ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಂಸ್ಕೃತಿಕ ಮುನ್ನೋಟ ಅಕ್ಟೋಬರ್ 22 ಮತ್ತು 23

Last Updated 21 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಮಹಾಭಾರತ, ಗಾಯನ
ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ: ಶನಿವಾರ ಮೋಟಗಾನಹಳ್ಳಿ ಸುಬ್ರಹ್ಮಣ್ಯ ಶಾಸ್ತ್ರಿ ಸ್ಮಾರಕ ಪ್ರವಚನ ಮಾಲೆಯಲ್ಲಿ ಜಯತೀರ್ಥಾಚಾರ್ಯ ಮಳಗಿ ಅವರಿಂದ `ಮಹಾಭಾರತ ಪಾತ್ರ ಪ್ರಪಂಚ~ ಪ್ರವಚನ. ಭಾನುವಾರ ಎಸ್. ಶಂಕರ್ ಅವರಿಂದ ಕರ್ನಾಟಕ ಶಾಸ್ತ್ರೀಯ ಗಾಯನ. ಮೈಸೂರು ಎಂ.ನಾಗರಾಜ್ (ವಯಲಿನ್), ಕೆ.ವಿ.ಪ್ರಸಾದ್ ಚೆನೈ (ಮೃದಂಗ), ರಂಗನಾಥ್ ಚಕ್ರವರ್ತಿ (ಘಟ).  ಸ್ಥಳ: ಬಸವನಗುಡಿ ರಸ್ತೆ, ನರಸಿಂಹರಾಜ ಬಡಾವಣೆ. ನಿತ್ಯ ಸಂಜೆ 6.30.

ಕಾರ್ತಿಕ ದೀಪೋತ್ಸವ
ಇಸ್ಕಾನ್: ಸಂಜೆ ತುಪ್ಪದ ದೀಪ ಬೆಳಗುವ ಕಾರ್ಯಕ್ರಮ, ರಾತ್ರಿ 8ಕ್ಕೆ ಶಯನ ಆರತಿ, 8.30ಕ್ಕೆ ಕೀರ್ತನೆ ಜತೆ ಪಲ್ಲಕ್ಕಿ ಉತ್ಸವ. ಸ್ಥಳ: ಇಸ್ಕಾನ್, ರಾಧಾಕೃಷ್ಣ ಮಂದಿರ, ವೆಸ್ಟ್ ಆಫ್ ಕಾರ್ಡ್ ರಸ್ತೆ.

ರಂಗಶಂಕರ ನಾಟಕೋತ್ಸವದಲ್ಲಿ
ರಂಗಶಂಕರ: ರಂಗಶಂಕರ ನಾಟಕೋತ್ಸವದಲ್ಲಿ ಸಿಎಫ್‌ಡಿ ತಂಡದಿಂದ ಶನಿವಾರ ಮಧ್ಯಾಹ್ನ 3.30 ಮತ್ತು ಸಂಜೆ 7.30ಕ್ಕೆ `ಟಾಂಗೊ~ ಇಂಗ್ಲಿಷ್ ನಾಟಕ (ರಚನೆ: ಸ್ಲಾವೊಮಿರ್ ಮೊಜ್ರೆಕ್. ರೂಪಾಂತರ: ರಾಲ್ಪ್ ಮಾನ್ಹೈಮ್. ನಿರ್ದೇಶನ: ಅನ್ಮೋಲ್ ವೆಲ್ಲಾನಿ). ಸಂಜೆ 6.45ಕ್ಕೆ  ಜೆಎಸ್‌ಎಸ್ ಅಕಾಡೆಮಿ ಆಫ್ ಟೆಕ್ನಿಕಲ್ ಎಜುಕೇಷನ್ ತಂಡದಿಂದ `ಅವಸ್ಥೆ~ ಬೀದಿ ನಾಟಕ (ರಚನೆ: ಕಾಳಿಪ್ರಸಾದ್. ನಿರ್ದೇಶನ: ಗೌರಿ ದತ್ತು). ಭಾನುವಾರ ಮಧ್ಯಾಹ್ನ 3.30ಕ್ಕೆ ಮತ್ತು ಸಂಜೆ 7.30ಕ್ಕೆ ಸಂಕೇತ ತಂಡದಿಂದ `ನಮ್ಮೂರ ಬೆಂಕಿಬಾಕರು~ ನಾಟಕ (ರಚನೆ ಮತ್ತು ನಿರ್ದೇಶನ ಎಸ್.ಸುರೇಂದ್ರನಾಥ್). ಸಂಜೆ 6.45ಕ್ಕೆ ನ್ಯಾಷನಲ್ ಕಾಲೇಜಿನ ವಿದ್ಯಾರ್ಥಿಗಳಿಂದ `ಕಟ್ಟೆಪುರಾಣ~ ಬೀದಿ ನಾಟಕ (ರಚನೆ: ಗಂಗಾಧರ ಮೂರ್ತಿ, ನಿರ್ದೇಶನ: ಶಶಿಧರ್ ಬಾರಿಘಾಟ್). ಸ್ಥಳ: ರಂಗಶಂಕರ, ಜೆ ಪಿ ನಗರ 2ನೇ ಹಂತ. ಟಿಕೆಟ್ ದರ 100 ರೂ.

ಭಾಗವತ ಪಂಚಮಸ್ಕಂದ
ದೇವಗಿರಿ ಶ್ರೀ ಗುರುಸೇವಾ ಸಮಿತಿ: ಬನ್ನಂಜೆ ಗೋವಿಂದಾಚಾರ್ಯರಿಂದ `ಭಾಗವತ ಪಂಚಮಸ್ಕಂದ~ ಕುರಿತು ಉಪನ್ಯಾಸ. ಸ್ಥಳ: ದೇವಗಿರಿ ರಾಯರ ಮಠ, 24ನೇ ಮೇನ್, ಬನಶಂಕರಿ 2ನೇ ಹಂತ. ಸಂಜೆ 6.30.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT