ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರಸ್ವತ ಲೋಕದ ಹೆಮ್ಮೆಯ ಗರಿ ಕುವೆಂಪು

Last Updated 2 ಜನವರಿ 2012, 10:05 IST
ಅಕ್ಷರ ಗಾತ್ರ

ಮೈಸೂರು:  `ಕನ್ನಡ ಸಾರಸ್ವತ ಲೋಕಕ್ಕೆ ಶ್ರೇಷ್ಠ ಅಪ್ರತಿಮ ಕೃತಿಗಳನ್ನು ನೀಡಿ ಅದರ ಹೆಮ್ಮೆಯ ಗರಿಯಂತಿರುವ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ರಾಷ್ಟ್ರಕವಿ ಕುವೆಂಪು ಅವರನ್ನು ಸ್ಮರಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ. ಕನ್ನಡ ವಿದ್ಯಾರ್ಥಿ ಗಳಾದ ನಾವು ಅವರ ಕೃತಿಗಳನ್ನು ಓದುವ ಮೂಲಕ , ವಿಮರ್ಶಿಸುವ ಮೂಲಕ ಅವರ ಕೃತಿಗಳಲ್ಲಿನ ರಸಾನುಭವವನ್ನು ಅನುಭವಿಸುವ ಮೂಲಕ ಅವರಿಗೆ ನಮನ ಸಲ್ಲಿಸಬೇಕು~ ಎಂದು ಪ್ರಾಂಶುಪಾಲರಾದ ಪ್ರೊ. ವೈ.ಎಸ್.ಗೌರಮ್ಮ ತಿಳಿಸಿದರು.

ಮೈಸೂರು ವಿಶ್ವವಿದ್ಯಾನಿಲಯದ ಸಂಜೆ ಕಾಲೇಜಿನ ಕನ್ನಡ ವಿಭಾಗದ ವತಿಯಿಂದ ಗುರುವಾರ ನಡೆದ ರಾಷ್ಟ್ರಕವಿ ಕುವೆಂಪು ಅವರ 107ನೇ ಜಯಂತ್ಯುತ್ಸವ ಹಾಗೂ ವಿಶ್ವಮಾನವ ದಿನಾಚರಣೆ ಕಾರ್ಯಕ್ರಮ ವನ್ನು ಉದ್ಘಾಟಿಸಿ  ಮಾತನಾಡಿದ ಅವರು `ಕುವೆಂಪು ಅವರ ವೈಚಾರಿಕ ಮನೋಭಾವವನ್ನು, ಪಾರಂಪರಿಕ ತತ್ವಗ್ರಹಿಕೆಯನ್ನು, ವಿಮರ್ಶಾತ್ಮಕ ಗುಣವನ್ನು, ಕೃತಿಗಳ ಮೂಲಕ ಆಸ್ವಾದಿಸುವುದು ನಮ್ಮ ಗುರಿಯಾಗ ಬೇಕು~ ಎಂದು ಹೇಳಿದರು.

ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ಡಿ.ವಿಜಯಲಕ್ಷ್ಮಿ ಕುವೆಂಪು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ `ಮಹಾಕವಿ ಕುವೆಂಪು ತಮ್ಮ ಕವಿತೆಗಳ ಮೂಲಕ ಪ್ರೀತಿ, ಸ್ನೇಹ, ವಿಶ್ವಾಸವನ್ನು ಮಾನವ ಹೃದಯಗಳಲ್ಲಿ ಬಿತ್ತುವಂತಹ ಕೃಷಿ ಮಾಡಿದ್ದಾರೆ ಹಾಗೂ `ವಿಶ್ವಮಾನವ ಪ್ರಜ್ಞೆ~ ಎಲ್ಲೆಡೆ ಹಬ್ಬಲು ತಮ್ಮದೇ ರೀತಿಯಲ್ಲಿ ಮಾನವತೆಯ ದೀಕ್ಷೆಗೆ ಒತ್ತು ನೀಡಿದ್ದಾರೆ~ ಎಂದರು.

ಅಧ್ಯಾಪಕ ಡಾ.ಷಹಸೀನ ಬೇಗಂ ಮಾತನಾಡಿ, `ಕುವೆಂಪು ಜಗತ್ತಿನ ಅಭೂತಪೂರ್ವ ವಿಶಿಷ್ಟ ಕವಿ ಎಂಬುದು ಕನ್ನಡಿಗರ, ಭಾರತೀಯರ ಹೆಮ್ಮೆಯ ಸಂಗತಿ~ ಎಂದು ತಿಳಿಸಿದರು.

ಕುವೆಂಪು ಜಯಂತಿ ಅಂಗವಾಗಿ ಕಾಲೇಜು ಮುಂಭಾಗದ ಪಾರ್ಕಿನಲ್ಲಿ ಪ್ರಾಧ್ಯಾಪಕ ಡಾ.ಟಿ. ಕೃಷ್ಣೇಗೌಡ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಡಾ.ಸಿ.ಡಿ.ಪರಶು ರಾಮ, ಆನಂದಕುಮಾರ್, ಡಿ.ಕೆ.ಮಂಜುನಾಥ್, ಅಧೀಕ್ಷಕ ರಾದ ಎಸ್.ಸಂಪತ್, ರೂಪೇಶ್ ಎಂ.ಸಿ, ಅಶ್ವಿನಿ ವಿ., ಯೋಗೇಶ್, ನ.ಮಹದೇವು, ಕೃಷ್ಣ, ಕುಮಾರ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.  ಮಲ್ಲಿಕಾರ್ಜುನ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT