ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾನಿಯಾ-ಬೆಥನಿ ಜೋಡಿಗೆ ಪ್ರಶಸ್ತಿ

Last Updated 5 ಜನವರಿ 2013, 19:59 IST
ಅಕ್ಷರ ಗಾತ್ರ

ಬ್ರಿಸ್ಬೇನ್ (ಪಿಟಿಐ): ಸಾನಿಯಾ ಮಿರ್ಜಾ ಅವರು ಇಲ್ಲಿ ನಡೆದ ಡಬ್ಲ್ಯುಟಿಎ ಬ್ರಿಸ್ಬೇನ್ ಅಂತರರಾಷ್ಟ್ರೀಯ ಟೆನಿಸ್ ಟೂರ್ನಿಯ ಡಬಲ್ಸ್‌ನಲ್ಲಿ ಅಮೆರಿಕಾದ ಬೆಥನಿ ಮಾಟೆಕ್ ಸ್ಯಾಂಡ್ಸ್ ಜತೆಗೂಡಿ ಆಡಿ ಪ್ರಶಸ್ತಿಯನ್ನು ಗೆದ್ದುಕೊಂಡರು.

ಶನಿವಾರ ನಡೆದ ಈ ತೀವ್ರ ಸೆಣಸಾಟದ ಫೈನಲ್‌ನಲ್ಲಿ ಎರಡನೇ ಶ್ರೇಯಾಂಕದ ಈ ಜೋಡಿ 4-6, 6-4, 10-07ಯಿಂದ ಕ್ವೇಟಾ ಪೆಶ್ಕೆ ಮತ್ತು ಆನಾ ಲೆನಾ ಅವರ ವಿರುದ್ಧ ಗೆಲುವು ಸಾಧಿಸಿತು.
ನಾಲ್ಕನೇ ಶ್ರೇಯಾಂಕದ ಕ್ವೇಟಾ ಜೋಡಿ ಮೊದಲ ಸೆಟ್‌ನಲ್ಲಿ ಗೆದ್ದಿತಾದರೂ, ನಂತರದ ಎರಡು ಸೆಟ್‌ಗಳಲ್ಲಿ ಸಾನಿಯ-ಬೆಥನಿ ಜೋಡಿಯೇ ಮೇಲುಗೈ ಸಾಧಿಸಿತು.

ಈ ಗೆಲುವಿನೊಂದಿಗೆ ಸಾನಿಯ ಮತ್ತು ಮಾಟೆಕ್ ಜೋಡಿಗೆ 470 ಪಾಯಿಂಟ್ಸ್‌ಗಳು ಸಿಕ್ಕಿದವಲ್ಲದೆ, ಇವರಿಬ್ಬರು 28 ಲಕ್ಷ ರೂಪಾಯಿಗಳ ನಗದು ಬಹುಮಾನವನ್ನು ಹಂಚಿಕೊಂಡರು.
ಈ ಋತುವಿನಲ್ಲಿ ಸಾನಿಯಾ ಮಿರ್ಜಾ  ಅವರು ಜಯಿಸಿದ ಮೊದಲ  ಪ್ರಶಸ್ತಿ ಇದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT