ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಸಾಮಾಜಿಕ ಕಾರ್ಯಕ್ಕೆ ಬಳಕೆಯಾಗಲಿ'

Last Updated 6 ಡಿಸೆಂಬರ್ 2012, 8:08 IST
ಅಕ್ಷರ ಗಾತ್ರ

ರಾಣೆಬೆನ್ನೂರು: ದುಡಿದ ಹಣದಲ್ಲಿ ಸ್ವಲ್ಪವನ್ನಾದರೂ ಸಮಾಜದ ಕಾರ್ಯಕ್ಕೆ ಮೀಸಲಿಡಬೇಕು. ದಾನ ಧರ್ಮದಲ್ಲಿ ತೊಡಗಬೇಕು ಎಂದು ಕಾಶಿ ಪೀಠದ ಡಾ. ಚಂದ್ರಶೇಖರ ಸ್ವಾಮೀಜಿ ಹೇಳಿದರು.

ನಗರದ ಕೊಟ್ಟೂರೇಶ್ವರ ದೇವಸ್ಥಾನದ ಆವರಣದಲ್ಲಿ ಬುಧವಾರ ಶಿವಲಿಂಗಯ್ಯ ಕರ್ಜಿಗಿಮಠ ಅವರ ಜನ್ಮ ದಿನದ ವಜ್ರಮಹೋತ್ಸವ ಹಾಗೂ ವಿವಾಹ ಸುವರ್ಣ ಮಹೋತ್ಸವದ ಅಂಗವಾಗಿ ಏರ್ಪಡಿಸಿದ್ಧ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.

ಸಿದ್ದಾಂತ ಶಿಖಾಮಣಿ ವೀರಶೈವ ಧರ್ಮ ಗ್ರಂಥ, ಪಾರಾಯಣ ಗ್ರಂಥ, ಅದನ್ನು ದಿನಾಲು ಪಾರಾಯಣ ಮಾಡಿದರೆ ಲಿಂಗ ಸಾಮರಸ್ಯ, ಜ್ಞಾನ ಪ್ರಾಪ್ತಿಯಾಗುತ್ತದೆ, ಕಷ್ಟಗಳು ದೂರವಾಗಿ ಇಷ್ಟಾರ್ಥಗಳು ಒದಗುತ್ತವೆ, ಶಿವಲಿಂಗಯ್ಯ ಕರ್ಜಿಮಠರು 80ಸಾವಿರ ಶಿದ್ದಾಂತ ಶಿಖಾಮಣಿ ಗ್ರಂಥಗಳನ್ನು ಮುದ್ರಣ ಮಾಡಿಸಿ ಭಕ್ತರಿಗೆ ಉಚಿತವಾಗಿ ವಿತರಣೆ ಮಾಡಲಿದ್ದಾರೆ ಎಂದರು.  

ಉಜ್ಜಯಿನಿ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಶಿವಲಿಂಗಯ್ಯ ಕರ್ಜಿಗಿಮಠ ಅವರು ಬಡ ವಿದ್ಯಾರ್ಥಿಗಳ ವ್ಯಾಸಂಗಕ್ಕಾಗಿ ಅರ್ಬನ್ ಬ್ಯಾಂಕಿನಲ್ಲಿ ಒಂದು ಲಕ್ಷ ರೂಪಾಯಿ ಠೇವಣಿ ಇಟ್ಟಿದ್ದಾರೆ. ಅಲ್ಲದೇ ಒಂದು ಸಾವಿರದಾ ಎಂಟು ಭಕ್ತರನ್ನು ಕಾಶಿ, ಉಜ್ಜಯಿನಿ, ಶ್ರೀಶೈಲ ಪೀಠಕ್ಕೆ ಉಚಿತವಾಗಿ ಪುಣ್ಯ ಕ್ಷೇತ್ರ ದರ್ಶನ ಮಾಡಿಸುವ ಬಹಳ ದೊಡ್ಡ ಉದ್ದೇಶ ಹೊಂದಿದ್ದಾರೆ ಎಂದು ಬಣ್ಣಿಸಿದರು.

ಶ್ರೀಶೈಲ ಪೀಠದ ಡಾ. ಚೆನ್ನಸಿದ್ದರಾಮ ಸ್ವಾಮೀಜಿ ಮಾತನಾಡಿ, ಹಿಂದಿನ ಶ್ರೀಗಳ ಕಹಿ ನೆನಪನ್ನು ಈಗಿನ ಶ್ರೀಶೈಲ ಶ್ರೀಗಳು ಎಲ್ಲ ಭಿನ್ನಾಭಿಪ್ರಾಯಗಳನ್ನು ಮರೆತು ಪಟ್ಟಾಧಿಕಾರ ಆದ ಮೇಲೆ ಮತ್ತೆ ಸಂತೋಷದಿಂದ ನಗರಕ್ಕೆ ಪುರ ಪ್ರವೇಶ ಮಾಡಿದ್ದಾರೆ, ಭಕ್ತರು ಕೂಡ ಮರೆಯಬೇಕು, ಭಕ್ತರ ಮನಸ್ಸು ಕಟ್ಟುವ ಕೆಲಸಕ್ಕೆ ಮುಂದಾಗಿದ್ದಾರೆ, ಭಕ್ತರು ಕೂಡ ಸಮಾಜದ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದರು.

ಅಧ್ಯಕ್ಷತೆ ವಹಿಸಿದ ಹೊನ್ನಾಳಿ ಒಡೆಯರ ಚಂದ್ರಶೇಖರ ಸ್ವಾಮೀಜಿ ಮಾತನಾಡಿದರು. ದಿಂಡದಹಳ್ಳಿ ಹಿರೇಮಠದ ಪಶುಪತಿಶಿವಾನಂದ ಸ್ವಾಮೀಜಿ ನೇತೃತ್ವ ವಸಿದ್ದರು.

ಶಿವಲಿಂಗಯ್ಯ ರುದ್ರಯ್ಯ ಕರ್ಜಿಗಿಮಠ ಅವರು 75 ವಸಂತಗಳನ್ನು  ಮತ್ತು ವಿವಾಹವಾಗಿ 50 ವರ್ಷ ಪೂರೈಸಿದ್ದಕ್ಕಾಗಿ ಪಂಚಪೀಠಗಳ ಶ್ರೀಗಳು ದಂಪತಿಯನ್ನು ಸನ್ಮಾನಿಸಿದರು.

ಬಿಬಿಎಂಪಿ ಮಾಜಿ ಉಪಮೇಯರ್ ಆರ್.ಶಂಕರ್ , ಜಿಲ್ಲಾ ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ಭಾರತಿ ಜಂಬಿಗಿ ಮಾತನಾಡಿದರು.
ಲಿಂಗದಹಳ್ಳಿ ವೀರಭದ್ರಸ್ವಾಮೀಜಿ, ಮೈಸೂರಿನ ಡಾ. ಮುಮ್ಮಡಿ ಚಂದ್ರಶೇಖರ ಸ್ವಾಮೀಜಿ, ಮಣಕೂರು ಮಲ್ಲಿಕಾರ್ಜುನ ಸ್ವಾಮೀಜಿ, ಚನ್ನಗಿರಿ ಕೇದಾರಲಿಂಗ ಶಿವಶಾಂತವೀರ ಸ್ವಾಮೀಜಿ, ಸಿದ್ಧನಂದೀಶ್ವರ ಸ್ವಾಮೀಜಿ, ವೀರಭದ್ರದೇವರು, ಅಭಿನವಸಿದ್ಧಲಿಂಗ ಸ್ವಾಮೀಜಿ, ರಾಚೋಟೇಶ್ವರ ಸ್ವಾಮೀಜಿ, ಶಿವಯೋಗೀಶ್ವರ ಸ್ವಾಮೀಜಿ, ಗುರುಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಮಾಜಿ ಸಚಿವ ಕೆ.ಬಿ. ಕೋಳಿವಾಡ, ಜಿ.ಪಂ. ಅಧ್ಯಕ್ಷ ಎಸ್. ಎನ್. ಮಾತನವರ, ಎಸ್. ಎಸ್. ರಾಮಲಿಂಗಣ್ಣನವರ, ನಗರಸಭಾ ಅಧ್ಯಕ್ಷ ಡಾ. ಗಣೇಶ ದೇವಗಿರಿಮಠ. ಸದಸ್ಯರಾದ ಮಂಜುನಾಥ ಗೌಡಶಿವಣ್ಣವನರ, ವೀರೇಶ ಚಿನ್ನಿಕಟ್ಟಿ, ಚಂದ್ರಪ್ಪ ರಮಾಳದ, ಎಸ್.ಎಂ. ವಿರೇಶ, ಬಸವರಾಜ ತಾವರಗೊಂದಿ, ಗೂಳಪ್ಪ ನರಸಗೊಂಡರ, ಬಸವರಾಜ ರೊಡ್ಡನವರ, ವೀರಣ್ಣ ಅಂಗಡಿ, ಉಮೇಶ ಗುಂಡಗಟ್ಟಿ, ಭಾರತಿ ಜಂಬಿಗಿ, ಚಂದ್ರಪ್ಪ ರೊಡ್ಡನವರ, ವಿ.ಬಿ. ಅಂಗಡಿ, ಪರಮೇಶಪ್ಪ ಗೌಳಿ, ಮಹೇಶ್ವರ ಸ್ವಾಮೀಜಿ ಮತ್ತಿತರರು ಉಪಸ್ಥಿತರಿದ್ದರು.

ಪ್ರೊ.ಕೆ.ಎಂ. ರುದ್ರಯ್ಯ ಪ್ರಸಾದಿಮಠ ಸ್ವಾಗತಿಸಿದರು. ಶನೇಶ್ಚರ ಮಠದ ಶಿವಯೋಗಿ ದೇವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಸ್ತೂರಿ ಪಾಟೀಲ ಹಾಗೂ ಗೀತಾ ಹಿರೇಮಠ ಕಾರ್ಯಕ್ರಮ ನಿರೂಪಿಸಿದರು. ಪ್ರಭು ಕರ್ಜಿಗಿಮಠ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT