ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮರ್ಥ್ಯ ಹೆಚ್ಚಿದೆ

Last Updated 17 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಹಳ್ಳಿಯ ಕನ್ನಡ ಶಾಲೆಯಲ್ಲಿ ಓದಿದ ನನಗೆ ಕಷ್ಟಗಳನ್ನು ಎದುರಿಸುವುದು ಸುಲಭ. ಹಳ್ಳಿಯ ಬದುಕು ಮತ್ತು ಕನ್ನಡದ ಓದು ನನ್ನನ್ನು ಮಾನಸಿಕವಾಗಿ ದೃಢವಾಗಿ ರೂಪಿಸಿದೆ. 

ಎಂಸಿಎ ಮಾಡಿ ಬಹುರಾಷ್ಟ್ರೀಯ ಕಂಪೆನಿಯಲ್ಲಿ ಕೆಲಸ ಪಡೆದು ದೇಶ ಬಿಟ್ಟು ಬೇರೆ ದೇಶಕ್ಕೆ ಬಂದರೂ ಎದೆಗುಂದದೆ ಸ್ವತಂತ್ರವಾಗಿ ಬದುಕು ಕಟ್ಟಿಕೊಂಡಿದ್ದೇನೆ.

 ಕನ್ನಡದ ಹುಡುಗರಿಗೆ ಮಾನಸಿಕ ಸಾಮರ್ಥ್ಯ ಹೆಚ್ಚು ಅನ್ನುವುದು ನನ್ನ ಅಭಿಮತ. ನನ್ನ ಜತೆ ಓದಿದವರು ವೃತ್ತಿಯಲ್ಲಷ್ಟೇ ಅಲ್ಲ, ಬದುಕಿನಲ್ಲೂ ಕಷ್ಟಗಳನ್ನು ಸಮರ್ಥವಾಗಿ ಎದುರಿಸಿ, ಸುಖದ ಬದುಕು ಕಟ್ಟಿಕೊಂಡಿದ್ದಾರೆ.

ಚಿಕ್ಕಮಕ್ಕಳು ಮಾತೃಭಾಷೆಯಲ್ಲೇ ಓದಬೇಕು. ಇದರಿಂದ ಯಾವ ವಿಷಯವನ್ನಾದರೂ ಸುಲಭವಾಗಿ ಗ್ರಹಿಸಲು ಸಾಧ್ಯ. ಅತ್ತ ಕನ್ನಡವನ್ನು ಕಲಿಯದೇ ಇತ್ತ ಇಂಗ್ಲಿಷ್ ಬಾರದೇ ಅತಂತ್ರರಾಗುವುದಕ್ಕಿಂತ ಕನ್ನಡದಲ್ಲೇ ಆರಂಭಿಕ ಶಿಕ್ಷಣ ಪಡೆದರೆ ನಮ್ಮ ಸಾಮರ್ಥ್ಯ ವೃದ್ಧಿಯಾಗುತ್ತದೆ.

ಇದು ನನ್ನ ಅನುಭವ. ಕನ್ನಡದಲ್ಲಿ ಕಲಿತಿದ್ದ ಕಾರಣ ನಾನು ಇಂದು ಮಾನಸಿಕವಾಗಿ ಹೆಚ್ಚು ದೃಢವಾಗಿದ್ದೆೀನೆ.

ಐ.ಸಿ. ವಿಜಯಕುಮಾರ್ (ಅಮೆರಿಕದ ಬಹುರಾಷ್ಟ್ರೀಯ ಕಂಪೆನಿಯೊಂದರಲ್ಲಿ ಟೀಂ ಲೀಡರ್) (ಹುಟ್ಟೂರು ದಾವಣಗೆರೆ ತಾಲ್ಲೂಕು ಕಕ್ಕರಗೊಳ್ಳ)
(ನಿರೂಪಣೆ: ಮಂಜುಶ್ರೀ ಕಡಕೋಳ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT