ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮೂಹಿಕ ಅತ್ಯಾಚಾರ: ವಿಳಂಬ ಆರೋಪಕ್ಕೆ ದೆಹಲಿ ಪೊಲೀಸ್ ನಕಾರ

Last Updated 5 ಜನವರಿ 2013, 10:47 IST
ಅಕ್ಷರ ಗಾತ್ರ

ನವದೆಹಲಿ (ಐಎಎನ್ಎಸ್): ಪೊಲೀಸರು ವ್ಯಾಪ್ತಿ ಕುರಿತು ಜಗಳಾಡುತ್ತಾ ಜೀವ ಉಳಿಸಬಹುದಾಗಿದ್ದ ಅಮೂಲ್ಯ ಸಮಯವನ್ನು ಹಾಳುಮಾಡಿದರು ಎಂಬುದಾಗಿ ಡಿಸೆಂಬರ್ 16ರಂದು ಸಾಮೂಹಿಕ ಅತ್ಯಾಚಾರಕ್ಕೆ ಬಲಿಯಾದ ವಿದ್ಯಾರ್ಥಿನಿಯ ಗೆಳೆಯ ಶುಕ್ರವಾರ ಮಾಡಿದ ಆಪಾದನೆಗಳನ್ನು  ದೆಹಲಿ ಪೊಲೀಸರು ಶನಿವಾರ ಅಲ್ಲಗಳೆದಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಸಂಕ್ಷಿಪ್ತ ವಿವರಣೆ ನೀಡಿದ ದೆಹಲಿ ಪೊಲೀಸರು ರಾತ್ರಿ 10.22ಕ್ಕೆ ಮಹಿಳೆಯೊಬ್ಬರು ಸೇರಿದಂತೆ ಇಬ್ಬರು ರಸ್ತೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದಾರೆ ಎಂಬ ಮೊದಲ ಕರೆ ಪೊಲೀಸ್ ನಿಯಂತ್ರಣ ಕೊಠಡಿಗೆ ಬಂತು. ಎರಡು ರಕ್ಷಣಾ ವಾಹನಗಳು ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕೆ ತಲುಪಿದವು. ಆಪತ್ತಿನ ಮೊದಲ ಕರೆ ಬಂದ 33 ನಿಮಿಷಗಳಲ್ಲಿ ತೊಂದರೆಗೆ ಈಡಾಗಿದ್ದವರನ್ನು ಆಸ್ಪತ್ರೆಗೆ ಒಯ್ಯಲಾಯಿತು ಎಂದು ಹೇಳಿದ್ದಾರೆ.

'ಪೊಲೀಸ್ ನಿಯಂತ್ರಣ ಕೊಠಡಿಗೆ ಆಪತ್ತಿನ ಮೊದಲ ಕರೆ ಬಂದದ್ದು ರಾತ್ರಿ 10.22.20ಕ್ಕೆ. ಪೊಲೀಸ್ ನಿಯಂತ್ರಣ ಕೊಠಡಿಯ ರಕ್ಷಣಾ ವಾಹನಗಳು ಮತ್ತು ಝಡ್-54 ವಾಹನವನ್ನು ತತ್ ಕ್ಷಣವೇ ಸ್ಥಳಕ್ಕೆ ಕಳುಹಿಸಲಾಯಿತು' ಎಂದು ದೆಹಲಿ ಪೊಲೀಸರು ಬಿಡುಗಡೆ ಮಾಡಿದ ಹೇಳಿಕೆ ತಿಳಿಸಿದೆ.

ಈ ಮಧ್ಯೆ ಪೊಲೀಸ್ ನಿಯಂತ್ರಣ ಕೊಠಡಿಯ ವಾಹನ ಇ-42, ನಾಲ್ಕೇ ನಿಮಿಷಗಳಲ್ಲಿ 10.26ಕ್ಕೆ  ಸ್ವತಃ ಸ್ಥಳಕ್ಕೆ ಧಾವಿಸಿ ಬಂದಿತ್ತು. ಝಡ್-54 ವಾಹನವು 10.28ಕ್ಕೆ ಅಂದರೆ ಕರೆಬಂದ  5.5 ನಿಮಿಷಗಳ ಒಳಗಾಗಿ ಸ್ಥಳ ತಲುಪಿತು. ಈ ವಾಹನ ಆಪತ್ತಿಗೆ ಒಳಗಾದವರನ್ನು ಹೊತ್ತುಕೊಂಡು 10.31ಕ್ಕೆ ಅಂದರೆ ಮೂರು ನಿಮಿಷಗಳ ಒಳಗಾಗಿ ಘಟನಾ ಸ್ಥಳ ಬಿಟ್ಟಿತು. ಅದು ಸಫ್ದರ್ ಜಂಗ್ ಆಸ್ಪತ್ರೆಯನ್ನು 24 ನಿಮಿಷಗಳ ಒಳಗಾಗಿ ಅಂದರೆ 10.55ಕ್ಕೆ ತಲುಪಿತು. ಈ ಎಲ್ಲ ದಾಖಲೆಗಳನ್ನೂ ಜಿಪಿಎಸ್ (ಗ್ಲೋಬಲ್ ಪೊಸಿಷನಿಂಗ್ ಸಿಸ್ಟಂ) ಆಧರಿಸಿ ಸಂಗ್ರಹಿಸಲಾಗಿದೆ' ಎಂದೂ ಹೇಳಿಕೆ ತಿಳಿಸಿದೆ.

ಸಾಮೂಹಿಕ ಅತ್ಯಾಚಾರ  ನಡೆದ ಡಿಸೆಂಬರ್ 16ರ ಘಟನೆ  ಬಳಿಕ ಶುಕ್ರವಾರ ಇದೇ ಮೊದಲ ಬಾರಿಗೆ ತನ್ನ ಮೌನ ಮುರಿದ ವಿದ್ಯಾರ್ಥಿನಿಯ ಗೆಳೆಯ ತಾನು ಗೆಳತಿಯನ್ನು ರಕ್ಷಿಸಬಯಸಿದ್ದೆ ಎಂದು ಹೇಳಿದ್ದು, ಮೂರು ನಿಯಂತ್ರಣ ಕೊಠಡಿಯ ವಾಹನಗಳು ವ್ಯಾಪ್ತಿ ಬಗ್ಗೆ ಜಗಳಾಡುತ್ತಾ ಆಸ್ಪತ್ರೆಗೆ ಒಯ್ಯುವಲ್ಲಿ ಎರಡು ಗಂಟೆ ಕಾಲ ವಿಳಂಬ ಮಾಡಿದವು ಎಂದು ಆಪಾದಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT