ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರಾಯಿ ಅಂಗಡಿ ಮುಚ್ಚುವಂತೆ ಒತ್ತಾಯ

Last Updated 18 ನವೆಂಬರ್ 2011, 5:30 IST
ಅಕ್ಷರ ಗಾತ್ರ

ಗದಗ: ನಿತ್ಯ ಗ್ರಾಮದಲ್ಲಿ ಕುಡುಕರ ಹಾವಳಿಯಿಂದ ಶಾಂತಿ ಭಗ್ನವಾಗುತ್ತಿದೆ ಎಂದು ಆರೋಪಿಸಿ ತಾಲ್ಲೂಕಿನ ಲಕ್ಕುಂಡಿಯಲ್ಲಿ ಮಹಿಳೆಯರು ಹಾಗೂ ಗ್ರಾಮಸ್ಥರು ಗುರುವಾರ ಸಾರಾಯಿ ಅಂಗಡಿ ಬಂದ್ ಮಾಡಿಸಿ ಪ್ರತಿಭಟನೆ ನಡೆಸಿದರು.

ಹಲವಾರು ದಿನಗಳಿಂದ ಬಸ್ ನಿಲ್ದಾಣ ಸೇರಿದಂತೆ ಇತರೆ ಸಾರ್ವಜನಿಕ ಸ್ಥಳಗಳಲ್ಲಿ ಕೆಲ ಜನರು ಕುಡಿದು ಅಶ್ಲೀಲ ಶಬ್ದಗಳಿಂದ ಕೂಗಾ ಡುತ್ತ ದಾರಿ ಹೋಕರಿಗೆ ತುಂಬಾ ತೊಂದರೆ ಕೊಡುತ್ತಿದ್ದಾರೆ. ಇದರಿಂದ ಗ್ರಾಮದಲ್ಲಿ ಶಾಂತಿ ಇಲ್ಲದಂತಾಗಿದೆ ಎಂದು ಪ್ರತಿಭಟನಾನಿರತ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು.

ಕುಡಕರ ಅಶ್ಲೀಲ ವರ್ತನೆ, ಅವಾಚ್ಯ ಶಬ್ದಗಳಿಂದ ಗ್ರಾಮದಲ್ಲಿ ಮಹಿಳೆಯರು ಮಕ್ಕಳು ಭಯಭೀತರಾಗಿದ್ದಾರೆ. ರಾತ್ರಿ ವೇಳೆ ಕುಡಿದು ಕೂಗಾಡುವುದರಿಂದ  ಶಾಂತಿಯನ್ನು ಕದಡುತ್ತಿ ್ದದಾರೆ ಎಂದು ಮಹಿಳೆಯರು ಅಳಲು ತೋಡಿ ಕೊಂಡು ಮದ್ಯದಂಗಡಿಗಳನ್ನು ಬಂದ್ ಮಾಡಿಸುವಂತೆ ಒತ್ತಾಯಿಸಿದರು.

ಗ್ರಾಮದಲ್ಲಿ ಈಗಾಗಲೇ ಒಂದು ಬಾರ್ ಅಂಗಡಿ ಇದೆ. ಅದರ ಹತ್ತಿರವೇ ಇನ್ನೂಂದು ಸಾರಾಯಿ ಅಂಗಡಿಗೆ ಸರ್ಕಾರ ಅನುಮತಿ ನೀಡಿದೆ ಅದು ಗುರುವಾರ ಆರಂಭಗೊಳ್ಳುತ್ತಿದಂತೆ ಅಕ್ರೋಶಗೊಂಡ ಕಲ್ಮೇಶ್ವರ ನಗರದ ಮಹಿಳೆಯರು ಹಾಗೂ ಗ್ರಾಮ ಪಂಚಾಯತಿ ಸದಸ್ಯರು, ಗ್ರಾಮಸ್ಥರು ಅಂಗಡಿ ಮುಂದೆ ಪ್ರತಿಭಟನೆ ನಡೆಸಿ, ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲ ಘಂಟೆಗಳ ಕಾಲ ರಸ್ತೆ ತಡೆ ನಡೆಸಿದರು. ಟೈರ್‌ಗೆ ಬೆಂಕಿ ಹಚ್ಚಿದರು.

ಮದ್ಯದ ಅಂಗಡಿಗೆ ಅನುಮತಿ ನೀಡಿದ ಜಿಲ್ಲಾಡ ಳಿತದ ವಿರುದ್ಧ ಘೋಷಣೆ ಕೂಗಿದರು. ಕೂಡಲೇ ಗ್ರಾಮದಲ್ಲಿನ ಬಾರ್ ಅಂಗಡಿಗಳನ್ನು ಮುಚ್ಚ ಬೇಕು. ಮುಂದೆ ಯಾವದೇ ಬಾರ್ ಅಂಗಡಿಗೆ ಸರ್ಕಾರ ಅನುಮತಿ ನೀಡಬಾರದು. ಎಂದು ಪ್ರತಿಭಟನಕಾರರು ಆಗ್ರಹಿಸಿದರು. 

ಅನಧಿಕೃತ ಮದ್ಯ ಮಾರಾಟ: ಗ್ರಾಮದ ಕೆಲ ಖಾನಾವಳಿ, ಹೋಟೆಲ್‌ಗಳಲ್ಲಿ ಅನಧಿಕೃತವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ. ಇದ ರಿಂದಾಗಿ ಗ್ರಾಮದ ತುಂಬೆಲ್ಲ ಕುಡಕರ ಸಂಖ್ಯೆ ಹೆಚ್ಚಾಗಿದೆ. ಈ ಬಗ್ಗೆ ಕ್ರಮ ತೆಗೆದುಕೊಳ್ಳದೆ ಪೊಲೀಸ ಇಲಾಖೆ ಮೌನವಾಗಿರುವುದು ಖಂಡನೀಯ ಎಂದು ಪ್ರತಿಭಟನಾಕರರು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಅಬಕಾರಿ ಇಲಾಖೆ ಅಧಿಕಾರಿ ಡಿ.ಸಿ ಪಾಟೀಲ, ಬಾರ್ ಅಂಗಡಿಯನ್ನು ತೆರೆಯಲು ಗ್ರಾಮಸ್ಥರ ವಿರೋಧವಿದ್ದಲ್ಲಿ ಬಾರ್ ಅಂಗಡಿಯ ಅನುಮತಿಯನ್ನು ರದ್ದುಪಡಿಸಲಾಗುವುದು ಎಂದರು.

ಪ್ರತಿಭಟನೆಯಲ್ಲಿ ಅಂಬ್ರಪ್ಪ ಕರೆಕಲ್, ಗ್ರಾಮ ಪಂಚಾಯತಿ ಸದಸ್ಯರಾದ ರುದ್ರಪ್ಪ ಮುಸ್ಕಿನ ಬಾವಿ, ಪ್ರಕಾಶ ಅರಹುಣಸಿ, ಬಸವರಾಜ ಮೂಲಿ ಮನಿ, ಕುಬೇರಪ್ಪ ಬಡೀಗೇರ, ಕೆ.ಎಸ್. ಪೂಜಾರ, ಬಸನಗೌಡ ಬಿರಾದಾರ, ಶಂಕ್ರಪ್ಪ ರ‌್ಯಾವಣಕಿ, ಅಶೋಕ ಮೇಟಿ, ಕೃಷ್ಣ ಹಡಗಲಿ, ಶರಣಪ್ಪ ಉದ್ದಾರ, ಎಂ.ಎಂ. ಹುಬ್ಬಳ್ಳಿ, ಗುರುರಾಜ ಬೆಂತೂರ, ಸುರೇಶ ಬಣವಿ, ಶೇಖಪ್ಪ ಗುಂಡಳ್ಳಿ, ದತ್ತಣ್ಣ ಜೋಶಿ, ಬಸನಗೌಡ ಗುಡಸಲಮನಿ, ಮಂಜು ಹಾಲಿನವರ, ರಾಮಣ್ಣ ಹೊಸಮನಿ, ಇಮಾಂಬಿ ನಧಾಫ್, ನಾಗರತ್ನಾ ಜೋಶಿ, ನಾಗಮ್ಮ ಹಾಲಿನವರ, ನೀಲಮ್ಮ ಬೇಲೇರಿ, ಬಸಮ್ಮ ಬಣವಿ, ಗಾಯತ್ರಿ ಹೊರಕೇರಿ ಮತ್ತಿತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT