ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹದ್ಯೋಗಿಯಿಂದಲೇ ನಾಲ್ವರು ಸಿಆರ್‌ಪಿಎಫ್ ಸೈನಿಕರ ಹತ್ಯೆ

Last Updated 25 ಡಿಸೆಂಬರ್ 2012, 8:24 IST
ಅಕ್ಷರ ಗಾತ್ರ

ರಾಯ್‌ಪುರ್ (ಐಎಎನ್‌ಎಸ್): ಕೇಂದ್ರ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್) ಸೈನಿಕನೊರ್ವ ಗುಂಡು ಹಾರಿಸಿ ನಾಲ್ವರು ಸಹದ್ಯೋಗಿಗಳನ್ನು ಹತ್ಯೆ ಮಾಡಿದ ಘಟನೆಯು ಛತ್ತಿಸ್‌ಗಢದ ದಾಂತೇವಾಡ ಜಿಲ್ಲೆಯಲ್ಲಿ ಮಂಗಳವಾರ ನಸುಕಿನ ಜಾವ ನಡೆದಿದೆ.

ಮಾವೋವಾದಿ ನಕ್ಸಲ್‌ರ ಪ್ರಾಬಲ್ಯವಿರುವ ದಾಂತೇವಾಡದಿಂದ ಸುಮಾರು 60ಕಿ.ಮೀ ದೂರದಲ್ಲಿರುವ ಅರಣ್‌ಪುರ ಗ್ರಾಮದಲ್ಲಿರುವ ಸಿಆರ್‌ಪಿಎಫ್‌ನ 111ನೇ ಬೇಟಾಲಿಯನ್‌ನಲ್ಲಿ ಮಂಗಳವಾರ ನಸುಕಿನ ಜಾವ 1ಗಂಟೆಯ ಸುಮಾರಿಗೆ ಈ ಘಟನೆ ನಡೆದಿದ್ದು, ಇದರಲ್ಲಿ ನಾಲ್ವರು ಹತರಾಗಿ ಓರ್ವ ಗಾಯಗೊಂಡಿದ್ದಾನೆ.

ಮಾನಸಿಕ ಅಸ್ವಸ್ಥತೆ ಹೊಂದಿರುವ ದೀಪ್ ಕುಮಾರ್ ತೀವಾರಿ ಎಂಬ ಸೈನಿಕ ಯಾವುದೇ ಕಾರಣವಿಲ್ಲದೇ ತನ್ನ ಐದು ಜನ ಸಹದ್ಯೋಗಿಗಳ ಮೇಲೆ ಗುಂಡು ಹಾರಿಸಿದ್ದು, ಘಟನೆಯಲ್ಲಿ ನಾಲ್ವರು ಮೃತಪಟ್ಟು, ಓರ್ವ ಗಾಯಗೊಂಡಿದ್ದಾನೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನರೇಂದ್ರ ಖರೆ ತಿಳಿಸಿದರು.

ಘಟನೆಯಲ್ಲಿ ಸ್ಥಳದಲ್ಲಿಯೇ ಮೂವರು ಮೃತಪಟ್ಟರೆ, ಓರ್ವ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆದಲ್ಲಿ ಕೊನೆಯುಸಿರೆಳೆದ ಗಾಯಗೊಂಡಿರುವ ಇನ್ನೊರ್ವನ ಸ್ಥಿತಿ ಗಂಭೀರವಾಗಿದ್ದು, ಆತನನ್ನು ಜಗದಲ್‌ಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಖರೆ ಹೇಳಿದರು.

ಮೃತಪಟ್ಟ ಸೈನಿಕರನ್ನು ಚಂದನ್ ಸಿಂಗ್, ರಮೇಶ್, ಪುರುಷೋತ್ತಮ್ ಹಾಗೂ ಅನಿರುದ್ಧ ಸಿಂಗ್ ಎಂದು ಗುರ್ತಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT