ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಂಸ್ಕೃತಿಕ ಮುನ್ನೋಟ/ ಫೆಬ್ರುವರಿ 8,ಮಂಗಳವಾರ

Last Updated 7 ಫೆಬ್ರುವರಿ 2011, 18:30 IST
ಅಕ್ಷರ ಗಾತ್ರ

 ಫೆಬ್ರುವರಿ 8,ಮಂಗಳವಾರ
ಕಲಾಪ್ರತಿಭೋತ್ಸವ
ಕನ್ನಡ ಮತ್ತು ಸಂಸ್ಕೃತಿ ಇಲಾಖೆ: ಕಲಾಪ್ರತಿಭೋತ್ಸವ. ಜಾನಪದ ಅಕಾಡೆಮಿ ಅಧ್ಯಕ್ಷ ಗೊ.ರು.ಚನ್ನಬಸಪ್ಪ ಅವರಿಂದ ರಾಜ್ಯ ಮಟ್ಟದ ಬಾಲ ಪ್ರತಿಭೆ, ಕಿಶೋರ ಪ್ರತಿಭೆ, ಯುವ ಪ್ರತಿಭೆ ಹಾಗೂ ರಂಗೋಲಿ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ.ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ ಸಿ ರಸ್ತೆ. ಸಂಜೆ 5. 

ಕಲಾ ಪ್ರದರ್ಶನ
ಕರ್ನಾಟಕ ಚಿತ್ರಕಲಾ ಪರಿಷತ್ತು: ರವೀಂದ್ರನಾಥ್ ಟ್ಯಾಗೋರ್ ಅವರ 150ನೇ ಹುಟ್ಟುಹಬ್ಬದ ಅಂಗವಾಗಿ ಕಲಾವಿದ ವಿಷ್ಣುದಾಸ್ ಅವರ ‘ದಿ ಪಿಕ್ಚರ್ -ಮೆಮರಿ ಆಫ್ ಲೈಟ್ ಟ್ರೆಜರ್ಡ್‌ ಬೈ ದಿ ಶಾಡೊ’ ಪ್ರದರ್ಶನ. ಉದ್ಘಾಟನೆ. ರವೀಂದ್ರ ಗೀತೆಗಳ ಗಾಯಕಿ ಇಂದಿರಾ ಬ್ಯಾನರ್ಜಿ ಅವರಿಂದ ಗಾಯನ. ಅತಿಥಿಗಳು: ಚಿರಂಜೀವಿ ಸಿಂಗ್, ಯು.ಆರ್. ಅನಂತಮೂರ್ತಿ, ರಂಜನ್ ಘೋಷಾಲ್, ಡಾ. ಅನಿಲ್ ಕುಮಾರ್ ಮಂಡಲ್. ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್ತು, ಕುಮಾರ ಕೃಪಾ ರಸ್ತೆ, ಸಂಜೆ 4.30.

ರಾಜ್ಯೋತ್ಸವ
ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು: ಕನ್ನಡ ರಾಜ್ಯೋತ್ಸವ ಮತ್ತು ಬಹುಮಾನ ವಿತರಣೆ. ಅತಿಥಿಗಳು: ಬಾನಂದೂರು ಕೆಂಪಯ್ಯ. ಅಧ್ಯಕ್ಷತೆ: ಪ್ರೊ.ಬಿ.ಲಲಿತಮ್ಮ. ಸ್ಥಳ: ಅರಮನೆ ರಸ್ತೆ. ಬೆಳಿಗ್ಗೆ 10.30.

 ಫೆಬ್ರುವರಿ 8,ಮಂಗಳವಾರ
ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್:  ಎಂ.ಕೆ.ನರಸಿಂಹನ್ ಅವರಿಂದ ಇಂಡಿಯನ್ ಅಸ್ಟ್ರಾಲಜಿ ಕುರಿತು ಉಪನ್ಯಾಸ. ಸ್ಥಳ; ಬಿ.ಪಿ.ವಾಡಿಯಾ ರಸ್ತೆ, ಬಸವನಗುಡಿ. ಸಂಜೆ 6.15.

ಪ್ರೇಮಗೀತೆಗಳ ಸಂಕಲನ
ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್:  ಅಂಬಾತನಯ ಮುದ್ರಾಡಿ ಅವರ ಪ್ರೇಮಗೀತೆಗಳ ಸಂಕಲನ ಲೋಕಾರ್ಪಣೆ. ಸ್ಥಳ: ಬಿ.ಪಿ.ವಾಡಿಯಾ ರಸ್ತೆ, ಬಸವನಗುಡಿ. ಬೆಳಿಗ್ಗೆ 10.30.

ಭಾವನದಿ
ಅಖಿಲ ಕರ್ನಾಟಕ ಸುಗಮ ಸಂಗೀತ  ಸಂಸ್ಥೆಗಳ ಒಕ್ಕೂಟ: ಭಾವನದಿ-7. ಎರಡನೇ ಮಂಗಳವಾರದ ಸಂಗೀತ ಸಂಜೆಯಲ್ಲಿ ಇಂದು ವಿಶ್ವನಾಥ್ ಅವರಿಂದ ಗಾಯನ. ಹುಸೇನ್ ಸಾಬ್ ಕನಕಗಿರಿ ಅವರಿಂದ ದಾಸವಾಣಿ. ಪಕ್ಕವಾದ್ಯದಲ್ಲಿ: ರಾಜೀವ್ ಎಸ್.ಜೋಯಿಸ್ (ಕೀಬೋರ್ಡ್), ಆರ್.ಲೋಕೇಶ್ (ತಬಲಾ), ಎಲ್.ಎನ್.ವಸಂತ್ ಕುಮಾರ್ (ಕೊಳಲು), ವಿ.ವಾದಿ (ರಿದಂಪ್ಯಾಡ್). ಸ್ಥಳ: ಕನ್ನಡ ಭವನ, ಜೆ.ಸಿ.ರಸ್ತೆ. ಸಂಜೆ 6.30.

ವಿಷ್ಣು ಸಹಸ್ರನಾಮ
ಧ್ಯಾನ ಮತ್ತು ವ್ಯಾಸಂಗ ವೃತ್ತ: ಡಾ.ಎ. ರಾಮಸ್ವಾಮಿ ಅಯ್ಯಂಗಾರ್ ಅವರಿಂದ ವಿಷ್ಣು ಸಹಸ್ರನಾಮ. ಸ್ಥಳ: ಜಯನಗರ ‘ಟಿ’ ಬ್ಲಾಕ್‌ನ ಎಸ್‌ಎಸ್‌ಎಂಆರ್‌ವಿ ಕಾಲೇಜು. ಸಂಜೆ 6.
 
ಫೆಬ್ರುವರಿ 9,ಬುಧವಾರ

ಸಮೂಹ ನೃತ್ಯ
ಕನ್ನಡ ಮತ್ತು ಸಂಸ್ಕೃತಿ ಇಲಾಖೆ: ಯುವ ಸೌರಭ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮದಲ್ಲಿ ನೃತ್ಯ ವಿದ್ಯಾಲಯದಿಂದ ಸಮೂಹ ನೃತ್ಯ. ಸ್ಥಳ: ಕನ್ನಡ ಭವನ. ಜೆ.ಸಿ.ರಸ್ತೆ. ಸಂಜೆ 6.30.

 ನಿಡಸಾಲೆ ಅಭಿನಂದನೆ
ನಿಡಸಾಲೆ ಪುಟ್ಟಸ್ವಾಮಯ್ಯ ಅವರ ಅಭಿನಂದನಾ ಸಮಿತಿ: ಸಾಹಿತಿ- ಕಲಾವಿದ- ಸಂಘಟಕ- ಸಂಪಾದಕ ನಿಡಸಾಲೆ ಪುಟ್ಟಸ್ವಾಮಯ್ಯ ಅಭಿನಂದನಾ ಸಮಾರಂಭ ಮತ್ತು ಮಲ್ಲೇಪುರಂ ಜಿ.ವೆಂಕಟೇಶ್ ಅವರಿಂದ ‘ಸುಗ್ಗಿಯ ಸೊಬಗು ಅಭಿನಂದನಾ ಗ್ರಂಥ’ ಲೋಕಾರ್ಪಣೆ. ಜಾಣಗೆರೆ ವೆಂಕಟರಾಮಯ್ಯ ಅವರಿಂದ ‘ನಲ್ಮೆಯ ನಿಡಸಾಲೆ’ ಸ್ಮರಣ ಸಂಚಿಕೆ ಲೋಕಾರ್ಪಣೆ. ಉದ್ಘಾಟನೆ: ಡಾ.ದೇ.ಜವರೇಗೌಡ. ಅಭಿನಂದನಾ ಭಾಷಣ: ಡಾ.ದೊಡ್ಡ ರಂಗೇಗೌಡ. ಅತಿಥಿಗಳು: ಎಂ.ಕೃಷ್ಣಪ್ಪ, ಡಾ.ಸಾ.ಶಿ.ಮರುಳಯ್ಯ, ಡಾ.ಕೆ.ವಿ.ಸರ್ವೇಶ್, ಎಸ್.ಬಿ.ಹೊಂಡದಕೇರಿ, ಎಚ್.ಎನ್.ಶೇಷೇಗೌಡ. ಎಲ್.ಭೈರಪ್ಪ. ಅಧ್ಯಕ್ಷತೆ: ಡಾ.ಆರ್.ಕೆ.ನಲ್ಲೂರು ಪ್ರಸಾದ್.ನಿಡಸಾಲೆಯವರು ನಿರಂತರವಾಗಿ ನಾಟಕಗಳನ್ನು ಬರೆಯುತ್ತಾ, ನಿರ್ದೇಶಿಸುತ್ತಾ, ಸಮಾಜಸೇವೆಯಲ್ಲಿ ತೊಡಗಿದವರು. ಐನೂರಕ್ಕಿಂತ ಹೆಚ್ಚು ಹಿರಿಯ ಮತ್ತು ಕಿರಿಯ ಲೇಖಕರ ಕೃತಿಗಳನ್ನು ಪ್ರಕಟಿಸಿದ್ದಾರೆ.ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ. ಬೆಳಿಗ್ಗೆ 10.30.

ಮಾನಿಷಾದ
ಶ್ರೀ ಗುರುಕನಕ ಶಿರಡಿ ಸಾಯಿ ಸೇವಾ ಸಂಘ: ಚಿತ್ರದುರ್ಗ ಕಲಾವಿದರಿಂದ ‘ಮಾನಿಷಾದ’ ನಾಟಕ (ರಚನೆ: ಗಿರೀಶ್ ಕಾರ್ನಾಡ್. ನಿರ್ದೇಶನ: ಎಸ್.ರಾಜಗೋಪಾಲ್, ಸಂಗೀತ: ಬಿ.ಇ. ಕಮಲಕುಮಾರ್) ಪ್ರದರ್ಶನ. ಸ್ಥಳ: ವರದಾಚಾರ್ ಸ್ಮಾರಕ ಸಭಾಂಗಣ, ನಟರಾಜ ಟಾಕೀಸ್ ಹಿಂಭಾಗ, ಶೇಷಾದ್ರಿಪುರ. ಸಂಜೆ 6.

ಇಂದು ಮತ್ತು ನಾಳೆ
ಋತುಗಾನ ಸಂಗೀತ ಉತ್ಸವದಲ್ಲಿ...

ರಂಗಸಂಸ್ಥಾನ: ಮಂಗಳವಾರ ಬೆಳಿಗ್ಗೆ 8ಕ್ಕೆ ರಾಜಾಜಿನಗರ ರಾಜಕುಮಾರ್ ರಸ್ತೆಯ ವಿವೇಕಾನಂದ ಪದವಿ ಕಾಲೇಜಿನಲ್ಲಿ ದಿ. ಮೈಸೂರು ಅನಂತಸ್ವಾಮಿ ಸಂಗೀತ ಸಂಯೋಜನೆಯ ಗೀತ ಗಾಯನ: ನಾಗಚಂದ್ರಿಕಾ ಭಟ್, ಪ್ರತಿಭಾ ನಂದನ್, ನಂದಿನಿ ಗಣೇಶ್, ವಂದನಾ ಮೂರ್ತಿ, ದಾಕ್ಷಾಯಿಣಿ ಅವರಿಂದ. ನವನೀತ್ (ಕೀಬೋರ್ಡ್), ವೈ.ಮಾರುತಿ ಪ್ರಸಾದ್ (ತಬಲಾ), ಅಭಿಷೇಕ್ (ರಿದಂ ಪ್ಯಾಡ್), ಎಸ್.ವಿ.ಭಾಸ್ಕರ್ (ಕೊಳಲು).ಉದ್ಘಾಟನೆ: ಡಾ.ವೇಮಗಲ್ ನಾರಾಯಣಸ್ವಾಮಿ, ಅತಿಥಿಗಳು: ಅಪ್ಪಗೆರೆ ತಿಮ್ಮರಾಜು, ಎಸ್.ಸೋಮಸುಂದರ,  ಪ್ರೊ.ಎಂ.ಗೋವಿಂದಯ್ಯ. ಬುಧವಾರ ಸಂಜೆ 6ಕ್ಕೆ ಕಬ್ಬನ್‌ಪೇಟೆ ಮುಖ್ಯ ರಸ್ತೆ ಶಂಷುದ್ದೀನ್ ಕಾಂಪ್ಲೆಕ್ಸ್‌ನ (ಅಲಸೂರು ಗೇಟ್ ಪೊಲೀಸ್ ಸ್ಟೇಷನ್ ಹಿಂಭಾಗ) ಪತ್ರಕರ್ತರ ಸಂಘದ ಸಭಾಂಗಣದಲ್ಲಿ ಜಾನಪದ ಝೇಂಕಾರ. ಬಂಡ್ಲಹಳ್ಳಿ ವಿಜಯಕುಮಾರ್, ಚಿನ್ನುಪ್ರಕಾಶ್ ಶ್ರೀರಾಮನಹಳ್ಳಿ, ಕುಮಾರಸ್ವಾಮಿ ಕರುಗಲ್‌ಹಟ್ಟಿ, ಚೇತನಾ ಶಿಶುನಾಳ, ಅಂಬುಜಾಕ್ಷಿ, ಅನಿತಾ ಔರಾದ್, ಆರ್.ಪ್ರದೀಪ, ಹೆಮ್ಮಿಗೆ ಬಸವರಾಜ್ ಮಂಡ್ಯ, ಉರುಗಲವಾಡಿ ರಾಮಯ್ಯ ಮಂಡ್ಯ ಅವರಿಂದ ಹಾಡುಗಳು. ಶಶಿಧರ (ಕೀಬೋರ್ಡ್), ಮಲ್ಲಿಕಾರ್ಜುನ ಎಂ.ಎನ್ (ತಬಲಾ), ರವಿ (ರಿದಂಪ್ಯಾಡ್).

ವಾರ್ಷಿಕೋತ್ಸವ
ಕಟ್ಟೆ ವಿನಾಯಕ ಸ್ವಾಮಿ ಮತ್ತು ಶ್ರೀಕಟ್ಟೆ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಸೇವಾ ಟ್ರಸ್ಟ್: ಮಂಗಳವಾರ ಕಟ್ಟೆ ವಿನಾಯಕ ಸ್ವಾಮಿ ದೇವಸ್ಥಾನದ ಷಷ್ಠಿ ಪೂಜೆ ಮತ್ತು ವಿನಾಯಕ ಸ್ವಾಮಿ ದೇವಸ್ಥಾನದ ವಾರ್ಷಿಕೋತ್ಸವ.   ಸಂಜೆ 5.30ಕ್ಕೆ ಹೋಮ.
ಬುಧವಾರ ಸುಪ್ರಭಾತ, ಕಲಾನ್ಯಾಸ ಹೋಮ, ಸಹಸ್ರ ಮೋದಕ ಹೋಮ, ಪೂರ್ಣಾಹುತಿ. ಮಧ್ಯಾಹ್ನ 1.30ಕ್ಕೆ ಅನ್ನ ಸಂತರ್ಪಣೆ. ಸ್ಥಳ: ಹಳೇ ಮದ್ರಾಸ್ ರಸ್ತೆ, ಕೃಷ್ಣರಾಜಪುರ.

ಮಹಾಭಾರತ ಪ್ರವಚನ
ಸದ್ವಿಚಾರ ಸೇವಾ ಟ್ರಸ್ಟ್: ಮಂಗಳವಾರ ಮತ್ತು ಬುಧವಾರ ಬನ್ನಂಜೆ  ರಾಘವೇಂದ್ರ ತೀರ್ಥ ಅವರಿಂದ ಮಹಾಭಾರತ ಪ್ರವಚನ. ಸ್ಥಳ: ಕಾರಂಜಿ ಆಂಜನೇಯ ಸ್ವಾಮಿ ದೇವಸ್ಥಾನ ಬಸವನಗುಡಿ. ಸಂಜೆ 6.30.


ರಾಜಯೋಗ
ಗಾಂಧಿ ಸಾಹಿತ್ಯ ಸಂಘ: ಮಂಗಳವಾರ ಹಿರಿಯ ನಾಗರಿಕ ವೇದಿಕೆ  ಪ್ರಾಯೋಜಿತ ಕಾರ್ಯಕ್ರಮ. ಬಿ.ಕೆ. ಅಶ್ವತ್ಥ ನಾರಾಯಣ ಅವರಿಂದ ರಾಜಯೋಗ ಉಪನ್ಯಾಸ. ಬುಧವಾರ ಶಾಂತ ಶೈವಲಿನೀ ಅವರಿಂದ ಮಹಾಭಾರತದ ಪಾತ್ರಗಳ ಕುರಿತು ಉಪನ್ಯಾಸ.ಸ್ಥಳ: 8ನೇ ಕ್ರಾಸ್, ಮಲ್ಲೇಶ್ವರ. ಸಂಜೆ 6.30.

ಭಜನೆ
ತಿರುಮಲ ತಿರುಪತಿ ದೇವಸ್ಥಾನಗಳ ಹಿಂದೂ ಧರ್ಮ ಪ್ರಚಾರ ಪರಿಷತ್: ಮಂಗಳವಾರ ಜಿ.ಕೆ.ಎಲ್. ರಾಜನ್ ಅವರಿಂದ ಉಪನ್ಯಾಸ. ನಂತರ ಮಲ್ಲೇಶ್ವರದ ವಾಸವಿ ಮಹಿಳಾ ಮಂಡಳಿಯಿಂದ ಭಜನೆ. ಬುಧವಾರ ಬಸವೇಶ್ವರ ನಗರದ ಶಂಭುಲಿಂಗ ಶಾಸ್ತ್ರಿ ಉಪನ್ಯಾಸ. ನಂತರ ಮಲ್ಲೇಶ್ವರದ ವಾಣಿ ಮಹಿಳಾ ಮಂಡಳಿಯಿಂದ ಭಜನೆ. ಸ್ಥಳ: ಮುನೇಶ್ವರ ಸ್ವಾಮಿ ದೇವಸ್ಥಾನ, ರಂಗನಾಥಪುರ. ಸಂಜೆ 6.


 ದಯಾಶತಕ
ರಾಗಿಗುಡ್ಡದ ಪ್ರಸನ್ನ ಆಂಜನೇಯಸ್ವಾಮಿ ಭಕ್ತ ಮಂಡಳಿ ಟ್ರಸ್ಟ್: ಮಂಗಳವಾರ ಎಸ್.ಕೆ.ಲಕ್ಷ್ಮಿ ಅವರಿಂದ ಸದ್ಗುರು ಶ್ರೀ ಸಮರ್ಥ ರಾಮದಾಸರು ಹಾಗೂ ಶ್ರೀ ಸದಾಶಿವ ಬ್ರಹ್ಮೇಂದ್ರರು ಕುರಿತು ಉಪನ್ಯಾಸ.ಬುಧವಾರ ಎಚ್.ಆರ್.ಶ್ರೀಧರ್ ಅವರಿಂದ ‘ದಯಾಶತಕ’ ಕುರಿತು ಉಪನ್ಯಾಸ. ಸ್ಥಳ: ಮಾರುತಿ ಕುಟೀರ, 9ನೇ ಬ್ಲಾಕ್ ಜಯನಗರ. ಸಂಜೆ 6.30.

ಗೀತಾ ಪ್ರವಚನ
ಶ್ರೀ ರಾಮಕೃಷ್ಣ ಸೇವಾ ಟ್ರಸ್ಟ್: ಮಂಗಳವಾರ ಮತ್ತು ಬುಧವಾರ ಸ್ವಾಮಿ ಅಭಯಚೈತನ್ಯ ಅವರಿಂದ ಶ್ರೀಮದ್ ಭಗವದ್ಗೀತೆ 7ನೇ ಅಧ್ಯಾಯ ಪ್ರವಚನ. ಸ್ಥಳ: ವರಸಿದ್ಧಿ ವಿನಾಯಕ ದೇವಸ್ಥಾನ, 3ನೇ ಅಡ್ಡರಸ್ತೆ, 1ನೇ ಮುಖ್ಯ ರಸ್ತೆ, ಕೆಂಪೇಗೌಡ ಬಡಾವಣೆ, 3 ನೇ ಹಂತ ಬನಶಂಕರಿ. ಸಂಜೆ 6.30.

ಭಾರತ ತಾತ್ಪರ್ಯ
ಗುರುರಾಜ ಸೇವಾ ಸಮಿತಿ: ಮಂಗಳವಾರ ತಂಬಿಹಳ್ಳಿ ಸಂಸ್ಥಾನದ ವಿದ್ಯಾಸಾಗರ ಮಾಧವ ತೀರ್ಥ ಸ್ವಾಮೀಜಿ ಅವರಿಂದ ಮಹಾಭಾರತ ತಾತ್ಪರ್ಯ ನಿರ್ಣಯ ಪ್ರವಚನ.ಬುಧವಾರ ಡಾ. ಆನಂದ ತೀರ್ಥಾಚಾರ್ಯ ನಾಗಸಂಪಿಗೆ ಅವರಿಂದ ‘ಉಪನಿಷತ್‌ಗೆ ಮಧ್ವಾಚಾರ್ಯರ ಕೊಡುಗೆ’ ಕುರಿತ ಉಪನ್ಯಾಸ.ಸ್ಥಳ: ನಂ 5, 2ನೇ ಮುಖ್ಯ ರಸ್ತೆ, 8ನೇ ಎ ಕ್ರಾಸ್, ಯಲಹಂಕ ಉಪನಗರ. ಸಂಜೆ 6.30.

ಸುಬ್ರಹ್ಮಣ್ಯೇಶ್ವರ ರಥೋತ್ಸವ
ಶ್ರೀ ವಲ್ಲೆದೇವಸೇನಾ ಸಮೇತ ಶ್ರೀ ಸುಬ್ರಹ್ಮಣ್ಯೇಶ್ವರ ಸ್ವಾಮಿ ದೇವಸ್ಥಾನ: ಮಂಗಳವಾರ ಬೆಳಿಗ್ಗೆ ರುದ್ರಾಭಿಷೇಕ. ಶ್ರೀ ಸತ್ಯಸಾಯಿ ಸೇವಾ ಸಮಿತಿಯಿಂದ ಭಜನೆ. ಸಂಜೆ 7.30ಕ್ಕೆ ಸ್ವರಲಯಾಮೃತ ತಂಡದಿಂದ ಸಂಗೀತ. ಬುಧವಾರ ಬೆಳಿಗ್ಗೆ 11.30ರಿಂದ ಸುಬ್ರಹ್ಮಣ್ಯೇಶ್ವರ ಸ್ವಾಮಿ ರಜತ ಬ್ರಹ್ಮರಥೋತ್ಸವ. ಸ್ಥಳ: ಸುಬ್ರಹ್ಮಣ್ಯಪುರ.

ನಿರಂತರ ಸಂಗೀತೋತ್ಸವ
ಸಂಗೀತ ಸಂಭ್ರಮ: ಮಂಗಳವಾರ ಸಂಜೆ 6.30ಕ್ಕೆ ಪ್ರತಿಭಾ ಮಣಿ ಅವರಿಂದ ತಾಳ ತರಂಗ. ಸುಕನ್ಯಾ ರಾಮಗೋಪಾಲ್ ಘಟ ತರಂಗ ಮತ್ತು ಕೊನ್ನಕೋಲು. ಜೆ. ಯೋಗವಂದನ (ವೀಣೆ), ಸೌಮ್ಯ ರಾಮಚಂದ್ರನ್ (ವಯಲಿನ್), ರಂಜನಿ ವೆಂಕಟೇಶ್ (ಮೃದಂಗ), ಭಾಗ್ಯಲಕ್ಷ್ಮಿ ಎಂ. ಕೃಷ್ಣ (ಮೋರ್ಚಿಂಗ್).ಸಂಜೆ 7.30ಕ್ಕೆ  ಟಿ.ವಿ. ಶಂಕರನಾರಾಯಣನ್ ಅವರಿಂದ ಸಂಗೀತ ಕಛೇರಿ. ಸಿ.ಎನ್. ಚಂದ್ರಶೇಖರ್ (ವಯಲಿನ್), ಎಚ್.ಎಸ್. ಸುಧೀಂದ್ರ (ಮೃದಂಗ), ಎಂ.ಎ. ಕೃಷ್ಣಮೂರ್ತಿ (ಘಟ). ಅತಿಥಿ: ಕೆ.ಪಿ.ಕುಮಾರ್. ಬುಧವಾರ ಸಂಜೆ 5ಕ್ಕೆ ಸಾಯಿ ಆರ್ಟ್ಸ್ ಇಂಟರ್‌ನ್ಯಾಷನಲ್ ಮತ್ತು ದೀಪಾ ಅಕಾಡೆಮಿಯ ಅಂಧ ಕಲಾವಿದರಿಂದ ನೃತ್ಯ. ಸಂಜೆ 6ಕ್ಕೆ ಕನ್ಯಾ ರಾಮಚಂದ್ರನ್ ತಯಾಲಿಯಾ ವಿದ್ಯಾರ್ಥಿಗಳಿಂದ ನೃತ್ಯ ರೂಪಕ. ಅತಿಥಿ: ಮೈಸೂರು ನಾಗಮಣಿ ಶ್ರೀನಾಥ್, ವೀಣಾ ಮೂರ್ತಿ ವಿಜಯ್. 7.30ಕ್ಕೆ ದೆಹಲಿಯ ಡಾ.ಕೆ. ವರ್ಗೀಸ್ ಅವರಿಂದ ಸಂಗೀತ ಕಛೇರಿ. ಜಿ. ವೆಂಕಟೇಶ ಜೊಸೆಯರ್ (ವಯಲಿನ್), ಅರ್ಜುನ್ ಕುಮಾರ್ (ಮೃದಂಗ), ಬಿ.ಎನ್. ಚಂದ್ರಮೌಳಿ (ಖಂಜರ).
ಸ್ಥಳ: ಸೇವಾ ಸದನ ಸಭಾಂಗಣ, 14ನೇ ಅಡ್ಡರಸ್ತೆ. ಎಂಎಲ್‌ಎ ಕಾಲೇಜು ಎದುರು, ಮಲ್ಲೇಶ್ವರ.

ಮಧ್ವನವರಾತ್ರಿ
ರಾಘವೇಂದ್ರ ಸೇವಾ ಸಮಿತಿ: ಮಂಗಳವಾರ ಮಧ್ವನವರಾತ್ರಿಯಲ್ಲಿ ಮೋಹನಾಚಾರ್ಯ ಅವರಿಂದ ‘ಸದಾಚಾರ ಸ್ಮೃತಿ’ ಪ್ರವಚನ. ಬುಧವಾರ ಡಿ.ರಾಮಚಂದ್ರಾಚಾರ್ಯ ಅವರಿಂದ ‘ಪ್ರಥಮೋ ಹನುಮನ್ನಾಮ- ದ್ವಿತೀಯೋ ಭೀಮ ಏವಚ’ ಪ್ರವಚನ.ಸ್ಥಳ: 6ನೇ ಕ್ರಾಸ್, ಸುಧೀಂದ್ರನಗರ, ಮಲ್ಲೇಶ್ವರಂ. ಸಂಜೆ 6.30.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT