ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಸವಾಲಿಗೆ ಉತ್ತರ ಯಶದ ಗುಟ್ಟು'

Last Updated 10 ಏಪ್ರಿಲ್ 2013, 6:55 IST
ಅಕ್ಷರ ಗಾತ್ರ

ಶಹಾಪುರ: ಯಶಸ್ಸು ಎಂದರೆ ಮನಸ್ಸಿನಲ್ಲಿ ಹುಟ್ಟಿದ ಆಸೆ, ಆಕಾಂಕ್ಷೆಯ ಗುರಿ ಸಾಧಿಸುವುದು. ಆತ್ಮಶಕ್ತಿಯನ್ನು ಕ್ರೋಢಿ ಕರಣಗೊಳಿಸಿ ಸವಾಲುಗಳಿಗೆ ನೈತಿಕತೆಯ ಜವಾಬು ನೀಡುತ್ತಾ ಮುಂದೆ ಸಾಗುವುದು ಯಶಸ್ವಿಯ ಗುಟ್ಟು ಎಂದು ಬಳ್ಳಾರಿ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯದ ಕುಲಸಚಿವ ಡಾ.ರಂಗರಾಜ ವನದುರ್ಗ ಹೇಳಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ನಡೆದ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ `ಸಗರನಾಡು ಸಿಂಗಾರ' ವಾರ್ಷಿಕ ಸಂಚಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡುತ್ತಾ, ವಿದ್ಯಾರ್ಥಿಗಳ ಬದುಕಿನಲ್ಲಿ ಬರುವ ಕಷ್ಟ ಕಾರ್ಪಣ್ಯವನ್ನು ಮೆಟ್ಟಿ ನಿಲ್ಲಬೇಕು. ಮಧ್ಯಮ ವರ್ಗದ ಜನತೆಗೆ ಸದಾ ಕಾಡುವ ಬಡತನದ ನೆರಳನ್ನು ದಾಟಿ ಸಾಧನೆಯ ಛಲದೊಂದಿಗೆ ಮುನ್ನುಗ್ಗಿ. ಮುಂದಿನ ಭವಿಷ್ಯದ ಜೀವನ ಬೆಳದಿಂಗಳಾಗವುದೆಂದು ಅವರು ಅಭಿಪ್ರಾಯಪಟ್ಟರು.

ಗುಲ್ಬರ್ಗ ಕೇಂದ್ರಿಯ ವಿಶ್ವವಿದ್ಯಾಲಯದ ಮುಖ್ಯಸ್ಥ ಡಾ.ಬಸವರಾಜ ಡೊಣೂರ ಮಾತನಾಡುತ್ತಾ, ಮಕ್ಕಳಿಗೆ ಅಕ್ಕರೆಯ ತಾಯಿ ಭಾಷೆಯಲ್ಲಿ ಅಕ್ಷರಗಳನ್ನು ಕಲಿಸಿದರೆ ಯಶಸ್ಸು ಬದುಕು ಕಟ್ಟಿಕೊಳ್ಳಬಹುದು. ಆಂಗ್ಲ ಭಾಷೆಯನ್ನು ಮಕ್ಕಳಿಗೆ ಒತ್ತಾಯಪೂರ್ವಕವಾಗಿ ಹೇರಬಾರದು. ಯಾವುದೇ ಭಾಷೆಯನ್ನು ತುಂಬು ಮನಸ್ಸಿನಿಂದ ಅಧ್ಯಯನ ಮಾಡಬೇಕು.

ವಿದ್ಯಾರ್ಥಿಗಳಲ್ಲಿ ಭಾಷೆಯ ಬಗ್ಗೆ ಕೀಳಿರಿಮೆ ಬೇಡ. ನಿರಂತರ ಓದು ನಮ್ಮನ್ನು ಉನ್ನತ ಮಟ್ಟಕ್ಕೆ ಕರೆದುಕೊಂಡು ಸಾಗುತ್ತದೆ ಎಂಬುವುದನ್ನು ಮರೆಯಬಾರದೆಂದು ಅವರು ಹೇಳಿದರು.

ಸುವರ್ಣ ಟಿ.ವಿ.ಯಲ್ಲಿ ಪ್ರಸಾರವಾಗುವ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದಲ್ಲಿ ಈಚೆಗೆ 6.40ಲಕ್ಷ ಬಹುಮಾನವನ್ನು ಪಡೆದುಕೊಂಡ ಕಾಲೇಜಿನ ಪ್ರತಿಭಾವಂತ ವಿದ್ಯಾರ್ಥಿ ರೇಣುಕಾ ಕಾಡಂಗೇರಾ ಅವರಿಗೆ ಕಾಲೇಜಿನ ಅತ್ಯುತ್ತಮ ವಿದ್ಯಾರ್ಥಿನಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಅಲ್ಲದೆ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ಸಾಧನೆ ಮಾಡಿದ ವಿದಾರ್ಥಿಗಳಾದ ಬಸವರಾಜ, ಅಬೇದಾಬೇಗಂ, ಪುಷ್ಪರಾಣಿ, ಪ್ರವೀಣಬೇಗಂರನ್ನು ಸನ್ಮಾನಿಸಲಾಯಿತು.

ಕಾಲೇಜಿನ ಪ್ರಾಚಾರ್ಯರಾದ ಪ್ರೊ.ಶಿವರಾಜ ಎಂ.ದೇವಪ್ಪ  ಸಭೆ ಅಧ್ಯಕ್ಷತೆವಹಿಸಿದ್ದರು.

ವೇದಿಕೆಯ ಮೇಲೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಚಾಲಕರಾದ ಚೆನ್ನಾರಡ್ಡಿ ತಂಗಡಗಿ  ಡಾ.ಹೈಯ್ಯಾಳಪ್ಪ ಸುರಪುರಕರ್, ಬಲಭೀಮ ದೇಸಾಯಿ, ವೀರಯ್ಯ ಹಿರೇಮಠ ದೈಹಿಕ ಶಿಕ್ಷಣ ನಿರ್ದೇಶಕ ಎಸ್.ಎಂ.ಜುನ್ನಾ ಮತ್ತಿತರರು ಉಪಸ್ಥಿತರಿದ್ದರು.

ನಂತರ ವಿದ್ಯಾರ್ಥಿಗಳಿಂದ ಬಯಲಾಟದ ಪ್ರದರ್ಶನ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT