ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಕು ಪ್ರಾಣಿ ಅಪ್ಪುಗೆಯೇ ಲೇಸು!

Last Updated 12 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಲಂಡನ್ (ಪಿಟಿಐ): ಲಂಡನ್ನಿನಲ್ಲಿರುವ ಅನೇಕ ಸಾಕು ಪ್ರಾಣಿಗಳ ಮಾಲೀಕರಿಗೆ ತಮ್ಮ ಆತ್ಮೀಯ ಸಂಬಂಧಿಕರಿಗಿಂತ ಸಾಕು ಪ್ರಾಣಿಗಳನ್ನು ತಬ್ಬಿಕೊಳ್ಳುವುದೇ ಹೆಚ್ಚು ಪ್ರಿಯವಂತೆ. ಇದು ಸಂಶೋಧನೆಯಿಂದ ಸಾಬೀತಾಗಿದೆ.

ಸಾಕುಪ್ರಾಣಿಗಳಿಗಾಗಿ ಇರುವ ಮೈ ಸೋಶಿಯಲ್ ಪೆಟ್‌ವರ್ಕ್ ಎಂಬ  ಸಾಮಾಜಿಕ ಜಾಲತಾಣ ನಡೆಸಿದ ಸಮೀಕ್ಷೆಯಲ್ಲಿ ಭಾಗವಹಿಸಿದ್ದ 1,124 ಮಂದಿ ಬ್ರಿಟಿಷರ ಪೈಕಿ ಅರ್ಧದಷ್ಟು ಮಂದಿ ಸಂಬಂಧಿಕರಿಗಿಂತ ಸಾಕು ಪ್ರಾಣಿಗಳೇ ಲೇಸು ಎಂದಿದ್ದರೆ, ಮೂರನೇ ಒಂದರಷ್ಟು ಜನರು ತಮ್ಮ ಸಾಕು ಪ್ರಾಣಿಗಳ ಕಾಳಜಿಗಾಗಿ ವರ್ಷದ 30 ದಿನಗಳನ್ನು ಕಳೆಯುತ್ತಾರೆ ಎನ್ನುವುದು ಗೊತ್ತಾಗಿದೆ.

ಐವರಲ್ಲಿ ಒಬ್ಬರು ತಮ್ಮ ಸಾಕು ಪ್ರಾಣಿಗಳ ಚಿತ್ರಗಳನ್ನು ಹಂಚಿಕೊಳ್ಳಲು ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ಟ್ವಿಟರ್‌ಗಳಿಗೆ ನಿಯಮಿತವಾಗಿ ಭೇಟಿ ನೀಡುತ್ತಾರೆ. ಶೇ 10ರಷ್ಟು ಮಂದಿ ತಮ್ಮ ಸಾಕು ಪ್ರಾಣಿಗಳನ್ನು ಮದುವೆ ಮುಂತಾದ ಸಮಾರಂಭಗಳಿಗೆ ಕರೆದೊಯ್ಯುತ್ತಾರೆ ಎಂದು ಬಿಬಿಸಿ ವರದಿ ಮಾಡಿದೆ.  ಶೇ 7ರಷ್ಟು ಮಂದಿ ತಮ್ಮ ಪೂರ್ವ ನಿಗದಿತ ಕಾರ್ಯಗಳನ್ನು ರದ್ದುಪಡಿಸುವುದು ಹಾಗೂ ಶೇ 4ರಷ್ಟು ಸಿಬ್ಬಂದಿ ಅನಾರೋಗ್ಯದ ಕಾರಣ ಹೇಳಿ ಕಚೇರಿಗಳಿಂದ ರಜೆ ಪಡೆಯುವುದು ತಮ್ಮ ಸಾಕು ಪ್ರಾಣಿಗಳ ಸಲುವಾಗಿ ಎನ್ನುತ್ತದೆ ಸಮೀಕ್ಷೆ.

ಇಲ್ಲಿನ ಸಾಕುಪ್ರಾಣಿ ಮಾಲೀಕರಲ್ಲಿ ಕಾಲು ಭಾಗದಷ್ಟು ಮಂದಿ ಸಾಕುಪ್ರಾಣಿಗಳನ್ನು ಮಗುವಿನಂತೆ ಭಾವಿಸುವುದಾಗಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT