ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮಾಜಿಕ ಜಾಲತಾಣಕ್ಕೆ ಯುವತಿ ಬೆತ್ತಲೆ ಚಿತ್ರ: ಬಂಧನ

Last Updated 10 ಜನವರಿ 2014, 19:30 IST
ಅಕ್ಷರ ಗಾತ್ರ

ಉಡುಪಿ: ಗೆಳತಿಯ ಬೆತ್ತಲೆ ಚಿತ್ರಗಳನ್ನು ಸಾಮಾಜಿಕ ಜಾಲತಾಣಕ್ಕೆ ಅಪ್‌­ಲೋಡ್ ಮಾಡಿದ ಆರೋಪದ ಮೇಲೆ ಕಟಪಾಡಿಯ ಮಹಮ್ಮದ್‌ ಯಾಸೀರ್‌ (22) ಎಂಬಾತನನ್ನು ಮಣಿಪಾಲ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಈ ಬಗ್ಗೆ ಮಣಿಪಾಲದ ಯುವತಿ ದೂರು ನೀಡಿದ್ದಾರೆ. ‘ಹತ್ತು ತಿಂಗಳ ಹಿಂದೆ ಸ್ನೇಹಿತರಿಂದ ಮಹಮ್ಮದ್‌ ಯಾಸೀರ್‌ ಪರಿಚಯವಾಗಿತ್ತು. ನನ್ನ ಬೆತ್ತಲೆ ಚಿತ್ರಗಳನ್ನು ತೆಗೆದಿಟ್ಟುಕೊಂಡಿದ್ದ ಆತ ಫೇಸ್‌ಬುಕ್‌ ಮತ್ತು ವಾಟ್ಸ್‌ ಅಪ್‌ಗೆ ಅಪ್‌ಲೋಡ್‌ ಮಾಡಿದ್ದಾನೆ. ದುಬೈನಲ್ಲಿರುವ ಆತನ ಗೆಳತಿಯ ಜೊತೆ ಸೇರಿ ಆತ ಈ ಕೃತ್ಯ ಎಸಗಿದ್ದಾನೆ’ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ದೂರಿನ ಆಧಾರದ ಮೇಲೆ ಯುವಕನನ್ನು ಬಂಧಿಸಲಾಗಿದೆ. ‘ನಾನು ಅಪ್‌ಲೋಡ್‌ ಮಾಡಿಲ್ಲ, ನನ್ನ ಫೇಸ್‌ಬುಕ್ ಖಾತೆಯನ್ನು ಹ್ಯಾಕ್‌ ಮಾಡಿರುವ ದುಬೈ ಗೆಳತಿ ಈ ರೀತಿ ಮಾಡಿದ್ದಾಳೆ’ ಎಂದು ಮಹಮ್ಮದ್ ಯಾಸೀರ್ ವಿಚಾರಣೆ ವೇಳೆ ತಿಳಿಸಿದ್ದಾನೆ. ಬಂಧಿತನು ಪಿಯುಸಿವರೆಗೆ ವಿದ್ಯಾಭ್ಯಾಸ ಪಡೆದಿದ್ದು, ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ದ. ಅಲ್ಲದೆ ಕೆಲಸಕ್ಕಾಗಿ ದುಬೈಗೆ ತೆರಳಲು ಪ್ರಯತ್ನ ನಡೆಸುತ್ತಿದ್ದ ಎಂದು ತಿಳಿದುಬಂದಿದೆ.

ಕಾಲೇಜೊಂದರ ಪದವಿ ವಿದ್ಯಾರ್ಥಿನಿ­ಯಾದ ಯುವತಿ ಹಿಂದೂ ಧರ್ಮಕ್ಕೆ ಸೇರಿದವಳು ಎಂದು ತಿಳಿದುಬಂದಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT