ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಪೇಕ್ಷ ಸಿದ್ಧಾಂತ ಸುಳ್ಳಾಗಲಿದೆಯೇ..?

Last Updated 23 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಜಿನೀವಾ (ಪಿಟಿಐ): ಬ್ರಹ್ಮಾಂಡದ ಬೇರ‌್ಯಾವ ಭೌತಿಕ ವಸ್ತುವಿನ ವೇಗವೂ ಬೆಳಕಿನ ವೇಗವನ್ನು ಮೀರಲಾಗದು ಎನ್ನುತ್ತದೆ ದಾರ್ಶನಿಕ ವಿಜ್ಞಾನಿ ಐನ್‌ಸ್ಟೀನ್ 1905ರಲ್ಲಿ ಮಂಡಿಸಿದ ಪ್ರಸಿದ್ಧ ಸಾಪೇಕ್ಷ ಸಿದ್ಧಾಂತ. ಈ ಗ್ರಹಿಕೆ ಈಗಿನ ಭೌತವಿಜ್ಞಾನದ ಮೂಲತತ್ವಗಳ ಬಹುಮುಖ್ಯ ಆಧಾರಗಳಲ್ಲಿ ಒಂದೂ ಹೌದು. ಆದರೆ ಐನ್‌ಸ್ಟೀನ್‌ರ ಈ  ಪ್ರತಿಪಾದನೆ ಸರಿಯಲ್ಲ ಎಂಬುದು ಮುಂಬರುವ ದಿನಗಳಲ್ಲಿ ಸಾಬೀತಾಗಬಹುದು ಎಂದಿದ್ದಾರೆ ವಿಜ್ಞಾನಿಗಳು.

ಪರಮಾಣುವಿನ ಉಪಕಣಗಳಾದ ನ್ಯೂಟ್ರಿನೊಗಳು ಬೆಳಕಿಗಿಂತ ಹೆಚ್ಚು ವೇಗವಾಗಿ ಸಂಚರಿಸುತ್ತವೆ ಎಂದು ಯೂರೋಪ್ ಪರಮಾಣು ಸಂಶೋಧನಾ ಸಂಸ್ಥೆಯ (ಸೆರ್ನ್) ತಜ್ಞರು ಹೇಳಿದ್ದಾರೆ.

ಜಿನೀವಾದ ಬಳಿ ಇರುವ ಪ್ರಯೋಗಾಲಯದ ಕಣ ವೇಗೋತ್ಕರ್ಷಕದಿಂದ (ಪಾರ್ಟಿಕಲ್ ಆಕ್ಸಲರೇಟರ್)  ನ್ಯೂಟ್ರಿನೊ ಕಿರಣ ಗುಚ್ಛವನ್ನು ಚಿಮ್ಮಿಸಿದಾಗ ಅದು 730 ಕಿ.ಮೀ. ದೂರದ ಇಟಲಿಗೆ ಕೇವಲ 60 ನ್ಯಾನೊ ಸೆಕೆಂಡುಗಳಲ್ಲಿ ತಲುಪಿರುವುದು ದಾಖಲಾಗಿದೆ. ಈ ಪ್ರಕಾರ ಲೆಕ್ಕಹಾಕಿದರೆ, ನ್ಯೂಟ್ರಿನೊ ವೇಗ ಬೆಳಕಿನ ವೇಗವನ್ನು ಮೀರುತ್ತದೆ; ಈ ಕಣಗಳ ವೇಗ ಬೆಳಕಿನ ಪ್ರತಿ 10 ಲಕ್ಷ ಅಂಶಗಳಿಗೆ 20 ಅಂಶಗಳಷ್ಟು ಮುಂದಿರುತ್ತದೆ ಎಂದು ವಿವರಿಸಿದ್ದಾರೆ.

ಆದರೆ ಇದನ್ನು ಅಧಿಕೃತವಾಗಿ ಪ್ರಕಟಿಸುವ ಮುನ್ನ ವಿಜ್ಞಾನಿಗಳು ತುಂಬಾ ಎಚ್ಚರಿಕೆ ವಹಿಸಿದ್ದಾರೆ. ತಮ್ಮ ಪ್ರಯೋಗದ ನಿಖರತೆ ಖಚಿತಪಡಿಸಿಕೊಳ್ಳಲಿಕ್ಕಾಗಿ, ಜಗತ್ತಿನ ಬೇರೆ ಬೇರೆ ಕಡೆಯ ವಿಜ್ಞಾನಿಗಳಿಗೆ ಇದೇ ರೀತಿಯ ಪ್ರಯೋಗ ಮಾಡಿ ನ್ಯೂಟ್ರಿನೊ ಉಪಕಣಗಳ ವೇಗ ದಾಖಲಿಸಲು ಕೋರಿದ್ದಾರೆ. ಏಕೆಂದರೆ ಈ ಮುನ್ನ 2007ರಲ್ಲಿ ಷಿಕಾಗೊ ಸಂಶೋಧಕರ ತಂಡವೊಂದು ಬೆಳಕಿನ ವೇಗ ಮೀರುವ ಕಣಗಳನ್ನು ತಾವು ಕಂಡುಹಿಡಿದಿರುವುದಾಗಿ ಪ್ರಕಟಿಸಿದ್ದರು. ಆದರೆ ಆ ಪ್ರಯೋಗಗಳ ವೇಳೆ ತಜ್ಞರು ದಾಖಲಿಸಿದ ಸಮಯದಲ್ಲೇ ಭಾರಿ ದೋಷ ಇರುವುದು ನಂತರ ದೃಢಪಟ್ಟಿತ್ತು. ಹೀಗಾಗಿ ಷಿಕಾಗೊ ಸಂಶೋಧಕರ ವಾದ ಆರಂಭದಲ್ಲೇ ಬಿದ್ದು ಹೋಗಿತ್ತು.

ಒಂದೊಮ್ಮೆ  ಸೆರ್ನ್ ಭೌತ ವಿಜ್ಞಾನಿಗಳ ನಿಜವಾಗಿದ್ದೇ ಆದರೆ ಅದು ವಿಜ್ಞಾನ ಲೋಕವನ್ನೇ ದಂಗುಬಡಿಸಲಿದೆ. ಬ್ರಹ್ಮಾಂಡದ ಭೌತಿಕ ನಿಯಮಗಳ ಮೂಲಭೂತ ತತ್ವಗಳೇ ಹೊಸ ರೂಪ ಪಡೆಯಲಿವೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT