ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಸ್ಯಗಳನ್ನೂ ತಿನ್ನುತ್ತಿದ್ದ ಆದಿ ಮಾನವ!

Last Updated 20 ಜುಲೈ 2012, 19:30 IST
ಅಕ್ಷರ ಗಾತ್ರ

ಲಂಡನ್ (ಪಿಟಿಐ): ಎಲ್ಲರಿಗೂ ತಿಳಿದಂತೆ ಆದಿ ಮಾನವನ ಆಹಾರ ಬೇಟೆಯಾಡಿದ ಮಾಂಸವೇ ಆಗಿತ್ತು. ಆದರೆ ಹೊಸ ಸಂಶೋಧನೆಯ ಪ್ರಕಾರ ಆತ ಹಸಿವಾದಾಗ ಬರಿ ಪ್ರಾಣಿಗಳನ್ನು ಬೇಟೆಯಾಡಿದ ಮಾಂಸವನ್ನಷ್ಟೇ ಅಲ್ಲ ಔಷಧಿಯ ಹಾಗೂ ಪೌಷ್ಟಿಕಾಂಶಗಳುಳ್ಳ ಬೇಯಿಸಿದ ಸಸ್ಯಗಳನ್ನೂ ತಿನ್ನುತಿದ್ದ.

ಸುಮಾರು 24 ಸಾವಿರದಿಂದ 30 ಸಾವಿರ ವರ್ಷಗಳ ಹಿಂದೆ ಕಣ್ಮರೆಯಾದ, ಉತ್ತರ ಸ್ಪೇನ್ ಜಾಗವೊಂದರಲ್ಲಿ ಪತ್ತೆಯಾದ ನೀನ್‌ದತ್ರಾಲ್ಸ್ ಎಂಬ ಜನಾಂಗದ ಐವರ ದಂತಪಕ್ತಿಗಳ ಮೇಲೆ ನಡೆಸಿದ ಪ್ರಯೋಗದಿಂದ ಈ ಸಂಬಂಧದ ಪುರಾವೆಗಳು ಲಭ್ಯವಾಗಿವೆ ಎಂದು `ಡೈಲಿ ಮೇಲ್~ ವರದಿ ಮಾಡಿದೆ.

ಸಂಶೋಧನೆ ಕೈಗೊಳ್ಳುವ ತೀರ ಇತ್ತೀಚಿನವರೆಗೂ ನೀನ್‌ದತ್ರಾಲ್ಸ್ ಜನಾಂಗ ಮಾಂಸಹಾರಿಗಳೆಂದು ಬಲವಾಗಿ ನಂಬಲಾಗಿತ್ತು ಎಂದು ಆಟೊನೊಮಾ ದಿ ಬಾರ್ಸಿಲೊನಾ ಹಾಗೂ ಯಾರ್ಕ್ ವಿಶ್ವವಿದ್ಯಾಲಯದ ಸಂಶೋಧಕರನ್ನು ಒಳಗೊಂಡ ಅಂತಾರಾಷ್ಟ್ರೀಯ ತಂಡ ತಿಳಿಸಿದೆ.

ಬೇಯಿಸಿದ ಆಹಾರವನ್ನಷ್ಟೇ ಈ ಜನಾಂಗ ತಿನ್ನುತ್ತಿರಲಿಲ್ಲ ಪೌಷ್ಟಿಕಾಂಶ ಹಾಗೂ ಔಷಧಿಯ ಗುಣವುಳ್ಳ ಆಹಾರದ ಬಗ್ಗೆಯೂ ಅವರಿಗೆ ಅಷ್ಟೇ ಅರಿವಿತ್ತು ಎಂದು ಸಂಶೋಧಕ ಡಾ. ಸ್ಟೀಫನ್ ಬಕ್ಲೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT