ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮಾಜಿಕ, ಆರ್ಥಿಕ, ಜಾತಿ ಗಣತಿ ದತ್ತಾಂಶದ ಕರಡು ಪಟ್ಟಿ ಪ್ರಕಟ

Last Updated 2 ಜನವರಿ 2014, 9:29 IST
ಅಕ್ಷರ ಗಾತ್ರ

ಕಾರವಾರ:ಉತ್ತರ ಕನ್ನಡ ಜಿಲ್ಲೆಯ ಎಲ್ಲ ತಾಲ್ಲೂಕುಗಳ ಗ್ರಾಮೀಣ ಹಾಗೂ ನಗರ ಹಾಗೂ ಪಟ್ಟಣಗಳ ಪ್ರದೇಶಕ್ಕೆ ಸಂಬಂಧಪಟ್ಟಂತೆ ಸಾಮಾಜಿಕ, ಆರ್ಥಿಕ ಮತ್ತು ಜಾತಿ ಗಣತಿ 2011 ರ ಗಣತಿ ದತ್ತಾಂಶಗಳ ಕರಡು ಪಟ್ಟಿಗಳನ್ನು ಗ್ರಾಮಾಂತರ ಪ್ರದೇಶಕ್ಕೆ ಸಂಬಂಧಪಟ್ಟಂತೆ ಎಲ್ಲ ಗ್ರಾಮ ಪಂಚಾಯ್ತಿ ಕಚೇರಿಗಳಲ್ಲಿ ಹಾಗೂ ನಗರ ಮತ್ತು ಪಟ್ಟಣ ಪ್ರದೇಶಕ್ಕೆ ಸಂಬಂಧಪಟ್ಟಂತೆ ಎಲ್ಲ ನಗರಸಭೆ ಕಚೇರಿಗಳಲ್ಲಿ ಡಿ.31ರಂದು ಸಾರ್ವಜನಿಕರ ಪರಿಶೀಲನೆಗಾಗಿ ಪ್ರಕಟಿಸಲಾಗಿದೆ.

ಈ ಕರಡು ಪಟ್ಟಿಗಳನ್ನು ಪರಿಶೀಲಿಸಿ ತಮ್ಮ ಹಾಗೂ ತಮ್ಮ ಕುಟುಂಬದ ಎಲ್ಲಾ ಸದಸ್ಯರ ಹೆಸರುಗಳು ಸೇರ್ಪಡೆ ಆಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬಹುದು. ಸೇರ್ಪಡೆ ಆಗದೆ ತಪ್ಪಿ ಉಳಿದದ್ದು ಕಂಡು ಬಂದಲ್ಲಿ ಸೇರ್ಪಡೆಗೆ ಅರ್ಜಿ ನಮೂನೆ ‘ಸಿ’ ಯೊಂದಿಗೆ ಪ್ರಶ್ನಾವಳಿಯನ್ನು ತುಂಬಿ ಅಥವಾ ತಪ್ಪಾಗಿ ದಾಖಲಾಗಿದ್ದರೆ ತಿದ್ದುಪಡಿ ಅರ್ಜಿ ನಮೂನೆ ‘ಬಿ’ ಅಥವಾ ಸೇರ್ಪಡೆ ಆದ ನೋಂದಣಿಯನ್ನು ಕಡಿಮೆ ಮಾಡಲು ನಮೂನೆ ‘ಎ’ ಅರ್ಜಿಯನ್ನು ಜನವರಿ 21 ರ ಒಳಗಾಗಿ ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ಸಂಬಂಧಪಟ್ಟ ಆಯಾ ಗ್ರಾಮ ಪಂಚಾಯತ ಕಚೇರಿ, ನಗರ ಅಥವಾ ಪಟ್ಟಣ ಪ್ರದೇಶದ ಮುನ್ಸಿಪಾಲಿಟಿ ಕಚೇರಿಗಳಲ್ಲಿ ಸಲ್ಲಿಸಬೇಕು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT