ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಂಸ್ಕೃತಿಕ ಕಾರ್ಯಕ್ರಮಗಳು -ಭಾನುವಾರ 14, ಅಕ್ಟೋಬರ್

Last Updated 12 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಭಾನುವಾರ 14, ಅಕ್ಟೋಬರ್

`ನಟರಂಗ್~ ಮರಾಠಿ ಚಿತ್ರ ಪ್ರದರ್ಶನ

ಕನ್ನಡಿಗರಿಗೆ ಹೊಸತೇ ಎನಿಸುವಂಥ ಸಿನಿಮಾ ಕುರಿತ ಕಾರ್ಯಕ್ರಮಗಳನ್ನು ವಿನ್ಯಾಸ ಮಾಡಿ ನಿರ್ವಹಿಸಿರುವ `ಸಂವಾದ ಡಾಟ್ ಕಾಂ~ ಭಾನುವಾರ `ನಟರಂಗ್~ ಮರಾಠಿ ಚಿತ್ರ ಪ್ರದರ್ಶನ ಏರ್ಪಡಿಸಿದೆ.
2010ರಲ್ಲಿ ಯಶಸ್ಸು ಪಡೆದ `ನಟರಂಗ್~ ಚಿತ್ರವನ್ನು ರವಿ ಜಾದವ್ ನಿರ್ದೇಶನ ಮಾಡ್ದ್ದಿದರು.  ನಾಟಕ, ನೃತ್ಯದ ಬಗ್ಗೆ ವಿಪರೀತ ಆಸಕ್ತಿ ಹೊಂದಿರುವ ಯುವಕನೊಬ್ಬ ತಂಡ ಕಟ್ಟಿಕೊಂಡು ಕಷ್ಟಗಳ ನಡುವೆಯೂ ಹೋರಾಡುತ್ತಾ, ತನ್ನನ್ನು ತಾನು ಸಂಭಾಳಿಸಿಕೊಂಡು ಗೆಲ್ಲುವ ಕತೆ ಈ ಸಿನಿಮಾದ್ದು.
 
ನಾಟಕ, ನೃತ್ಯ ಮೊದಲಾದವು ಕಥೆಯ ಹಿನ್ನೆಲೆಗೆ ಸಮರ್ಥವಾದ ಹಂದರ ಒದಗಿಸಿವೆ. ನಾಯಕ ಅತುಲ್ ಕುಲಕರ್ಣಿ ಮತ್ತು ನಾಯಕಿ ಸೋನಾಲಿ ಕುಲಕರ್ಣಿ ಜೋಡಿಯ ನಟನೆ ಗಮನ ಸೆಳೆಯುತ್ತದೆ.

ಸಿನಿಮಾ ಕುರಿತ ಚರ್ಚೆಯಲ್ಲಿ  ಸಿನಿಮಾ, ಕಿರುತೆರೆ ಮತ್ತು ರಂಗಭೂಮಿ ನಟಿ ಜಯಲಕ್ಷ್ಮಿ ಪಾಟೀಲ್, ಕನ್ನಡ ಮತ್ತು ಮರಾಠಿ ಲೇಖಕಿ ಸರಸ್ವತಿ, ಸಿನಿಮಾ ವಿಮರ್ಶಕ ಶೇಖರಪೂರ್ಣ ಭಾಗವಹಿಸಲಿದ್ದಾರೆ. ಚಿತ್ರ ಪ್ರದರ್ಶನ ಮತ್ತು ಸಂವಾದಕ್ಕೆ ಮುಂಚಿತವಾಗಿ ಪಾಸ್ ಪಡೆಯುವುದು ಕಡ್ಡಾಯ.
 
ಪಾಸ್‌ಗಾಗಿ: 99004 39930.
ಸ್ಥಳ: ಔರಾ ಮಾಂಟೆಸ್ಸರಿ ಸಭಾಂಗಣ, ನಂ 49, 1ನೇ ತಿರುವು, ಜೆ ಪಿ ನಗರ 7ನೇ ಹಂತ, ಎವರ್‌ಫೈನ್ ಸೂಪರ್ ಮಾರ್ಕೆಟ್ ಹಿಂಭಾಗ. ಮಧ್ಯಾಹ್ನ 3.

`ಅಸಲಿ ನಕಲಿ...ರೀ~`ಆಟದವರು~ ಅಭಿನಯಿಸುವ ನಕಲಿ ವೈದ್ಯನೊಬ್ಬನ ರಹಸ್ಯವನ್ನು ಬಯಲಿಗೆಳೆಯುವ ಕಥಾವಸ್ತುವನ್ನು ಹೊಂದಿರುವ `ಅಸಲಿ ನಕಲಿ...ರೀ~ ನಗೆ ನಾಟಕ ಹನುಮಂತನಗರದ ಕೆ.ಎಚ್. ಕಲಾಸೌಧದಲ್ಲಿ ಪ್ರದರ್ಶನಗೊಳ್ಳಲಿದೆ.

ಈ ನಾಟಕದಲ್ಲಿ ನಕಲಿ ವೈದ್ಯರ ವಿಷಯವನ್ನಷ್ಟೇ ಅಲ್ಲದೇ ಸಮಾಜದಲ್ಲಿ ನಮ್ಮ ಸುತ್ತಮುತ್ತ ನಡೆಯುವ ಘಟನೆಗಳನ್ನು ಆರಿಸಿಕೊಂಡು ಅದಕ್ಕೆ ಹಾಸ್ಯಲೇಪನ ನೀಡಲಾಗಿದೆ. ಸಮಯ ಸಂಜೆ 7. ಪ್ರವೇಶ ದರ- 70. ಮಾಹಿತಿಗೆ- 99860 09335, 98803 29071. ಮುಂಗಡ ಬುಕ್ಕಿಂಗ್‌ಗಾಗಿ bookmyshow.com
 

ವಿನೋದ ಸಾಂಸ್ಕೃತಿಕ ವೇದಿಕೆ: ಕೆನ್ ಕಲಾ ಶಾಲೆ, ಶೇಷಾದ್ರಿಪುರ ಪೊಲೀಸ್ ಠಾಣೆ ಹಿಂಭಾಗ, ಶೇಷಾದ್ರಿಪುರ. ಗಾಂಧಿ ಜಯಂತಿ ಪ್ರಯುಕ್ತ ರಾಷ್ಟ್ರಪಿತನಿಗೆ ನುಡಿ-ಗೀತ ನಮನ ಹಾಗೂ ಕವಿಗೋಷ್ಠಿ. ಕುಮಾರ್ ಕಲ್ಚರಲ್ ಅಕಾಡೆಮಿ ತಂಡದವರಿಂದ ಗಾಂಧಿ ಕುರಿತ ಗೀತೆಗಳು.

ಅಧ್ಯಕ್ಷತೆ- ಕವಿ ರವಿಕಿರಣ್. `ಗಾಂಧೀಜಿ ಜೀವನ ಮತ್ತು ಸಾಧನೆ~ ಕುರಿತು ಸಾಹಿತಿ ಡಿ.ಎ. ಲಕ್ಷ್ಮೀನಾಥ್ ಅವರಿಂದ ಉಪನ್ಯಾಸ. ಬೆಳಿಗ್ಗೆ 10.30.
ರಾಗ ಸಂಗಮ: ಕರ್ನಾಟಕ ಟೆಲಿಕಾಂ, ಅಫಸೋವ ವೆಲ್‌ಫೇರ್ ಅಸೋಸಿಯೇಷನ್, `ಸಿ~ ಬ್ಲಾಕ್, ಕೊಡಿಗೇಹಳ್ಳಿ ರೈಲ್ವೆ ಸ್ಟೇಷನ್ ಹತ್ತಿರ, ಸಹಕಾರನಗರ. ಕೌಶಿಕ್ ಐತಾಳ್ ಅವರಿಂದ ಗಾಯನ, ಉಮಾಕಾಂತ್ ಪುರಾಣಿಕ್ (ಹಾರ್ಮೋನಿಯಂ), ಗುರುಚರಣ್ ಗರುಡ್ (ತಬಲ). ಸಂಜೆ 6.

ಸಂಗೀತಾ ಕೃಪಾ ಕುಟೀರ: ದತ್ತಾತ್ರೇಯ ದೇವಸ್ಥಾನ, 3ನೇ ಬ್ಲಾಕ್, 6ನೇ ಮುಖ್ಯರಸ್ತೆ, ತ್ಯಾಗರಾಜನಗರ. ಕವಿತಾ ಟಿ.ಎಸ್. ಅವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಗಾಯನ. ಹಾರ್ಮೋನಿಯಂ- ಕೆ.ಗುರುರಾಜ್, ಎಲ್.ಎಸ್. ಸುದತ್ತ (ತಬಲ). ಸಂಜೆ 5.45.

ಅಕ್ಷರದಾಹ
: ಪೇಜ್‌ವರ್ಲ್ಡ್ ಇಂಡಿಯಾ, ನಂ.9, 1ನೇ ಮುಖ್ಯರಸ್ತೆ, 1ನೇ ಕ್ರಾಸ್, ಸಂತೃಪ್ತಿ ನಗರ, ಕೊತ್ತನೂರು ದಿನ್ನೆ ಮುಖ್ಯರಸ್ತೆ, ಜೆ.ಪಿ. ನಗರ 7ನೇ ಹಂತ (ಕಾಕಾಲ್ ಕೈರುಚಿ ಹಿಂದೆ/ಬಿಗ್ ಬಜಾರ್ ಎದುರು). `ಪ್ರಜಾವಾಣಿ~ಯ ಕಾರ್ಯನಿರ್ವಾಹಕ ಸಂಪಾದಕ ಪದ್ಮರಾಜ ದಂಡಾವತಿ ಅವರೊಡನೆ ಒಂದು ಸಂಜೆ. ನಂತರ ಕನ್ನಡ-ಹಿಂದಿ ಲಘುಸಂಗೀತ. ಗಾಯನ- ರವಿ ಮೂರೂರು, ತಬಲಾ- ತ್ರಿಲೋಚನ ಕಂಪ್ಲಿ. ಸಂಜೆ 5.15.

ಅಂಕಿತ ಪುಸ್ತಕ: ಗಾಂಧಿಬಜಾರ್, ಹನಿಗವಿ `ಡುಂಡಿಯೊಂದಿಗೆ ಒಂದು ಸಂಡೆ~ ಬೆಳಿಗ್ಗೆ 10.30.

ವೇದಭಾಷ್ಯ ಪ್ರಕಾಶನ ಸಮಿತಿ: ಆರ್.ವಿ. ಶಿಕ್ಷಕರ ಕಾಲೇಜು ಸಭಾಂಗಣ, ಆರ್.ವಿ. ರಸ್ತೆ, ಅಶೋಕ ಪಿಲ್ಲರ್ ಹತ್ತಿರ, ಜಯನಗರ 2ನೇ ಬ್ಲಾಕ್. ಸ್ವಾಮಿ ದಯಾನಂದ ಸರಸ್ವತಿ ಅವರ ಕನ್ನಡ ವೇದಭಾಷ್ಯ ಹದಿನೆಂಟನೆಯ ಸಂಪುಟ `ಋಗ್ವೇದ ಭಾಷ್ಯ (ಭಾಗ-6) ಲೋಕಾರ್ಪಣೆ ಕಾನೂನು ಸಚಿವ ಎಸ್.ಸುರೇಶ್ ಕುಮಾರ್ ಅವರಿಂದ. ಅಧ್ಯಕ್ಷತೆ- ತಪಸೀಹಳ್ಳಿಯ ಪುಷ್ಪಾಂಡಜ ಮಹರ್ಷಿ ಆಶ್ರಮದ ಸ್ವಾಮಿ ದಿವ್ಯ ಜ್ಞಾನಾನಂದ. ಅತಿಥಿ-ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಡಾ. ಎಚ್.ಎಸ್. ದೊರೆಸ್ವಾಮಿ. ಬೆಳಿಗ್ಗೆ 10.

ಭಾರತೀಯ ವಿದ್ಯಾಭವನ, ಪ್ರಯೋಗ ರಂಗ: ಭವನದ ಸಭಾಂಗಣ, ರೇಸ್‌ಕೋರ್ಸ್ ರಸ್ತೆ. ಡಾ. ಚಂದ್ರಶೇಖರ ಕಂಬಾರ ಅವರ `ಶಿವರಾತ್ರಿ~ ನಾಟಕ ಪ್ರದರ್ಶನ. ನಿರ್ದೇಶನ- ಕೃಷ್ಣಮೂರ್ತಿ ಕವತ್ತಾರ್. ಸಂಜೆ 7.30.

ಕೃತಿ ಲೋಕಾರ್ಪಣೆ
ಮಹಾವೀರ ಮಿಷನ್:
ಎಚ್. ಬಿ. ಸಮಾಜ ಸಭಾಂಗಣ, ಗಾಂಧಿಬಜಾರ್, ಬಸವನಗುಡಿ. ಬೆಳಿಗ್ಗೆ 10ಕ್ಕೆ ಉದ್ಘಾಟನೆ ಹಾಗೂ ಗ್ರಂಥಗಳ ಲೋಕಾರ್ಪಣಾ ಸಮಾರಂಭ. ಉದ್ಘಾಟನೆ- ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪುಂಡಲೀಕ ಹಾಲಂಬಿ. ಅಧ್ಯಕ್ಷತೆ- ವಿಮರ್ಶಕ ಡಾ. ಪಿ.ವಿ. ನಾರಾಯಣ. ಹೊ.ಶ್ರೀ. ವಸಂತಕುಮಾರ್ ಅವರ `ಜೈನರಾಮಾಯಣ-ಭಾಗ-1, ಹೊಳಲ್ಕೆರೆ ಜಿನಮಂದಿರದ ಜೀರ್ಣೋದ್ಧಾರದ ಕಥೆ~ ಕೃತಿಗಳ ಲೋಕಾರ್ಪಣೆ ಬೆಂಗಳೂರು ದೂರದರ್ಶನ ಕೇಂದ್ರದ ಉಪಮಹಾನಿರ್ದೇಶಕ ಡಾ.ಮಹೇಶ ಜೋಷಿ ಅವರಿಂದ.

ಅತಿಥಿ-ಅತ್ತಿಮಬ್ಬೆ ಪ್ರತಿಷ್ಠಾನದ ಸಂಸ್ಥಾಪಕರಾದ ಮನೋಹರಿ ಪಾರ್ಥಸಾರಥಿ. ಮಧ್ಯಾಹ್ನ 12.30ಕ್ಕೆ `ಭರತ-ಬಾಹುಬಲಿ ಪ್ರಸಂಗ~ ಗೋಷ್ಠಿ. ಅಧ್ಯಕ್ಷತೆ, ನಾಟ್ಯರಾಣಿ ನೀಲಾಂಜನೆ ಪ್ರಸಂಗ ಕುರಿತು ಉಪನ್ಯಾಸ- ಸಾಹಿತಿ ಡಾ. ಸಾ.ಶಿ. ಮರುಳಯ್ಯ. ಉಪನ್ಯಾಸ- ಸೇಂಟ್ ಜೋಸೆಫ್ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಕೋ.ವೆಂ. ರಾಮಕೃಷ್ಣೇಗೌಡ.


ಮಧ್ಯಾಹ್ನ 2ಕ್ಕೆ ಡಾ. ಎ.ವಿ. ಪ್ರಸನ್ನ ಮತ್ತು ನಿರ್ಮಲಾಪ್ರಸನ್ನ ಅವರಿಂದ ಗಮಕ ವಾಚನ- ವ್ಯಾಖ್ಯಾನ. ಕಾವ್ಯಭಾಗ- ಪಂಪಸಾಹಿತ್ಯ. ಮಧ್ಯಾಹ್ನ 3ಕ್ಕೆ ಗೋಷ್ಠಿಯಲ್ಲಿ ಪಂಪನ ಕೃತಿಗಳ ಸಮೀಕ್ಷೆ. ಸಂಜೆ 5ಕ್ಕೆ ಸಮಾರೋಪ ಸಮಾರಂಭ. ಅಧ್ಯಕ್ಷತೆ- ಸಾಹಿತಿ ಚಂದ್ರಶೇಖರ್ ಪಾಟೀಲ. ಅತಿಥಿ- ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಡಾ. ನಲ್ಲೂರು ಪ್ರಸಾದ್.

ಸಂಧ್ಯಾದೀಪ ಟ್ರಸ್ಟ್:
ಜ್ಯೋತಿ ಸಭಾಂಗಣ, ಸಂಧ್ಯಾದೀಪ ವೃದ್ಧಾಶ್ರಮ, 39ನೇ ಕ್ರಾಸ್ ಪೂರ್ಣಪ್ರಜ್ಞಾ ಬಡಾವಣೆ. ನವೀಕೃತ ಕೊಠಡಿಗಳ ಲೋಕಾರ್ಪಣೆ ಮತ್ತು `ಅಕ್ಕರೆಯ ಅಮ್ಮಯ್ಯ~ (ದಿ. ಸರೋಜಮ್ಮ ಅವರ ನೆನಪು) ಪುಸ್ತಕ ಬಿಡುಗಡೆ- ಚಿಂತಕ ಡಾ.ಕೆ. ಮರುಳಸಿದ್ದಪ್ಪ, ಅಧ್ಯಕ್ಷತೆ- ಪತ್ರಕರ್ತೆ ಡಾ. ವಿಜಯಾ, ಉದ್ಘಾಟನೆ- ಶಾಸಕ ಎಂ. ಕೃಷ್ಣಪ್ಪ, ಕೃತಿ ಕುರಿತು- ಸಾಹಿತಿ ಡಾ.ಎಸ್.ಎಂ. ವೃಷಭೇಂದ್ರಸ್ವಾಮಿ, ಗೀತಗಾಯನ- ಹಿರಿಯ ಗಾಯಕ ಡಾ. ಶಿವಮೊಗ್ಗ ಸುಬ್ಬಣ್ಣ. ಬೆಳಿಗ್ಗೆ 10.30.

ಪಂಡಿತರತ್ನ ಎ. ಶಾಂತಿರಾಜಶಾಸ್ತ್ರಿ ಟ್ರಸ್ಟ್: ಡಾ. ಡಿ. ವೀರೇಂದ್ರ ಹೆಗ್ಗಡೆ ಸಭಾ ಭವನ, ಕರ್ನಾಟಕ ಜೈನ ಭವನ, ಕೆ.ಆರ್. ರಸ್ತೆ. 24ನೇ ವಾರ್ಷಿಕೋತ್ಸವ, ಸುಧಾರ್ಥಿ ಹಾಸನ ಅವರ `ಸಿರಿಭೂವಲಯದ ಒಳನೋಟ~ ಕೃತಿ ಲೋಕಾರ್ಪಣೆ- ಧರ್ಮಸ್ಥಳದ ಡಿ. ಸುರೇಂದ್ರ ಕುಮಾರ್. ಸಾನಿಧ್ಯ- ಮುನಿಶ್ರೀ ಪುಣ್ಯಸಾಗರಜಿ ಮಹಾರಾಜ, ಉದ್ಘಾಟನೆ- ಪ್ರೊ. ಹಂಪ ನಾಗರಾಜಯ್ಯ, ಅಧ್ಯಕ್ಷತೆ- ಟ್ರಸ್ಟ್‌ನ ಅಧ್ಯಕ್ಷ ಎಸ್. ನಾಗಕುಮಾರ್. ಮಧ್ಯಾಹ್ನ 3.

ಸುಚಿತ್ರ ಸಿನಿಮಾ ಮತ್ತು ಸಾಂಸ್ಕೃತಿಕ ಅಕಾಡೆಮಿ: ಪೀರ್‌ಬಯಲು ರಂಗಸ್ಥಳ, ನಂ.36, ಬಿ.ವಿ.ಕಾರಂತ ರಸ್ತೆ, ಬನಶಂಕರಿ, 2ನೇ ಹಂತ.

ಡಾ.ಹೊ.ಮ. ಪಂಡಿತಾರಾಧ್ಯ ಅವರಿಂದ `ಮಾತೃ ಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ~ ಕುರಿತು ಉಪನ್ಯಾಸ. ಕಿನ್ನೂರಿ ಬೆಳಕಲ್ಲಿ ನಾಟಕ ಪ್ರದರ್ಶನ. ರಚನೆ- ಡಾ. ಬೈರೇಗೌಡ. ನಿರ್ದೇಶನ- ರಾಮಕೃಷ್ಣ ಬೆಳ್ತೂರು. ಸಂಜೆ 5.30.


ರಂಗ ಶಂಕರ, ಜಸ್ಟ್‌ಬುಕ್ಸ್: ಜಸ್ಟ್‌ಬುಕ್ಸ್‌ನ ಜೆ.ಪಿ.ನಗರ, ವಿಜಯಾ ಬ್ಯಾಂಕ್ ಲೇಔಟ್, ವಿದ್ಯಾರಣ್ಯಪುರದಲ್ಲಿರುವ ಶಾಖೆಗಳಲ್ಲಿ ಪದ್ಮಾವತಿ ರಾವ್, ಆರ್.ಜೆ. ಶ್ರದ್ಧಾ ಚೌಧರಿ, ವಾಸಂತಿ ಹರಿಪ್ರಕಾಶ್ ಹಾಗೂ ಆರತಿ ಅನೆ ಅವರಿಂದ ಮಕ್ಕಳಿಗಾಗಿ ಷೇಕ್ಸ್‌ಪೀಯರ್ ನಾಟಕ ವಾಚನ. ಬೆಳಿಗ್ಗೆ 11. ಪ್ರವೇಶ ಉಚಿತ.

ಸರಸ್ವತಿ ಗಾನ ಸಭಾ: ಉನ್ನತಿ ಕೇಂದ್ರ, ನಂ. 1, ಗಣೇಶ ದೇವಸ್ಥಾನ ರಸ್ತೆ, ಎನ್‌ಜಿಇಎಫ್ ಲೇಔಟ್, ಸದಾನಂದನಗರ. ಮೋಹನ್ ಸಂತಾನಮ್, ವಿಠಲ್ ರಂಗನ್, ಕೆ.ಯು. ಜಯಚಂದ್ರ ರಾವ್ ಅವರಿಂದ ತಿಂಗಳ ಸಂಗೀತ ಕಾರ್ಯಕ್ರಮ. ಸಂಜೆ 5.

ಬೆಂಗಳೂರು ರೋಟರಿ ಹೈಗ್ರೌಂಡ್ಸ್: ಸೋಫಿಯಾ ಸ್ಕೂಲ್ ಸಭಾಂಗಣ, ಚಾಲುಕ್ಯ ಹೋಟೆಲ್ ಬಳಿ ಹೈ ಗ್ರೌಂಡ್ಸ್. ಬಾಲಿವುಡ್‌ನ ಜನಪ್ರಿಯ ನಟ ದಿ. ರಾಜೇಶ್ ಖನ್ನಾ ಅವರ ಸ್ಮರಣಾರ್ಥ ಬಾಬುಲ್ ಸುಪ್ರಿಯೊ ಅವರಿಂದ `ಆರಾಧನಾ~ ಕಾರ್ಯಕ್ರಮ. ಸಂಜೆ 6.15.

ಶ್ರೀರಾಮ ಲಲಿತಕಲಾ ಮಂದಿರ:
ಗಾಯನ ಸಮಾಜ ಸಭಾಂಗಣ, ಕೆ.ಆರ್. ರಸ್ತೆ, ಬಸವನಗುಡಿ. `ಇಂಡಿಯನ್ ನ್ಯಾಷನಲ್ ಆರ್ಕೆಸ್ಟ್ರಾ~ ಎಂಬ ವಿಶಿಷ್ಟ ಕಾರ್ಯಕ್ರಮ.
ಡಾ. ಜಯಂತಿ ಕುಮಾರೇಶ್ (ವೀಣೆ), ಚಾರುಲತಾ ರಾಮಾನುಜಂ, ಅಕ್ಕರೈ ಎಸ್. ಶುಭಲಕ್ಷ್ಮೀ, ಅಕ್ಕರೈ ಎಸ್. ಸ್ವರ್ಣಲತಾ (ವಯೊಲಿನ್), ಉಸ್ತಾದ್ ರಫೀಕ್ ಖಾನ್, ಉಸ್ತಾದ್ ಶಫೀಕ್ ಖಾನ್ (ಸಿತಾರ್), ಡಾ. ರವೀಂದ್ರ ಕಟೋಟಿ (ಹಾರ್ಮೋನಿಯಂ), ಆನಂದ ಪ್ರಸನ್ನ ಪಟ್ನಾಯಕ್ ಭುಟ್ಟೊ ಮತ್ತು ಸಿಕ್ಕಿಲ್ ಮಾಲಾ ಚಂದ್ರಶೇಖರ್ (ಕೊಳಲು), ಅನಂತ ಆರ್. ಕೃಷ್ಣನ್ (ಮೃದಂಗ), ಜಿ. ಗುರುಪ್ರಸನ್ನ (ಖಂಜಿರ), ಉದಯರಾಜ್ ಕರ್ಪೂರ್ (ತಬಲಾ), ಡಾ. ಎಸ್. ಕಾರ್ತಿಕ್ (ಘಟಂ), ಪ್ರಮಥ್ ಕಿರಣ್ (ವಿಶೇಷ ಪಕ್ಕವಾದ್ಯ), ಗಿರೀಶ್ ಗೋಪಾಲಕೃಷ್ಣನ್ (ಕೀಬೋರ್ಡ್), ಅಂಬರೀಶ್ ಅಮರವಾಡಿ ಮತ್ತು ರಮ್ಯಾ ರಾಘವನ್ (ವೀಣೆ). ಸಂಜೆ 6.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT