ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮೂಹಿಕ ಅತ್ಯಾಚಾರ: ರಾಷ್ಟ್ರಪತಿ ಭವನದ ಬಳಿ ಪ್ರತಿಭಟನೆ

Last Updated 21 ಡಿಸೆಂಬರ್ 2012, 10:56 IST
ಅಕ್ಷರ ಗಾತ್ರ

ನವದೆಹಲಿ (ಐಎಎನ್ಎಸ್): ಚಲಿಸುತ್ತಿದ್ದ ಬಸ್ಸಿನಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿರುವ 23ರ ಹರೆಯದ ಅರೆ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ನಡೆದ ದಾಳಿಯಲ್ಲಿ ಷಾಮೀಲಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ನೂರಾರು ಮಂದಿ ಮಹಿಳೆಯರು ಮತ್ತು ವಿದ್ಯಾರ್ಥಿಗಳು ಶುಕ್ರವಾರ ಕೇಂದ್ರ ದೆಹಲಿಯ ರೈಸೀನಾ ಹಿಲ್ಸ್ ನಲ್ಲಿ ಇರುವ ರಾಷ್ಟ್ರಪತಿ ಭವನದೆಡೆಗೆ ಮೆರವಣಿಗೆ ನಡೆಸಿದರು.

 
ಈ ಹಠಾತ್ ಘಟನೆಯಿಂದ ಬಿಗಿ ಭದ್ರತೆಯುಳ್ಳ ರಾಷ್ಟ್ರಪತಿ ಭವನದ ಹೊರಭಾಗದಲ್ಲಿದ್ದ ಪೊಲೀಸರು ಆಶ್ಚರ್ಯ ಚಕಿತರಾದರು.
 
''ನಮಗೆ ನ್ಯಾಯಬೇಕು' ಎಂಬುದಾಗಿ ಘೋಷಣೆ ಕೂಗುತ್ತಿದ್ದ ಪ್ರತಿಭಟನಕಾರರು ರಾಷ್ಟ್ರಪತಿ ಭವನದ ದ್ವಾರವನ್ನು ತಲುಪಿ ರಾಷ್ಟ್ರಪತಿ ಭವನದ ಹಿರಿಯ ಅಧಿಕಾರಿಯೊಬ್ಬರ ವಾಹನ ತಡೆಯಲು ಯತ್ನಿಸಿ, ತಮಗೆ ಒಳಕ್ಕೆ ಪ್ರವೇಶ ನೀಡುವಂತೆ ಒತ್ತಾಯಿಸಿದರು.
 
ಪ್ರತಿಭಟನಕಾರರ ಗುಂಪು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರ ಅಧಿಕೃತ ನಿವಾಸ ಬಳಿಗೆ ಸಾಗಲು ಯತ್ನಿಸಿತು. ಆದರೆ ಇಂಡಿಯಾ ಗೇಟ್ ಬಳಿ ಪ್ರತಿಭಟನಕಾರರನ್ನು ಬೇರೆಡೆಗೆ ತಿರುಗಿಸಿಲಾಯಿತು.
'ಅವರು ಕೊಟ್ಟದ್ದು ಭರವಸೆ ಮಾತ್ರ. ಏನೂ ಕ್ರಮ ಕೈಗೊಳ್ಳಲಾಗಿಲ್ಲ' ಎಂದು ಪ್ರತಿಭಟನಕಾರರಲ್ಲಿ ಒಬ್ಬರಾದ ಕಂಚನ್ ದೂರಿದರು.
 
ದಕ್ಷಿಣ ದೆಹಲಿಯಲ್ಲಿ ಗೆಳೆಯನೊಂದಿಗೆ ಚಲನಚಿತ್ರ ನೋಡಿ ವಾಪಸಾಗುತ್ತಿದ್ದ ಯುವತಿಯ ಮೇಲೆ ಭಾನುವಾರ ರಾತ್ರಿ ಖಾಸಗಿ ಬಸ್ಸಿನಲ್ಲಿ ಈ ಅತ್ಯಾಚಾರ ನಡೆದಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT