ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮಾನ್ಯರಿಗೆ ಅರ್ಥವಾಗುವ ಕೃತಿ ರಚಿಸಿ

Last Updated 1 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

ಪೀಣ್ಯ ದಾಸರಹಳ್ಳಿ: `ಲೇಖಕರು ಯಾವುದೇ ವಿಷಯವನ್ನು ಆಯ್ಕೆ ಮಾಡಿಕೊಂಡು ಕೃತಿಗಳನ್ನು ರಚಿಸುವಾಗ ಸಾಮಾನ್ಯ ಜನ ಓದಿ ಅರ್ಥ ಮಾಡಿಕೊಂಡು ವಿಷಯ ಅರಿಯುವಂತಿರಬೇಕು~ ಎಂದು ವಿಧಾನ ಪರಿಷತ್ ಸದಸ್ಯ ರಾಮಚಂದ್ರಗೌಡ ಅಭಿಪ್ರಾಯಪಟ್ಟರು.

ಟಿ. ದಾಸರಹಳ್ಳಿ ವ್ಯಾಪ್ತಿಯ ಬಾಗಲಗುಂಟೆಯ ಮಹಾಲಕ್ಷ್ಮೀ ಕನ್ವೆನ್ಷನ್ ಹಾಲ್‌ನಲ್ಲಿ ನಡೆದ ಸಮಾರಂಭದಲ್ಲಿ ಚಿತ್ರಲಿಂಗೇಶ್ವರ ಪ್ರಕಾಶನ ಹೊರ ತಂದಿರುವ `ನೊಂದ ಜೀವಗಳು~ ಕಥಾ ಸಂಕಲನ, ಗದ್ದುಗೆ ಮತ್ತು ಮನಸ್ಸು ಕವನ ಸಂಕಲನಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

ಲೇಖಕ ಪ್ರಸನ್ನಕುಮಾರ್ ಶೋಷಣೆಗೆ ಒಳಪಟ್ಟ ಸಾಮಾನ್ಯ ಜನರ ನೊಂದ ಬದುಕನ್ನು ಕಣ್ಣಿಗೆ ಕಟ್ಟುವಂತೆ ಕೃತಿಯಲ್ಲಿ ಬಿಂಬಿಸುವ ಮೂಲಕ ತಮ್ಮ ಸಾಮಾಜಿಕ ಕಳಿಕಳಿಯನ್ನು ಎತ್ತಿಹಿಡಿದಿದ್ದಾರೆ ಎಂದು ಅವರು ಮೆಚ್ಚುಗೆಯ ಮಾತುಗಳನ್ನಾಡಿದರು.

ನಿವೃತ್ತ ಶಿಕ್ಷಕ ಬೊಮ್ಮಲಿಂಗಯ್ಯ, ಅನಿಕೇತನ ಕನ್ನಡ ಬಳಗದ ಅಧ್ಯಕ್ಷ ಮಾಯಣ್ಣ, ಕಲಾ ಛಾವಡಿ ಟ್ರಸ್ಟ್ ಅಧ್ಯಕ್ಷ ಬಿ.ಎನ್.ಗೋವಿಂದರಾಜು, ಪಾಲಿಕೆ ಸದಸ್ಯ ಕೆ.ಸಿ.ವೆಂಕಟೇಶ್, ದಾಸರಹಳ್ಳಿ ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷ ಕೆ.ಜಿ.ಕುಮಾರ್, ಲೇಖಕ ಪ್ರಸನ್ನ ಕುಮಾರ್ ಮುಖಂಡರಾದ ಶಿವಕುಮಾರ್, ದಯಾನಂದ್, ಬಿ.ಟಿ.ಶ್ರೀನಿವಾಸ್, ನವೀನ್ ಕುಮಾರ್, ಎಚ್.ವಿ.ಬಾಬು, ಸುರಕ್ಷಾ ಮಂಜು, ಕರುನಾಡ ಕಿಶೋರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT