ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹಾಯಕ ನಿರ್ದೇಶಕಿ ಸೇವೆಯಿಂದ ವಜಾ

Last Updated 19 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರು: ಅಕ್ರಮ ಎಸಗಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟುಮಾಡಿದ ಆರೋಪ ಎದುರಿಸುತ್ತಿದ್ದ ಶಿರಸಿಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಸಹಾ­ಯಕ ನಿರ್ದೇಶಕಿ ಸುಧಾತಾಯಿ ಎನ್‌.ಹಿರೇಮನಿ ಮತ್ತು ರಾಯಚೂರು ಜಿಲ್ಲಾ ಪಂಚಾಯಿತಿಯ ಕಿರಿಯ ಎಂಜಿನಿ­ಯರ್‌ ಬಿ.ಎಂ.ಮಲ್ಲಣ್ಣ ಅವರನ್ನು ಸೇವೆಯಿಂದ ವಜಾ ಮಾಡಲು ಸಂಪುಟ ತೀರ್ಮಾನಿಸಿದೆ.

‘ಸುಧಾತಾಯಿ ಅವರು ಬಾಗಲ­ಕೋಟೆಯ ಎಪಿಎಂಸಿ ಸಹಾಯಕ ನಿರ್ದೇಶಕಿ ಹುದ್ದೆಯಲ್ಲಿದ್ದರು. ಅಲ್ಲಿನ ಕೇಸ­ನೂರು ಗ್ರಾಮದಲ್ಲಿ ಎಪಿಎಂಸಿ ಹೊಂದಿದ್ದ 30ಎಕರೆ ಜಮೀನನ್ನು 2009ರಲ್ಲಿ ರೂ 15 ಲಕ್ಷಕ್ಕೆ ತಿರುಪತಿ ಹಡಗಲಿ ಎಂಬುವರಿಗೆ ಮಾರಾಟ ಮಾಡಿ­ದ್ದರು. ಆಗ ಈ ಜಮೀನಿನ ಮಾರ್ಗ­ಸೂಚಿ ದರವೇ ರೂ 3.13 ಕೋಟಿ ಇತ್ತು. ಮಾರುಕಟ್ಟೆ ದರ ರೂ10­ಕೋಟಿಗೂ ಹೆಚ್ಚು ಎಂದು ಅಂದಾಜಿಸಲಾಗಿದೆ’.

ಈ ಪ್ರಕರಣದ ಕುರಿತು ತನಿಖೆ ನಡೆಸಿದ ಲೋಕಾ­ಯುಕ್ತರು, ಸುಧಾ­ತಾಯಿ ಅವರನ್ನು ಸೇವೆಯಿಂದ ಕಡ್ಡಾಯ ನಿವೃತ್ತಿ­ಗೊಳಿ­ಸಲು ಶಿಫಾರಸು ಮಾಡಿದ್ದರು. ಆದರೆ, ಇನ್ನೂ ಕಠಿಣ ಕ್ರಮ ಅಗತ್ಯವೆಂದು ಭಾವಿ­ಸಿರುವ ಸಂಪುಟವು, ವಜಾ ಮಾಡುವ ನಿರ್ಧಾರ ಕೈಗೊಂಡಿದೆ ಎಂದರು.

ಮಲ್ಲಣ್ಣ ಅವರು ರಾಯಚೂರು ಜಿಲ್ಲಾ ಪಂಚಾಯಿತಿಯು ಕೈಗೆತ್ತಿ­ಕೊಂಡಿದ್ದ ರೂ 3.47 ಕೋಟಿ ವೆಚ್ಚದ ನೀರು ಸರಬರಾಜು ಯೋಜನೆ ಕಾಮ­ಗಾರಿಯ ಉಸ್ತುವಾರಿ ವಹಿಸಿ­ದ್ದರು. ಈ ಸಂದರ್ಭದಲ್ಲಿ ರೂ 1.64 ಕೋಟಿ ದುರ್ಬಳಕೆ ಮಾಡಿಕೊಂಡಿದ್ದರು. ಈ ಆರೋಪ ಸಾಬೀತಾದ ಕಾರಣದಿಂದ ಅವರನ್ನೂ ಕಡ್ಡಾಯ ನಿವೃತ್ತಿಗೊಳಿಸುವ ಪ್ರಸ್ತಾವ ಇತ್ತು. ಆದರೆ ಸೇವೆಯಿಂದ ವಜಾ ಮಾಡುವ ನಿರ್ಧಾರವನ್ನೇ ಕೈಗೊಳ್ಳಲಾಯಿತು ಎಂದು ಹೇಳಿದರು.

ಇಬ್ಬರಿಗೂ ನಿವೃತ್ತಿ ನಂತರದ ಸೌಲಭ್ಯ­ಗಳು ದೊರೆಯುವುದಿಲ್ಲ. ಎರಡೂ ಪ್ರಕರಣಗಳಲ್ಲಿ ನಷ್ಟ ವಸೂಲಿಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT