ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹಕಾರಿ ಅಕ್ರಮ ದ್ವಿಸದಸ್ಯತ್ವ: ಆರೋಪ

Last Updated 12 ಫೆಬ್ರುವರಿ 2011, 8:45 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲಾ ಸಹಕಾರಿ ಒಕ್ಕೂಟದ ನಿರ್ದೇಶಕರು ಒಂದೇ ಮಾದರಿಯ ಸಹಕಾರ ಸಂಘಗಳಿಗೆ ಏಕಕಾಲಕ್ಕೆ ಸದಸ್ಯತ್ವ ಹೊಂದಿರಬಾರದು ಎಂಬ ನಿಯಮಕ್ಕೆ ವಿರುದ್ಧವಾಗಿ ತಾಲ್ಲೂಕಿನ ಬ್ಯಾಲಹಳ್ಳಿಯ ಎಂ.ಗೋವಿಂದಗೌಡರು ಎರಡು ಬಳಕೆದಾರರ ಸಹಕಾರ ಸಂಘಗಳಿಗೆ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಒಕ್ಕೂಟದ ಅಧ್ಯಕ್ಷೆ ಶಾಂತಮ್ಮ ಆರೋಪಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ಗೋವಿಂದಗೌಡರು ನಗರದ ಬೋವಿ ಕಾಲೊನಿಯಲ್ಲಿರುವ ಶ್ರೀರಾಮ ಬಳಕೆದಾರರ ಸಹಕಾರ ಸಂಘ ಮತ್ತು ಬಂಗಾರಪೇಟೆ ತಾಲ್ಲೂಕಿನಲ್ಲಿರುವ ಘಟ್ಟಕಾಮಧೇನಹಳ್ಳಿ ಬಳಕೆದಾರರ ಸಹಕಾರ ಸಂಘದಲ್ಲಿ ಸದಸ್ಯರಾಗಿದ್ದಾರೆ. ಗೋವಿಂದಗೌಡರು ಹೀಗೆ ನಿಯಮ ಉಲ್ಲಂಘಿಸಿದ್ದು ಗೊತ್ತಿದ್ದರೂ ಅಧಿಕಾರಿಗಳು ಕ್ರಮ ಕೈಗೊಳ್ಳದೆ ಸುಮ್ಮನಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

‘2009ರ ಫೆ.17ರಂದು ನಡೆದ ಚುನಾವಣೆಯಲ್ಲಿ ಘಟ್ಟಕಾಮಧೇನಹಳ್ಳಿಯ ಸಂಘದ ನಿರ್ದೇಶಕರಾಗಿ ಗೋವಿಂದಗೌಡರು ನಿರ್ದೇಶಕರಾಗಿ ಆಯ್ಕೆಯಾಗಿ ದ್ದಾರೆ. ಅದರ ಜೊತೆಯಲ್ಲಿ, ನಗರದ ಶ್ರೀರಾಮ ಬಳಕೆದಾರರ ಸಹಕಾರ ಸಂಘದ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಒಂದೇ ವಿಧದ ಸಹಕಾರ ಸಂಘಗಳಲ್ಲಿ ಬಹುಸದಸ್ಯತ್ವ ಪಡೆಯಬಾರದು. ಆಡಳಿತ ಮಂಡಳಿಯ ನಿರ್ದೇಶಕರಾಗಿರಬಾರದು ಎಂಬ ಸಹಕಾರ ನಿಯಮಗಳನ್ನು ಗೌಡರು ಗಾಳಿಗೆ ತೂರಿದ್ದಾರೆ. ಅವರಿಗೆ ಸಹಕಾರ ಇಲಾಖೆಯ, ಜಿಲ್ಲೆಯಲ್ಲಿರುವ ಅಧಿಕಾರಿಗಳು ಕಾನೂನು ಬಾಹಿರವಾಗಿ ಪ್ರೋತ್ಸಾಹ ನೀಡುತ್ತಿದ್ದಾರೆ’ ಎಂದು ಶಾಂತಮ್ಮ ಆರೋಪಿಸಿದ್ದಾರೆ.

‘ನಿಯಮ ಮೀರಿ ಸದಸ್ಯತ್ವ ಹೊಂದಿರುವ ಗೋವಿಂದಗೌಡರನ್ನು ಜಿಲ್ಲಾ ಸಹಕಾರಿ ಒಕ್ಕೂಟದ ನಿರ್ದೇಶಕರ ಸ್ಥಾನದಿಂದ ಅನರ್ಹಗೊಳಿಸಬೇಕು ಎಂದು ಸಹಕಾರ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ’ ಎಂದು ಅವರು ತಿಳಿಸಿದ್ದಾರೆ.

ಲಂಚದ ಸಮಸ್ಯೆ: ವಿಷಾದ
ಬಡವರು ಸರ್ಕಾರದ ಯೋಜನಗಳನ್ನು ಪಡೆದುಕೊಳ್ಳಬೇಕಾದರೂ ಲಂಚ ನೀಡಬೇಕಾದ ಪರಿಸ್ಥಿತಿ ತಾಲೂಕಿನಲ್ಲಿರುವುದು ದುರ್ದೈವದ ಸಂಗತಿ ಎಂದು ಮಾಜಿ ಸಚಿವ ಕೆ.ಶ್ರೀನಿವಾಸಗೌಡ ವಿಷಾದಿಸಿದರು.

ತಾಲೂಕಿನ ರಾಮಾಪುರದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಡವರ ಏಳಿಗೆಗಾಗಿ ಸರ್ಕಾರಗಳು ಅನೇಕ ಯೋಜನೆಗಳನ್ನು ರೂಪಿಸಿವೆ. ಆದರೆ ಅಧಿಕಾರಿಗಳು ಸಮರ್ಪಕವಾಗಿ ಸೌಲಭ್ಯ ವಿತರಣೆ ಮಾಡುತ್ತಿಲ್ಲ, ಈ ಬಗ್ಗೆ ನಿಗಾ ವಹಿಸಬೇಕಾದ ಸ್ಥಳಿಯ ಶಾಸಕರು ವಿಫಲರಾಗಿದ್ಧಾರೆ’ ಎಂದು ದೂರಿದರು.
ಕೋಮುಲ್ ನಿರ್ದೇಶಕ ಮದ್ದೇರಿ ರಾಮೇಗೌಡ, ಟಿಎಪಿಸಿಎಂಎಸ್ ಅಧ್ಯಕ್ಷ ನಾಗನಾಳ ಸೋಮಣ್ಣ ಮಾತನಾಡಿದರು.  ಜಿಲ್ಲಾ ಪಂಚಾಯುತಿ ಸದಸ್ಯ ಎಸ್.ಬಿ.ಮುನಿವೆಂಕಟಪ್ಪ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಶಂಕರೇಗೌಡ, ನಿರ್ದೇಶಕ ಶ್ರೀರಾಮರೆಡ್ಡಿ, ಮುನಿನಾರಾಯಣಪ್ಪ, ರಾಮಸ್ವಾಮಿ, ಹನುಮಂತರೆಡ್ಡಿ ಉಪಸ್ಥಿತರಿದ್ದರು.ಯುವ ಮುಖಂಡರಾದ ಪಾಪಣ್ಣ, ಪ್ರಸನ್ನ ಕುಮಾರ್ ನೇತೃತ್ವದಲ್ಲಿ ಸುಮಾರು 50 ಕ್ಕೂ ಹೆಚ್ಚು ಯುವಕರು ಗೌಡರ ಬಣಕ್ಕೆ ಇದೇ ಸಂದರ್ಭದಲ್ಲಿ ಸೇರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT