ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮಾನ್ಯ ಸರಕಿನಲ್ಲಿ ಕಲೆ

Last Updated 12 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಚಿತ್ರಕಲಾಕೃತಿ ರಚನೆಗೆ ವಸ್ತು ವಿಷಯ ಇಂತಹುದೇ ಆಗಬೇಕು ಎಂದೇನಿಲ್ಲ. ಆಯ್ಕೆಗೆ ಸೃಜನಶೀಲ ಮನಸ್ಸು ಇರಬೇಕು ಅಷ್ಟೆ.

ಸಾಮಾನ್ಯರಿಗೆ ಸಾಧಾರಣ ಎಂದು ಕಾಣುವ ವಸ್ತುಗಳು ಕಲಾವಿದನ ಸೃಜನಶೀಲ ಮನಸ್ಸಿಗೆ ಅದ್ಭುತ ಕಲಾಕೃತಿ ಯಂತೆ ಕಾಣಿಸಬಹುದು. ನೋಟದಲ್ಲಿ ನಾವಿನ್ಯತೆ ಇದ್ದರೆ ಮಾತ್ರ ಹೊಸತನ್ನು ಸೃಜಿಸಲು ಸಾಧ್ಯ.

ಖ್ಯಾತ ಕಲಾವಿದ ಸಿ.ಚಂದ್ರಶೇಖರ ಅವರ ಕಲಾಕೃತಿಗಳೆಲ್ಲವೂ ಈ ನಮೂನೆಯವೇ ಆಗಿವೆ. ಅವರು ಚಿತ್ರಕಲಾಕೃತಿ ರಚನೆಗೆ ಬೇಕಾದ ವಸ್ತುವಿಷಯದ ಆಯ್ಕೆಗೆ  ಸಂಬಂಧಿಸಿದಂತೆ ಭೃಂಗದ ಬೆನ್ನೇರಿಲ್ಲ.

ಬದಲಾಗಿ ನಮ್ಮ ನಡುವೆ ಅತಿ ಸಾಮಾನ್ಯವೆನಿಸುವಂತೆ ಕಾಣುವ ಮುರಿದು ಬಿದ್ದ ಅಥವಾ ಬಿರುಕು ಬಿಟ್ಟ ಗೋಡೆಗಳು, ಒಣಗಲು ಹಾಕಿರುವ ಬಟ್ಟೆಗಳು, ಕಟ್ಟಡ ನಿರ್ಮಾಣ ಮಾಡುವಾಗ ಮುಂದೆ ಕಟ್ಟುವ ತಗಡಿನ ಶೆಡ್‌ಗಳು, ತೂತಾದ ಪರದೆಗಳು ಇವುಗಳನ್ನೇ ಕ್ಲಿಕ್ಕಿಸಿ ಅವಕ್ಕೆ ಕಲಾ ಶೃಂಗಾರ ಮಾಡಿದ್ದಾರೆ. ಈ ಮೂಲಕ ನಾವೀನ್ಯತೆ ಮೆರೆದಿದ್ದಾರೆ.

ಸಂಚಲನ ಹೆಸರಿನಡಿಯಲ್ಲಿ ಪ್ರದರ್ಶನಕ್ಕೆ ಇರಿಸಿರುವ ಇವರ ಕಲಾಕೃತಿಗಳು `ಇಂಟ್ರಾಸ್ಪೆಕ್ಷನ್~ (ಆತ್ಮ ವಿಮರ್ಶೆ)ಗೆ ಸಂಬಂಧಿಸಿದವು. ಗ್ರಾಫಿಕ್ ಪ್ರಿಂಟ್ ಮೇಕಿಂಗ್‌ನಲ್ಲಿ ಕಲಾವಿದ ಸಿ.ಚಂದ್ರಶೇಖರ್ ಅವರದು ಬಹುದೊಡ್ಡ ಹೆಸರು.

ಪ್ರಿಂಟ್‌ಮೇಕಿಂಗ್ ಜೊತೆಯಲ್ಲಿ ಚಿತ್ರಕಲೆ ಹಾಗೂ ಶಿಲ್ಪಕಲೆಯಲ್ಲಿಯೂ ತಮ್ಮದೇ ಛಾಪು ಮೂಡಿಸಿದ್ದಾರೆ. ಇವರ ಸೃಜನಶೀಲ ಮನಸ್ಸು ಈ ಮೂರು ವಿಭಾಗದಲ್ಲೂ ಅನೇಕ ಪ್ರಯೋಗಗಳನ್ನು ಮಾಡಿ ಯಶಸ್ವಿಯಾಗಿದೆ. ಕಲೆಯಲ್ಲಿ ಹೊಸತನ ಕಂಡುಕೊಂಡಿದ್ದಾರೆ.

ಅರ್ಥಕ್ಕಿಂತ ಅನುಭವದ ಭಾವ ನಮ್ಮ ಜೀವಿತದ ಕೊನೆವರೆಗೂ ಇರುತ್ತದೆ ಎಂಬುದು ಇವರ ಕಲಾಕೃತಿಗಳ ಸಂದೇಶ. ನಮ್ಮಳಗಿನ ಮನಸ್ಸನ್ನು ನಿತ್ಯ ಒರೆಗೆ ಹಚ್ಚಬೇಕು; ಮೌಲ್ಯಮಾಪನ ಮಾಡಿಕೊಳ್ಳಬೇಕು.

ಕೆಲವರಿಗೆ ಅರ್ಥವಾಗಿ ಕಾಣಿಸಿದ್ದು ಮತ್ತೆ ಕೆಲವರಿಗೆ ಶೂನ್ಯವಾಗಿ ಕಾಣಿಸುತ್ತದೆ. ಮತ್ತೆ ಕೆಲವರಿಗೆ ಶೂನ್ಯವಾಗಿ ಕಾಣಿಸಿದ್ದರಲ್ಲಿ ಬೇರೆಯವರಿಗೆ ಜೀವನಸಾರದ ಎಲ್ಲ ಹೊಳವುಗಳು ಕಾಣಿಸಬಹುದು.

ಮನುಷ್ಯನ ಮನಸ್ಸಿನೊಳಗೆ ಇಂತಹ ಹೊಳವುಗಳು ಹುಟ್ಟಿಕೊಂಡಾಗ ಮಾತ್ರ ಎಲ್ಲ ಪ್ರಶ್ನೆಗಳಿಗೂ ಉತ್ತರ ಸಿಗುತ್ತದೆ. ಆಗ ಜೀವನ ನೆಮ್ಮದಿಯ ಹಾದಿ ಹಿಡಿಯುತ್ತದೆ. ಈ ಕಲಾವಿದನ ಎಲ್ಲ ಕಲಾಕೃತಿಗಳು ಇದೇ ತತ್ವವನ್ನು ಸ್ಛುರಿಸುತ್ತದೆ.

ಇವರ ಆತ್ಮಾವಲೋಕನದ ಮೂಸೆಯೊಳಗಿಂದ ಸೃಜಿಸಿದ ಕಲಾಕೃತಿಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶನಗೊಂಡು ಅಪಾರ ಮೆಚ್ಚುಗೆ ಗಳಿಸಿವೆ. ಇಂತಹ ಅಪರೂಪದ ಕಲಾಕೃತಿಗಳನ್ನು ಒಳಗೊಂಡಿರುವ `ಸಂಚಲನ~ ಅವರ ಭವ್ಯ ಕಲಾಕೃತಿಗಳನ್ನು ಅನಾವರಣಗೊಳಿಸಿದೆ.

ಸ್ಥಳ: ಚಿತ್ರಕಲಾ ಪರಿಷತ್, ಕುಮಾರಕೃಪಾ ರಸ್ತೆ. ಪ್ರದರ್ಶನ ಶನಿವಾರದ ವರೆಗೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT