ತಿ: ಆರೋಗ್ಯ ಇಲಾಖೆಯ ವಿಚಕ್ಷಕ ದಳ ಬುಧವಾರ ತಾಲ್ಲೂಕಿನ ವಿವಿಧೆಡೆ ದಾಳಿ ನಡೆಸಿ 10ಕ್ಕೂ ಹೆಚ್ಚು ನಕಲಿ ವೈದ್ಯರನ್ನು ಪತ್ತೆ ಹಚ್ಚಿದೆ.ನಕಲಿ ವೈದ್ಯರ ಬಳಿ ಇದ್ದ ಖೊಟ್ಟಿ ಪ್ರಮಾಣಪತ್ರಗಳನ್ನು ವಶಪಡಿಸಿ ಕೊಂಡು ಸೂಕ್ತ ಕ್ರಮಕ್ಕೆ ಜಿಲ್ಲಾಧಿಕಾರಿ ಗಳಿಗೆ ವರದಿ ಸಲ್ಲಿಸಿದೆ.

ತಾಲ್ಲೂಕಿನ ಗ್ರಾಮೀಣ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ  ಖಾಸಗಿ ವೈದ್ಯಕೀಯ ವೃತ್ತಿನಿರತ ಸಂಸ್ಥೆಗಳ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿದಾಗ ಕೆಲವು ವೈದ್ಯರು ನಕಲಿ ಆಗಿರುವುದು  ಬಹಿರಂಗ ವಾಗಿದೆ. ಕೆಲವರ ಬಳಿ ಅಸಲಿ ಪ್ರಮಾಣಪತ್ರ ಹೋಲುವ ಪ್ರಮಾಣ ಪತ್ರಗಳು ಇರುವುದರಿಂದ ಅವು ಗಳನ್ನೂ ಸಹ ವಶಕ್ಕೆ ತೆಗೆದುಕೊಂಡು ಸಂಬಂಧಪಟ್ಟವರ ಬಳಿ ಪರಿಶೀಲನೆಗೆ ಕಳುಹಿಸಲಾಗಿದೆ ಎಂದು  ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಪಿ.ಎ. ಬಿರಾದಾರ ಸುದ್ದಿಗಾರರಿಗೆ ತಿಳಿಸಿದರು.

2009ರ ಕಾಯ್ದೆ ಪ್ರಕಾರ ಖಾಸಗಿ ವೈದ್ಯಕೀಯ ಸಂಸ್ಥೆಗಳು ಜಿಲ್ಲಾ ಆಡಳಿತದ ಬಳಿ ನೋಂದಣಿ ಮಾಡಿ ಕೊಳ್ಳುವುದು ಕಡ್ಡಾಯ.  ವೈದ್ಯರು ನೋಂದಣಿಗಾಗಿ ಅರ್ಜಿ ಸಲ್ಲಿಸಿದ್ದರು. ದೃಢೀಕರಣಕ್ಕಾಗಿ ಗ್ರಾಮಗಳಲ್ಲಿ ಇರುವ ಕ್ಲಿನಿಕ್‌ಗಳಿಗೆ ತೆರಳಿದಾಗ ಕೆಲವು ವೈದ್ಯಕೀಯ ಪ್ರಮಾಣಪತ್ರಗಳು ನಕಲಿ ಆಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಅವರು ಹೇಳಿದರು.

ಹಂಚಿನಾಳದ ಸಂಗಪ್ಪ ರುದ್ರಪ್ಪ ಮಡಿವಾಳರ ವಿದ್ಯಾರ್ಹತೆ ಎಸ್ಸೆಸ್ಸೆಲ್ಸಿ ಮಾತ್ರ. ಸಂಗಪ್ಪ ಅವರು 15 ಸಾವಿರ ಹಣ ಕೊಟ್ಟು ಬಿ.ಎ.ಎಂ.ಎಸ್ ವೈದ್ಯಕೀಯ ಪ್ರಮಾಣ ಪತ್ರ ಪಡೆದು ಕೊಂಡಿದ್ದಾರೆ. ಈ ಪ್ರಮಾಣಪತ್ರ ಪಡೆಯಬೇಕಾದರೆ ಕನಿಷ್ಠ 5 ವರ್ಷದ ಕೋರ್ಸ್ ಪೂರ್ಣಗೊಳಿಸಿರಬೇಕು. ಸತ್ತಿಗೇರಿಯ ಅಣ್ಣತಮ್ಮಪ್ಪ ವಿರೂಪಾಕ್ಷ ವಾಲಿ ಆರ್.ಎ.ಎಂ.ಪಿ ಹಾಗೂ ಆರ್.ಎಚ್.ಎಂ.ಪಿ ಪ್ರಮಾಣ ಪತ್ರ ಹೊಂದಿದ್ದಾರೆ. ಹಿರೇಕುಂಬಿಯಲ್ಲಿ ನದಾಫ ಅವರಿಗೆ ವೈದ್ಯಕೀಯ ವೃತ್ತಿಯ ಗಂಧವೇ ಗೊತ್ತಿಲ್ಲ. ಪಂಚಾಯ್ತಿ ಸದಸ್ಯರೊಬ್ಬರು 10 ವರ್ಷಗಳಿಂದ ವೈದ್ಯಕೀಯ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈಗ ನಕಲಿ ದಾಖಲೆಯೊಂದಿಗೆ ಸಿಕ್ಕಿ ಬಿದ್ದಿದ್ದಾರೆ ಎಂದು ಅವರು ತಿಳಿಸಿದರು. 

 ಈ ನಕಲಿ ವೈದ್ಯರು ಕೊಲ್ಕತ್ತಾ,  ದೆಹಲಿ ಹಾಗೂ ಗೋಕಾಕದಲ್ಲಿರುವ ಸಂಸ್ಥೆಗಳಿಂದ ಹಣ ನೀಡಿ ಪ್ರಮಾಣ ಪತ್ರ ತಂದಿದ್ದಾರೆ. ರಾಜ್ಯದಲ್ಲಿ ಅವುಗಳಿಗೆ ಯಾವುದೇ ಮಾನ್ಯತೆ ಇಲ್ಲ. ನಕಲಿ ಪ್ರಮಾಣಪತ್ರ ಪಡೆದ ಎಲ್ಲರೂ ಎಸ್ಸೆಸ್ಸೆಲ್ಸಿ ವರೆಗೆ ಮಾತ್ರ ಅಧ್ಯಯನ ಮಾಡಿದ್ದಾರೆ ಎಂದು ವಿವರಿಸಿದರು.

ಈಗಾಗಲೇ ವಶಪಡಿಸಿಕೊಂಡ ಪ್ರಮಾಣಪತ್ರಗಳು, ಔಷಧಿಗಳು, ಶಸ್ತ್ರಕ್ರಿಯೆ ಉಪಕರಣಗಳ ಮಾಹಿತಿ ಯನ್ನು  ಜಿಲ್ಲಾಧಿಕಾರಿಗಳಿಗೆ, ಆರೋಗ್ಯ ಇಲಾಖೆಯ ಆಯುಕ್ತರಿಗೆ ರವಾನಿಸ ಲಾಗುವುದು. ತನಿಖೆ ಪೂರ್ಣಗೊಳಿಸು ವವರೆಗೆ ಕ್ಲಿನಿಕ್ ಬಂದ್ ಮಾಡುವಂತೆ ಆದೇಶಿಸಲಾಗಿದೆ ಎಂದು ಬಿರಾದಾರ ತಿಳಿಸಿದರು. ತಹಸೀಲ್ದಾರ ಶಾರದಾ ಕೋಲಕಾರ, ಭಾರತೀಯ ವೈದ್ಯಕೀಯ ಸಂಘಟನೆಯ ಡಾ.ಎ.ಸಿ.ಕಬ್ಬಿಣ, ಆಯುಷ ಸಂಘಟನೆ ಡಾ.ಎಸ್.ಎಲ್. ಕುಲಕರ್ಣಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT