ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಂಪ್ರದಾಯಿಕ ಕಲೆಗೆ ಪ್ರೋತ್ಸಾಹ: ಗೋಪಾಲ್

Last Updated 28 ಜನವರಿ 2012, 11:05 IST
ಅಕ್ಷರ ಗಾತ್ರ

ಮೈಸೂರು: ಸಾಂಪ್ರದಾಯಿಕ ಮೈಸೂರು ಕಲೆಯನ್ನು ಬೆಳೆಸುವ ನಿಟ್ಟಿನಲ್ಲಿ ಕಲಾ ಶಾಲೆಯ ವಿದ್ಯಾರ್ಥಿಗಳಿಗೆ ಶಿಬಿರಗಳನ್ನು ಏರ್ಪಡಿಸಲು ಉದ್ದೇಶಿಸಲಾಗಿದೆ ಎಂದು ಪುರಾತತ್ವ ಹಾಗೂ ವಸ್ತು ಸಂಗ್ರಹಾಲಯದ ನಿರ್ದೇಶಕ ಡಾ.ಆರ್.ಗೋಪಾಲ್ ಅಭಿಪ್ರಾಯಪಟ್ಟರು.

ಇಲ್ಲಿನ ವಸ್ತು ಪ್ರದರ್ಶನ ಆವರಣದಲ್ಲಿರುವ ಪುರಾತತ್ವ ಹಾಗೂ ವಸ್ತು ಸಂಗ್ರಹಾಲಯದಲ್ಲಿ ಎಂ.ಗಿರಿಜಾ ಅವರ ಮೈಸೂರು ಸಾಂಪ್ರದಾಯಿಕ ಚಿತ್ರಗಳು, ರಾಗಚಿತ್ರಗಳು ಹಾಗೂ ಗಂಜೀಫಾ ಚಿತ್ರಗಳ ಪ್ರದರ್ಶನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮೈಸೂರು ಶೈಲಿಯ ಕಲೆಯನ್ನು ಉಳಿಸಿ ಬೆಳೆಸಬೇಕು ಎನ್ನುವ ನಿಟ್ಟಿನಲ್ಲಿ ಈ ಕಲಾ ಗ್ಯಾಲರಿಯನ್ನು ಆರಂಭಿಸಿದ್ದು, ಮೈಸೂರು ಶೈಲಿಯ ಚಿತ್ರಕಲಾ ಪ್ರದರ್ಶ ನಕ್ಕೆ ಗ್ಯಾಲರಿಯನ್ನು ಉಚಿತವಾಗಿ ನೀಡಲು ತೀರ್ಮಾನಿಸ ಲಾಗಿದೆ ಎಂದರು.

ಈ ಕಲೆಯನ್ನು ಬೆಳೆಸುವ ನಿಟ್ಟಿನಲ್ಲಿ ಯಾವುದೇ ಸೌಲಭ್ಯ ನೀಡಲು ಸಿದ್ಧವಿರುವುದಾಗಿ ಹೇಳಿದ ಇದಕ್ಕೆ ಬೇಕಾದ ಸೌಲಭ್ಯ, ಪ್ರೋತ್ಸಾಹ ನೀಡಲು ಇಲಾಖೆ ಪ್ರೋತ್ಸಾಹ ನೀಡಲಿದೆ ಎಂದು ಹೇಳಿದರು.

ಭಾರತೀಯ ಕಲೆ ಚರಿತ್ರೆಯ ಪೂರ್ವ ದಿಂದಲೂ ಆರಂಭವಾದ ಕಲೆ. ಮನುಷ್ಯನ ಸಂಸ್ಕೃತಿ ಅನಾದಿ ಕಾಲ ದಿಂದಲೂ ಬೆಳೆದು ಬಂದಿದೆ. ವಿಜಯ ನಗರ ಸಾಮ್ರಾಜ್ಯ ಪತನವಾದ ನಂತರ ಮೈಸೂರು ಅರಸರು ಈ ಕಲೆಯನ್ನು ಪ್ರೋತ್ಸಾಹಿಸಿದರು. ನಂತರದ ದಿನಗಳಲ್ಲಿ ಮೈಸೂರು ಶೈಲಿಯ ಚಿತ್ರ ಕಲಾವಿದರ ಕೊರತೆ ಇದ್ದ ಕಾರಣ ಪ್ರಸಿದ್ಧಿ ಪಡೆಯಲಿಲ್ಲ. ಕಲಾವಿದರ ಕೊರತೆ ಯಿಂದ ತಂಜಾವೂರು ಶೈಲಿ ಪ್ರಸಿದ್ಧ ವಾಗಲು ಕಾರಣವಾಯಿತು ಎಂದು ಅವರು ಹೇಳಿದರು.

  ಕಾರ್ಯಕ್ರಮ ಉದ್ಘಾಟಿಸಿದ ದಕ್ಷಿಣ ವಲಯ ಐಜಿಪಿ ಎ.ಎಸ್.ಎನ್.ಮೂರ್ತಿ ಮಾತನಾಡಿ `ಯಾವುದೇ ಕಲೆಯನ್ನು ಪ್ರೋತ್ಸಾಹಿಸಿದರೆ ಆ ಕಲೆ ಉಳಿಯಲು ಸಾಧ್ಯ. ಮುಖ್ಯವಾಗಿ ಯುವಕರಿಗೆ ಈ ಕಲೆ ಮತ್ತು ಸಂಸ್ಕೃತಿಯ ಬಗ್ಗೆ ನಮಗೆ ತಿಳಿಸಬೇಕು. ಪ್ರೋತ್ಸಾಹ ಇಲ್ಲದಿದ್ದರೆ ಕಲೆಗಾರರು ಬೆಳೆಯುವುದು ಕಷ್ಟ ಎಂದ ಅವರು ಗಿರಿಜಾ ಅವರು ಒಳ್ಳೆಯ ಕಲಾವಿದರು. ಗಿರಿಜಾ ಅವರು ಅನೇಕರಿಗೆ ಕಲೆಯನ್ನು ಕಲಿಸಿದ್ದಾರೆ ಎಂದು ತಿಳಿಸಿದರು.
ಪತ್ರಕರ್ತ ರವೀಂದ್ರಭಟ್ಟ ಮಾತನಾಡಿ ದರು. ಕನ್ನಡ ಬಳಗದ ರಂಗಧಾಮಯ್ಯ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT