ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಂಪ್ರದಾಯಿಕ ಜೀವ ವಿಮೆಯ ಲಾಭಗಳು...

Last Updated 28 ಜೂನ್ 2011, 19:30 IST
ಅಕ್ಷರ ಗಾತ್ರ

ಸಾಂಪ್ರದಾಯಿಕ ಜೀವ ವಿಮೆ ಯೋಜನೆಗಳು ಯಾವವು ಇವೆ? ನಾನು ಇಂತಹ ವಿಮೆ ಯೋಜನೆಗಳನ್ನು ಖರೀದಿಸಬಹುದೇ? ಇದರಿಂದ ನನಗೆ ಆಗುವ ಪ್ರಯೋಜನೆಗಳು ಏನು? ಸದ್ಯದ ಪರಿಸ್ಥಿತಿಯಲ್ಲಿ ಇವುಗಳ ಪ್ರಸ್ತುತಿ ಮತ್ತು ಉಪಯುಕ್ತತೆಗಳೇನು? ಈ ಜೀವ ವಿಮೆಗಳು ಸದ್ಯದ `ಯೂಲಿಪ್~ಗಳಿಗಿಂತ (ಜೀವ ವಿಮೆ ಪಾಲಿಸಿಯ ಕೆಲ ಮೊತ್ತವನ್ನು ಷೇರುಪೇಟೆಯಲ್ಲಿ ತೊಡಗಿಸುವ ಯೋಜನೆಗಳು) ಹೇಗೆ ಭಿನ್ನ? - ಮತ್ತಿತರ ಪ್ರಶ್ನೆಗಳು ಪ್ರತಿಯೊಬ್ಬ ಪಾಲಿಸಿದಾರರ ಮನದಲ್ಲಿ ಮೂಡುವುದು ಸಹಜ.
ವಿಮೆ ಪಾಲಿಸಿ ಖರೀದಿಸುವಾಗ ಇಂತಹ ಅನುಮಾನಗಳು ಪ್ರತಿಯೊಬ್ಬರಿಗೂ ಎದುರಾಗುತ್ತವೆ.

ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಮುನ್ನ, ಪಾಲಿಸಿ ಖರೀದಿದಾರರು ಬಯಸುವುದೇನು? ಮತ್ತು ಜೀವ ವಿಮೆಯಿಂದ ಅವರು ನಿರೀಕ್ಷಿಸುವುದೇನು? ಎನ್ನುವುದೂ ಮುಖ್ಯವಾಗುತ್ತದೆ.

ಮ್ಯಾಕ್ಸ್ ನ್ಯೂಯಾರ್ಕ್ ಲೈಫ್ ಇನ್ಶುರನ್ಸ್ ಕಂಪನಿಯು ಇತ್ತೀಚಿಗೆ ನಡೆಸಿದ ಸಂಶೋಧನೆಯ ಪ್ರಕಾರ, ಗ್ರಾಹಕರು ವಿಮೆ ಪಾಲಿಸಿ ಆಯ್ಕೆ ಮಾಡಿಕೊಳ್ಳುವಾಗ, ತಮ್ಮ ಕೈ ಸೇರುವ ಅಂತಿಮ ಮೊತ್ತ (ಛ್ಞಿಟಡಿಞಛ್ಞಿಠಿ) ಅಥವಾ ನಿಗದಿತ ಮಧ್ಯಂತರದಲ್ಲಿ ಹಣ ಮರಳಿ ಬರುವ (ಞಟ್ಞಛಿ ಚಿಚ್ಚ ಟ್ಝಜ್ಚಿ) ಗಳಿಗೆ ಅತಿ ಹೆಚ್ಚಿನ ಆದ್ಯತೆ ನೀಡಿರುವುದು ಕಂಡು ಬರುತ್ತದೆ.

ವಿಮಾ ಪಾಲಿಸಿದಾರರಿಗೆ ಒಪ್ಪಿತ ಅವಧಿ ಮುಗಿದ ನಂತರ ಕೊಡುವ ಅಂತಿಮ ಮೊತ್ತ ಅಥವಾ ಪಾಲಿಸಿದಾರ ಆಕಸ್ಮಿಕವಾಗಿ ಮೃತಪಟ್ಟರೆ ಆತ ಸೂಚಿಸಿದ ವ್ಯಕ್ತಿಗೆ ಪಾಲಿಸಿಯ ಒಟ್ಟು ಮೊತ್ತ ಪಾವತಿಸುವ ವಿಮೆ ಯೋಜನೆಗೆ  `ಎಂಡೊಮೆಂಟ್ ಪಾಲಿಸಿ~ ಎನ್ನುತ್ತಾರೆ.

ಈ ಹಿನ್ನೆಲೆಯಲ್ಲಿ ವಿಮೆ ಪಾಲಿಸಿದಾರರು ತಮ್ಮ ವಿಮೆ ಹಣ ಕೊನೆಯವರೆಗೂ ಸುರಕ್ಷಿತವಾಗಿರಲು ಮತ್ತು ದೀರ್ಘಾವಧಿ ಉಳಿತಾಯ ಯೋಜನೆ ಹಾಗೂ ಕುಟುಂಬದ ಹಣಕಾಸು ರಕ್ಷಣೆ ವಿಷಯದಲ್ಲಿ ಯಾವುದೇ ಅಡಚಣೆಗಳು ಎದುರಾಗದೇ ಉಳಿತಾಯ ಮೊತ್ತ ವೃದ್ಧಿಯಾಗಬೇಕೆಂದು ಬಯಸುತ್ತಾರೆ.

ಸಾಂಪ್ರದಾಯಿಕ ಯೋಜನೆಗಳು ಮತ್ತು  ಗ್ರಾಹಕರಿಗೆ ಅವುಗಳ ಉಪಯುಕ್ತತೆ
ಸಾಂಪ್ರದಾಯಿಕ ವಿಮೆ ಯೋಜನೆಗಳಾದ ನಿಶ್ಚಿತ ಅವಧಿ, ಎಂಡೊಮೆಂಟ್ ಮತ್ತು ಪೂರ್ಣ ಜೀವಿತಾವಧಿ ಯೋಜನೆಗಳು- ಬಹುಬಗೆಯ ಪ್ರಯೋಜನಗಳನ್ನು ಒದಗಿಸುತ್ತವೆ. ಗಂಡಾಂತರ ವಿರುದ್ಧ ರಕ್ಷಣೆ, ಲಾಭ, ಸುರಕ್ಷತೆ ಮತ್ತು ತೆರಿಗೆ ಲಾಭಗಳನ್ನು ಇಲ್ಲಿ ಪಟ್ಟಿ ಮಾಡಬಹುದು.

ಈ ಸಾಂಪ್ರದಾಯಿಕ ಯೋಜನೆಗಳು ಗಂಡಾಂತರ (ಅನಿರೀಕ್ಷಿತ ನಷ್ಟದಿಂದ) ಮುಕ್ತವಾಗಿರುತ್ತವೆ. ಪಾಲಿಸಿ ಅವಧಿ ಪೂರ್ಣಗೊಳ್ಳುತ್ತಿದ್ದಂತೆ ಅಥವಾ ಆಕಸ್ಮಿಕ ಸಾವು ಸಂಭವಿಸಿದ ಸಂದರ್ಭಗಳಲ್ಲಿ ನಿಶ್ಚಿತ  ಮೊತ್ತ ಪಾವತಿಸುತ್ತವೆ. ಒಟ್ಟಾರೆ ಪಾಲಿಸಿಯ ಹಣವನ್ನು ಷೇರುಪೇಟೆಯಲ್ಲಿ ಹೂಡಿಕೆ ಮಾಡಲು ಬಂಡವಾಳ ಹೂಡಿಕೆ ಮಾರ್ಗದರ್ಶನಗಳು ನಿರ್ದಿಷ್ಟ ಮಿತಿ ವಿಧಿಸಿರುವುದರಿಂದ ಇಲ್ಲಿ ಪಾಲಿಸಿಗಳಿಂದ ಬರುವ ಲಾಭವು ಸುರಕ್ಷಿತವಾಗಿರುತ್ತದೆ.

ಜೀವ ವಿಮೆ ಉದ್ದಿಮೆ ಮತ್ತು ಗ್ರಾಹಕರು ಎದುರಿಸುವ ಸವಾಲು ಮತ್ತು ಆತಂಕಗಳಿಗೆ ಸಾಂಪ್ರದಾಯಿಕ ಜೀವ ವಿಮೆ ಪಾಲಿಸಿಗಳು ಸಮರ್ಪಕ ಉತ್ತರ ನೀಡಬಲ್ಲವು ಎನ್ನುವುದಕ್ಕೆ ಇಲ್ಲಿ ಇನ್ನಷ್ಟು ಸಮರ್ಥನೀಯ ಕಾರಣಗಳಿವೆ.

1. ಇಲ್ಲಿ ವಿಮೆ ಪಾಲಿಸಿದಾರರ ಮತ್ತು ವಿಮೆ ಸಂಸ್ಥೆಯ ಹಿತಾಸಕ್ತಿಗಳು ಒಂದೇ ಬಗೆಯಲ್ಲಿ ಇರುತ್ತವೆ.

- ಗ್ರಾಹಕರ ವಿಮೆ ಪಾಲಿಸಿಗಳು ಲಾಭದಾಯಕವಾಗಿದ್ದರೆ ಮಾತ್ರ ವಿಮೆ ಸಂಸ್ಥೆಗಳೂ ಲಾಭ ಮಾಡಿಕೊಳ್ಳುತ್ತವೆ. ಹೀಗಾಗಿ ವಿಮೆ ಸಂಸ್ಥೆ ಮತ್ತು ಗ್ರಾಹಕರ ಹಿತಾಸಕ್ತಿ ರಕ್ಷಣೆ ಒಂದೇ ಬಗೆಯಲ್ಲಿ ಇರುತ್ತದೆ. ವಿಮೆ ಕಾನೂನಿನ ಪ್ರಕಾರ, ವಿಮೆ ಸಂಸ್ಥೆಯು ಒಟ್ಟಾರೆ ಲಾಭದ ಒಂದು ಹತ್ತಾಂಶದಷ್ಟು (1/10) ಮಾತ್ರ  ತನ್ನ ಬಳಿ ಉಳಿಸಿಕೊಂಡು ಒಂಬತ್ತು ಹತ್ತಾಂಶದಷ್ಟು (9/10) ಲಾಭವನ್ನು ವಿಮೆ ಪಾಲಿಸಿದಾರರಲ್ಲಿ ಹಂಚಬೇಕಾಗುತ್ತದೆ.  ವಿಮೆ ರಂಗದಲ್ಲಿ ಇದು `90/10~ ಎಂದೇ ರೂಢಿಯಲ್ಲಿದೆ.

ಸರಳವಾಗಿ ಹೇಳಬೇಕೆಂದರೆ, ವಿಮೆ ಸಂಸ್ಥೆಯು ್ಙ 100ಗಳಷ್ಟು ಲಾಭ ಗಳಿಸಿದ್ದರೆ, ಅಂದಾಜು ರೂ 90ರಷ್ಟನ್ನು ಮೊದಲು ಗ್ರಾಹಕರಿಗೆ ವಿತರಿಸಬೇಕು. `ಮ್ಯಾಕ್ಸ್ ನ್ಯೂಯಾರ್ಕ್ ಲೈಫ್~ ಸಂಸ್ಥೆಯು ವಿಮೆ ವಹಿವಾಟು ಆರಂಭಿಸಿದಂದಿನಿಂದ ತನ್ನ ಸಾಂಪ್ರದಾಯಿಕ ವಿಮೆ ಪಾಲಿಸಿಗಳ ಲಾಭಾಂಶವನ್ನು ನಿಯಮಿತವಾಗಿ ಘೋಷಿಸುತ್ತ ಬಂದಿದೆ.

2. ಹೂಡಿಕೆ ಗಂಡಾಂತರದ ಸಮರ್ಥ ನಿರ್ವಹಣೆ:
`ಯೂಲಿಪ್~ಗಳಲ್ಲಿ ಹೂಡಿಕೆ ಗಂಡಾಂತರವು ಗ್ರಾಹಕರಿಗೆ ನೇರವಾಗಿ ಅನ್ವಯಿಸುತ್ತದೆ. ಇಂತಹ ಪಾಲಿಸಿಗಳಲ್ಲಿ ಇರುವ ನಷ್ಟದ ಸಂಪೂರ್ಣ ಕಲ್ಪನೆಯು ಗ್ರಾಹಕರಿಗೆ ಇರಲಾರದು.

ಸಾಂಪ್ರದಾಯಿಕ ಜೀವ ವಿಮೆ ಪಾಲಿಸಿಗಳಲ್ಲಿ ವಿಮೆ ಸಂಸ್ಥೆಯು ಬಂಡವಾಳವನ್ನು  ದೂರದೃಷ್ಟಿಯಿಂದ ನಿರ್ವಹಿಸುತ್ತದೆ. ಇದು ನಿರಾಸಕ್ತ / ಕ್ರಿಯಾಶೀಲವಲ್ಲದ ಹೂಡಿಕೆದಾರರಿಗೆ ಹೆಚ್ಚು ಪ್ರಯೋಜನಕಾರಿಯಾಗಿರುತ್ತದೆ. ವಿಮೆ ಪಾಲಿಸಿಗಳಲ್ಲಿಯೇ ಹೂಡಿಕೆಯ ಖಾತರಿ ಅಂತರ್ಗತವಾಗಿರುತ್ತದೆ. ಇಲ್ಲಿ ಹೂಡಿಕೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಸಾಂಪ್ರದಾಯಿಕವಾಗಿಯೇ ಹೂಡಲಾಗುತ್ತದೆ. ಲಾಭಾಂಶವೂ ಸುಸೂತ್ರವಾಗಿರುತ್ತದೆ. ಮತ್ತು ನಿಯಮಿತವಾಗಿ ಘೋಷಣೆ ಮಾಡಲಾಗುತ್ತದೆ.

3. ಹೆಚ್ಚಿನ ಸುರಕ್ಷತೆ: ವಿಮೆ ಪಾಲಿಸಿ ಮಾರಾಟದ ಆರಂಭದಿಂದಲೇ ಪಾಲಿಸಿ ಹಣ ವೃದ್ಧಿಯಾಗುವ ಭರವಸೆ ಇರುತ್ತದೆ.  ಕಾಲ ಕಾಲಕ್ಕೆ ಘೋಷಿಸುವ ಬೋನಸ್ ಕೂಡ ಒಟ್ಟು ಪಾಲಿಸಿ ಮೊತ್ತಕ್ಕೆ ಸೇರ್ಪಡೆಗೊಳ್ಳುತ್ತದೆ. `ಯೂಲಿಪ್~ಗಳಿಗೆ ಹೋಲಿಸಿದರೆ, ಸಾಂಪ್ರದಾಯಿಕ ವಿಮೆ ಪಾಲಿಸಿಗಳು  ಹೆಚ್ಚು ಸುರಕ್ಷತೆ ಒದಗಿಸುತ್ತವೆ. ಇಲ್ಲಿ ಸುರಕ್ಷತೆಯು ಹೆಚ್ಚು ಕಡಿಮೆ ಸ್ಥಿರವಾಗಿರುತ್ತದೆ.

4. ಈ ಪಾಲಿಸಿಗಳು ಲಾಭದ ಖಾತರಿ ಒಳಗೊಂಡಿರುತ್ತವೆ: ಇಲ್ಲಿ `ಹಣ ಪಾವತಿಸಿ  ಲಾಭ ಪಡೆಯಿರಿ~ ಸಮೀಕರಣವು ತುಂಬ ಸರಳವಾಗಿರುತ್ತದೆ. ಹೀಗಾಗಿ ಈ ಪಾಲಿಸಿಗಳು ನಷ್ಟದ ಸಾಧ್ಯತೆಯನ್ನು ಗಮನಾರ್ಹವಾಗಿ ತಗ್ಗಿಸುತ್ತವೆ.

`ಯೂಲಿಪ್~ಗಳಂತೆ ಇವು ಷೇರು ಮಾರುಕಟ್ಟೆಗೆ ಅನ್ವಯಿಸುವ  ಪಾಲಿಸಿಗಳಂತೆ ಇರುವುದಿಲ್ಲ.  ಹೀಗಾಗಿ ಊಹಾತ್ಮಕ ಮಾರಾಟ ಮತ್ತು ಖರೀದಿ ಸಾಧ್ಯತೆ ಕಡಿಮೆ ಇರುತ್ತದೆ.

ವಿಶ್ವದಾದ್ಯಂತ ಸಾಂಪ್ರದಾಯಿಕ ಜೀವ ವಿಮೆ ಪಾಲಿಸಿಗಳು `ಯೂಲಿಪ್~ಗಳಿಗಿಂತ  ಹೆಚ್ಚು ಜನಪ್ರಿಯವಾಗಿರುತ್ತವೆ. ಸಾಂಪ್ರದಾಯಿಕ ವಿಮೆ ಪಾಲಿಸಿಗಳು ಎರಡು ಬಗೆಯ ಪ್ರಯೋಜನಗಳನ್ನು ಒಳಗೊಂಡಿರುತ್ತವೆ. ಗ್ರಾಹಕರಿಗೆ ಲಾಭಾಂಶ ಖಾತರಿ ಮತ್ತು ದೀರ್ಘಾವಧಿ ಉಳಿತಾಯಕ್ಕೆ ಸೂಕ್ತ ರಕ್ಷಣೆಯನ್ನೂ ಒದಗಿಸುತ್ತವೆ.

ಇದೇ ಕಾರಣಕ್ಕೆ ದೀರ್ಘಾವಧಿ ಉಳಿತಾಯ ಮತ್ತು ರಕ್ಷಣೆಗೆ ಸಾಂಪ್ರದಾಯಿಕ ಪಾಲಿಸಿಗಳು ಹೆಚ್ಚು ಪ್ರಯೋಜನಕಾರಿಯಾಗಿವೆ ಎನ್ನುವುದು ಎಲ್ಲೆಡೆ ಸಾಬೀತಾಗಿವೆ. ದೇಶದ ವಿಮೆ ಮಾರುಕಟ್ಟೆಗೂ ಈ ಮಾತು ಅನ್ವಯಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT