ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹೋದ್ಯೋಗಿಗಳ ಜತೆ ವೇತನ ಚರ್ಚೆ ಇಲ್ಲವೇ ಇಲ್ಲ..!

Last Updated 15 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ನ್ಯೂಯಾರ್ಕ್ (ಪಿಟಿಐ): ಅತ್ತೆಯ ಕಿರಿಕಿರಿ, ಗಂಡನ ಮುನಿಸು, ಕೈಕೊಟ್ಟ ಪ್ರೇಯಸಿ... ಎಲ್ಲರ ಕುರಿತೂ ಸಹೋದ್ಯೋಗಿಗಳ ಜತೆ ಚರ್ಚಿಸಬಹುದು.
ಆದರೆ, ಸಂಬಳದ ವಿಚಾರದಲ್ಲಿ ಮಾತ್ರ ಸಹೋದ್ಯೋಗಿಗಳ  ಜತೆ ಚರ್ಚಿಸಲು ಮನಸ್ಸು ಹಿಂಜರಿಯುತ್ತದೆ. ಬಾಯಿ ಕಟ್ಟುತ್ತದೆ.

ಇದು ಕೇವಲ ಒಂದು ದೇಶದ ಜನರ ಕಥೆಯಲ್ಲ. ಸಂಬಳದ ಬಗ್ಗೆ ಮಾತನಾಡುವುದು ಅಂದರೆ ಜಗತ್ತಿನ ಎಲ್ಲ ಭಾಗದ ಜನರಿಗೂ ಮುಜುಗರವಂತೆ...!
ವೇತನದ ವಿಷಯ ಬಂದಾಗ ಎಲ್ಲ ದೇಶಗಳ ಜನರೂ, `ನಮ್ಮನ್ನು ಕೇಳಬೇಡಿ, ನೀವೂ ಹೇಳಬೇಡಿ' ಎಂಬ ನೀತಿಯನ್ನು ಅನುಸರಿಸುತ್ತಾರೆ ಎಂಬ ಅಂಶ ಪ್ರಸಿದ್ಧ ಉದ್ಯೋಗ ಜಾಲತಾಣವಾದ `ಮಾನ್‌ಸ್ಟರ್ ಡಾಟ್‌ಕಾಮ್' ನಡೆಸಿದ ಜಾಗತಿಕ ಅಧ್ಯಯನದಿಂದ ಬಹಿರಂಗಗೊಂಡಿದೆ.   

ಪ್ರಪಂಚದ  ಬಹುತೇಕ ಉದ್ಯೋಗಿಗಳು ತಮ್ಮ ಸಹೋದ್ಯೋಗಿಗಳೊಂದಿಗೆ ವೇತನ, ಲಾಭಾಂಶ, ರಜಾದಿನಗಳು, ಅನಾರೋಗ್ಯ ವಿಷಯಗಳನ್ನು ಚರ್ಚಿಸುವದಕ್ಕೆ ಹಿಂಜರಿಯುತ್ತಾರೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT