ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಂಸ್ಕೃತಿಕ ಮುನ್ನೋಟ ಸೆಪ್ಟೆಂಬರ್ 9,10 ಮತ್ತು 11

Last Updated 9 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಪ್ರೋಷ್ಠಪದಿ ಭಾಗವತ
ನಂಜನಗೂಡು ಶ್ರೀರಾಘವೇಂದ್ರ ಸ್ವಾಮಿಗಳವರ ಮಠ: ಅಕ್ಕಿ ರಾಘವೇಂದ್ರಾಚಾರ್ಯ ಅವರಿಂದ `ಪ್ರೋಷ್ಠಪದಿ ಭಾಗವತ~ ಪ್ರವಚನ. ಸ್ಥಳ: ಪ್ಲಾಟ್‌ಫಾರಂ ರಸ್ತೆ, ಶೇಷಾದ್ರಿಪುರಂ. ಸಂಜೆ 6.30.

ರಂಗಶಂಕರದಲ್ಲಿ...
ರಂಗಶಂಕರ: ಶನಿವಾರ ಭಾನುವಾರ ಲಿಟಿಲ್ ಜಾಸ್ಮಿನ್ ಪ್ರೊಡಕ್ಷನ್ ತಂಡದಿಂದ ` ದಿ ಬಾಲ್ಡ್ ಸೋಪ್ರಾನೋ~ ಇಂಗ್ಲಿಷ್ ನಾಟಕ. (ರಚನೆ: ಯುಜಿನ್ ಐನೆಸ್‌ಸ್ಕೊ. ನಿರ್ದೇಶನ: ಕೀರ್ತನಾ ಕುಮಾರ್). ಸ್ಥಳ: ರಂಗಶಂಕರ, ಜೆ.ಪಿ.ನಗರ. 2ನೇ ಹಂತ. ಸಂಜೆ 7.30 (ಭಾನುವಾರ ಮಧ್ಯಾಹ್ನ 3.30ಕ್ಕೆ ಮ್ಯಾಟಿನಿ).

ಪ್ರವಚನ
ಶ್ರೀ ರಾಮಕೃಷ್ಣ ವಿವೇಕಾನಂದ ಸಾಧನಾ ಕೇಂದ್ರ: ಸ್ವಾಮಿ ಚಂದ್ರೇಶಾನಂದಜಿ ಅವರಿಂದ ಶನಿವಾರ  `ಉಪನಿಷದ್ ಜ್ಞಾನಾಮೃತ ಭಾವಧಾರೆ~,ಭಾನುವಾರ ಶ್ರೀರಾಮಕೃಷ್ಣ ಉಪದೇಶಾಮೃತ ಭಾವಧಾರೆ~, ಸೋಮವಾರ `ಶಿವಾನಂದ ಲಹರಿ ಸ್ತೋತ್ರ (ಆಚಾರ್ಯ ಶಂಕರರು)~ ಪ್ರವಚನ. ಸ್ಥಳ: ನಂ.42/1, ವಿವೇಕಾನಂದ ಮಾರ್ಗ, ಗೋಕುಲ ಬಡಾವಣೆ, ದೇವಸಂದ್ರ, ಕೆ.ಆರ್.ಪುರಂ. ಸಂಜೆ 5.30.

ಸಂಗೀತ, ಭಜನೆ
ಶ್ರೀ ಪ್ರಸನ್ನ ವೀರಾಂಜನೇಯ ಸ್ವಾಮಿ ಟ್ರಸ್ಟ್: ಶನಿವಾರ ಸಂಜೆ 6.30ಕ್ಕೆ ಭಾಗ್ಯಲಕ್ಷ್ಮಿ ಅವರಿಂದ ಸಂಗೀತ. ಭಾನುವಾರ ಬೆಳಿಗ್ಗೆ 9ಕ್ಕೆ ಮಾರುತಿ ಪ್ರಸಾದ್ ಮತ್ತು ತಂಡದಿಂದ ಭಜನೆ. ಸ್ಥಳ: ಮಹಾಲಕ್ಷ್ಮಿಪುರಂ.

ಡಿವಿಜಿ ಕವನ, ಗಾಯನ
ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ: ಶನಿವಾರ ಪ್ರೊ.ಎಚ್.ಎಸ್. ವೆಂಕಟೇಶಮೂರ್ತಿ ಅವರಿಂದ `ಡಿವಿಜಿ ಅವರ ಬಿಡಿ ಕವನಗಳು~ ಕುರಿತು ಉಪನ್ಯಾಸ. ಭಾನುವಾರ ಆರ್.ಎ.ದಕ್ಷಿಣಾಮೂರ್ತಿ ಮತ್ತು ತಂಡದಿಂದ ಶಾಸ್ತ್ರೀಯ ಗಾಯನ. ಸೋಮವಾರ ಡಾ.ಆರ್.ಪಿ.ಜೋಶಿ ಅವರಿಂದ `ಜೀವನ ಶೈಲಿ ಮತ್ತು ಆರೋಗ~್ಯ ಕುರಿತು ಉಪನ್ಯಾಸ. ಸ್ಥಳ: ಬಸವನಗುಡಿ ರಸ್ತೆ, ನರಸಿಂಹರಾಜ ಬಡಾವಣೆ. ನಿತ್ಯ ಸಂಜೆ 6.30.

ಹರಿವಂಶ ಪುರಾಣ
ಶನಿವಾರ, ಭಾನುವಾರ ಪಾರ್ಥಸಾರಥಿ ದೇವರ 25ನೇ ಪ್ರತಿಷ್ಠಾ ವರ್ಷಾಚರಣೆಯ ಅಂಗವಾಗಿ ಡಾ.ಮಾಳಗಿ ರಾಮಾಚಾರ್ ಅವರಿಂದ `ಶ್ರೀ ಹರಿ ವಂಶ ಮಹಾಪುರಾಣದ ಉಪನ್ಯಾಸ. ಸ್ಥಳ: ಕಾಶಿ ಮಠ, ನೆಟ್ಟಕಲ್ಲಪ್ಪ ವೃತ್ತ. ಸಂಜೆ 6.30.

ಪ್ರವಚನ
ಅಧ್ಯಾತ್ಮ ಪ್ರಕಾಶ ಕಾರ್ಯಾಲಯ: ಶಿವರಾಮ ಅಗ್ನಿಹೋತ್ರಿ ಅವರಿಂದ `ಮಾಂಡೂಕ್ಯೋಪನಿಷತ್ತು~ ಪ್ರವಚನ. ಸ್ಥಳ: ನಂ.68, ಎಪಿಕೆ ರಸ್ತೆ, 2ನೇ  ವಿಭಾಗ, ತ್ಯಾಗರಾಜ ನಗರ. ಬೆಳಿಗ್ಗೆ 9.30ರಿಂದ ಸಂಜೆ 6.30.

ಪ್ರೋಷ್ಠಪದಿ ಭಾಗವತ
ಶ್ರೀಮದಾನಂದತೀರ್ಥ ಪ್ರವಚನ ಸಮಿತಿ: ಹೊಳವನಹಳ್ಳಿ ಶ್ರೀನಿವಾಸಾಚಾರ್ಯ ಅವರಿಂದ ಪ್ರೋಷ್ಠಪದಿ ಭಾಗವತ ಪ್ರವಚನ. ಸ್ಥಳ: ರಾಘವೇಂದ್ರ ಸ್ವಾಮಿ ಮಠ, 6ನೇ ಅಡ್ಡ ರಸ್ತೆ, ಅಮರಜ್ಯೋತಿ ನಗರ. ನಿತ್ಯ ಸಂಜೆ 7.

ದ್ವಾದಶ ಸ್ತೋತ್ರ
ದೇವಗಿರಿ ಶ್ರೀ ಗುರುಸೇವಾ ಸಮಿತಿ: ಅಂಬರೀಷಾಚಾರ್ಯ ಅವರಿಂದ `ದ್ವಾದಶ ಸ್ತೋತ್ರ ಹಾಗೂ ಪ್ರೋಷ್ಠಪದಿ~ ಪ್ರವಚನ. ಸ್ಥಳ: ದೇವಗಿರಿ ರಾಯರ ಮಠ, 24ನೇ ಮೇನ್, ಬನಶಂಕರಿ 2ನೇ ಹಂತ. ಸಂಜೆ 7.

ಆರೋಗ್ಯ, ಭಜನೆ
ರಾಗಿಗುಡ್ಡದ ಶ್ರೀ ಪ್ರಸನ್ನ ಆಂಜನೇಯಸ್ವಾಮಿ ಭಕ್ತ ಮಂಡಳಿ ಟ್ರಸ್ಟ್: ಶನಿವಾರ ಗುರುಭಗವಾನ್ ಬ್ರಹ್ಮರ್ಷಿ ಗಂಗಾಧರ ಅವರಿಂದ `ಆರೋಗ್ಯ ಆನಂದ~ ಪ್ರವಚನ. ಭಾನುವಾರ ಎನ್.ಎಸ್.ಅಭಿಷೇಕ ಅವರಿಂದ ದೇವರ ನಾಮಗಳು. ಸ್ಥಳ: ರಾಗಿಗುಡ್ಡ, 9ನೇ ಬ್ಲಾಕ್ ಜಯನಗರ. ನಿತ್ಯ ಸಂಜೆ 6.

ಉಪನ್ಯಾಸ
ವೇದಾಂತ ಸತ್ಸಂಗ ಕೇಂದ್ರ: ಬೆಳಿಗ್ಗೆ 7.45ಕ್ಕೆ ಕೆ.ಜಿ. ಸುಬ್ರಾಯ ಶರ್ಮಾ ಅವರಿಂದ `ಅಧ್ಯಾಸ ಭಾಷ್ಯಂ~ ಉಪನ್ಯಾಸ. ಸ್ಥಳ; ಅಧ್ಯಾತ್ಮ ಮಂದಿರ, ವಿಶ್ವೇಶ್ವರಪುರಂ. ಬೆಳಿಗ್ಗೆ 9ಕ್ಕೆ ಇವರಿಂದಲೇ `ಛಾಂದೋಗ್ಯೋಪನಿಷತ್~ ಉಪನ್ಯಾಸ. ಸ್ಥಳ: ವೇದಾಂತ ನಿಲಯ, ಸಾಕಮ್ಮ ಗಾರ್ಡನ್ಸ್, ಬಸವನಗುಡಿ.

ಜಗನ್ನಾಥದಾಸರ ಆರಾಧನೆ
ಕರ್ನಾಟಕ ಹರಿದಾಸ ಸೈಂಟಿಫಿಕ್ ರಿಸರ್ಚ್ ಸೆಂಟರ್: ಜಗನ್ನಾಥದಾಸರ 202ನೇ ಆರಾಧನಾ ಮಹೋತ್ಸವದಲ್ಲಿ ಶನಿವಾರ ಶ್ರೀಕಾಂತ ಬಾಯರಿ ಅವರಿಂದ `ಬೃಹತ್ ತಾರತಮ್ಯ~ ಕುರಿತು ಉಪನ್ಯಾಸ. ಭಾನುವಾರ ಡಾ.ಆನಂದ  ತೀರ್ಥಾಚಾರ್ಯ ಮಳಗಿ ಅವರಿಂದ `ಸಕಲದುರಿತ ನಿವಾರಣ ಸಂಧಿ~ ಕುರಿತು ಉಪನ್ಯಾಸ. ಸ್ಥಳ: ನಂ.49, ವಿಜಯರಂಗ, 17ನೇ ಅಡ್ಡ ರಸ್ತೆ, ವಿಜಯನಗರ. ನಿತ್ಯ ಸಂಜೆ 5.30.

ದಶಲಕ್ಷಣ ಮಹಾಪರ್ವ
ಆದಿನಾಥ ದಿಗಂಬರ ಜಿನಮಂದಿರ: ದಶಲಕ್ಷಣ ಮಹಾಪರ್ವದಲ್ಲಿ  ಶನಿವಾರ ಅನಂತರಾಜ್ ಅವರಿಂದ `ಉತ್ತಮ ಆಕಿಂಚನ್ಯಧರ್ಮ~ ಉಪನ್ಯಾಸ. ಭಾನುವಾರ ಜಯಲಕ್ಷ್ಮಿ ಅಭಯ್‌ಕುಮಾರ್ ಅವರಿಂದ `ಉತ್ತಮ ಬ್ರಹ್ಮಚರ್ಯ ಧರ್ಮ~ ಕುರಿತು ಉಪನ್ಯಾಸ. ಅತಿಥಿ: ಪ್ರಜಾವಾಣಿಯ ಕಾರ್ಯನಿರ್ವಾಹಕ ಸಂಪಾದಕ ಪದ್ಮರಾಜ ದಂಡಾವತಿ. ಸ್ಥಳ: ಆದಿನಾಥ ದಿಗಂಬರ ಜಿನಮಂದಿರ, ಸೌತ್ ಎಂಡ್ ವೃತ್ತ, ಜಯನಗರ. ಮಧ್ಯಾಹ್ನ 2.30.

ಗೋಧಿಹುಗ್ಗಿ ಗಂಗಯ್ಯ
ಶಾರದ ಗಾನ ಕಲಾಮಂದಿರ ಟ್ರಸ್ಟ್: ಶನಿವಾರ, ಭಾನುವಾರ ಪ್ರೊ.ಜಿ.ಎಚ್. ಹನ್ನೆರಡುಮಠ ಅವರ `ಗೋಧಿ ಹುಗ್ಗಿ ಗಂಗಯ್ಯ~ ನಾಟಕ. (ಸಂಗೀತ: ಚಿದಾನಂದ ಕುಲಕರ್ಣಿ. ನಿರ್ದೇಶನ: ಅಜೇಯ್ ಪ್ರೀತಮ್ ಪಿ). ಸ್ಥಳ; ಸೃಷ್ಟಿ ವೆಂಚರ್ಸ್‌, ನಂ.81, 1ನೇ ಮಹಡಿ, ಈಎಟಿ ರಸ್ತೆ, ಬಸವನಗುಡಿ. ಸಂಜೆ 7.30. ಟಿಕೆಟ್ ಬೆಲೆ: 50 ರೂ. ಮಾಹಿತಿಗೆ: 99867 06454.

ಗ್ರಾಮೀಣ ನಾಟಕೋತ್ಸವದಲ್ಲಿ
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ನಗರ ಜಿಲ್ಲೆ, ಸ್ವಾಮಿ ವಿವೇಕಾನಂದ ಆದರ್ಶ ಸಾಧನಾ ಕೇಂದ್ರ  ಟ್ರಸ್ಟ್, ಶ್ರೀರಾಮ ಭಜನಾ ಮಂಡಳಿ: ಗ್ರಾಮೀಣ ನಾಟಕೋತ್ಸವದ್ಲ್ಲಲಿ  ಶನಿವಾರ ಸಂಜೆ 5ಕ್ಕೆ ವಿದ್ಯಾರ್ಥಿ ತಂಡದಿಂದ `ಆಧುನಿಕ ರಾಮಾಯಣ~ ನಾಟಕ. (ನಿರ್ದೇಶನ: ಟಿ.ಕೆ.ರಾಘವೇಂದ್ರ). ಸಂಜೆ 7ಕ್ಕೆ ಉದ್ಘಾಟನೆ: ಬಿ.ಆರ್.ಶ್ರೀನಿವಾಸ ಮೂರ್ತಿ. ಅತಿಥಿಗಳು: ಬಿ.ಟಿ.ಮುನಿರಾಜಯ್ಯ. ಸ್ಥಳ: ಸರ್ಕಾರಿ ಪ್ರೌಢಶಾಲೆ , ಬಾಗಲಗುಂಟೆ.  ಭಾನುವಾರ ಸಂಜೆ 5ಕ್ಕೆ ವಾಸ್ಕ್ ಯೋಗ ಸದಸ್ಯರ ಬಳಗದಿಂದ ನಾಟಕ. ರಂಗಭೂಮಿ ಕಲಾವಿದರ ಒಕ್ಕೂಟದಿಂದ ರಂಗಗೀತೆ. ಸಂಜೆ 7ಕ್ಕೆ ಸಮಾರೋಪ. ಸ್ಥಳ: ವಾಸ್ಕ್ ಯೋಗ ಕೇಂದ್ರ, ನಂ.45/1, ಪ್ರಣವ, 4ನೇ ಮುಖ್ಯ ರಸ್ತೆ, ಗಣೇಶ ದೇವಸ್ಥಾನದ ಸಮೀಪ, ಹಾವನೂರು ಬಡಾವಣೆ, ಹೆಸರಘಟ್ಟ ಮುಖ್ಯ ರಸ್ತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT