ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರಿಗೆ ಸೌಲಭ್ಯ ಒದಗಿಸಲು ಗ್ರಾಮಸ್ಥರ ಆಗ್ರಹ

Last Updated 6 ಜುಲೈ 2012, 6:00 IST
ಅಕ್ಷರ ಗಾತ್ರ

ತಾಳಿಕೋಟೆ:  ಹುಣಿಸಿಗಿ ಗ್ರಾಮ ರಾಜ್ಯ ಹೆದ್ದಾರಿಯಲ್ಲಿದ್ದರೂ  ಹೆಚ್ಚಿನ ಬಸ್‌ಸೌಲಭ್ಯವಿಲ್ಲದ್ದರಿಂದ ಶಾಲೆಗೆ ಹೋಗುವ ಮಕ್ಕಳು   ತೊಂದರೆ ಅನುಭವಿಸಬೇಕಾಗಿದೆ.  ಶಾಲಾ ಸಮಯಯಕ್ಕೆ ಅನುಗುಣವಾಗಿ ಬಸ್ ಸೌಲಭ್ಯ ಒದಗಿಸುವಂತೆ ಮೈಲೇಶ್ವರ  ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಬೆಳಗಿನ ಅವಧಿಯಲ್ಲಿ ಇಲಕಲ್ಲ ಶಹಾಪುರ ಬಸ್ ಮಾತ್ರ ಇದ್ದು ಅದು ಅಲ್ಲಿಂದ ಬರುವಾಗಲೇ ಪ್ರಯಾಣಿಕರನ್ನು ತುಂಬಿಕೊಂಡು ಬರುವುದರಿಂದ ನಿಲುಗಡೆಯಾಗದೇ ಹೋಗುತ್ತಿದೆ. ಬಸ್‌ನ ಅನಾನುಕೂಲದಿಂದ ನಿತ್ಯ ಬಂಡೆಪ್ಪನ ಸಾಲವಾಡಗಿ ಸರ್ಕಾರಿ ಪ್ರೌಢಶಾಲೆಗೆ ಹೋಗುವ 50ಕ್ಕೂ ಅಧಿಕ ಮಕ್ಕಳು ನಿತ್ಯ ಪರದಾಡುವಂತಾಗಿದೆ.

ಈ  ಹಿಂದೆ ಕರೆಯಲಾಗಿದ್ದ    ಜನಸಂಪರ್ಕ ಸಭೆಯಲ್ಲಿ ಬಸ್‌ನ ಅನಾನುಕೂಲತೆ ಬಗ್ಗೆ ಮನವಿ ಸಲ್ಲಿಸಿದಾಗ ಕೆಲದಿನಗಳ ಕಾಲ ತಾಳಿಕೋಟೆ ಬಸ್ ಡಿಪೊದಿಂದ ಬಸ್‌ನ್ನು ಬಿಡಲಾಗಿತ್ತು. ಈಗ ಮತ್ತೆ ಬಸ್ ಬಂದಾಗಿದ್ದು ಮಕ್ಕಳಿಗೆ ಶೈಕ್ಷಣಿಕವಾಗಿ ಪ್ರಗತಿಗೆ ತೊಂದರೆಯಾಗುತ್ತಿದೆ. ಕಾರಣ ಪ್ರತಿ ದಿನ ಬೆ.9 ರಿಂದ 10 ಅವಧಿಯಲ್ಲಿ ಬ.ಸಾಲವಾಡಗಿ ಮಾರ್ಗದಲ್ಲಿ ಹೋಗುವಂತೆ ಹಾಗೂ ಸಂಜೆ 4.30 ರಿಂದ 5.30ರ ಅವಧಿಯಲ್ಲಿ ಮರಳಿ ಬರುವಂತೆ ಬಸ್‌ನ್ನು ಬಿಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಗ್ರಾಮಸ್ಥರ ಮನವಿಗೆ ತಕ್ಷಣ ಸ್ಪಂದಿಸದಿದ್ದಲ್ಲಿ    ಸತ್ಯಾಗ್ರಹ ನಡೆಸಲಾಗುವುದು  ಎಂದು ಗ್ರಾಮದ  ಗ್ರಾ.ಪಂ ಸದಸ್ಯ ಆರ್.ಎಸ್.ಕುಳಗೇರಿ, ಎಸ್‌ಡಿಎಮ್‌ಸಿ ಅದ್ಯಕ್ಷ ಮಲ್ಲಣ್ಣ ಕಲಬುರ್ಗಿ, ಸದಸ್ಯರಾದ ಶಿವಶಂಕರ ಕಟ್ಟಿಮನಿ, ಸುಭಾಸ ಮುಗಳಿ, ಈರಣ್ಣ ಬೂದಿಹಾಳ,  ಸಿದ್ರಾಮಪ್ಪ ಚೌದ್ರಿ ಎಚ್ಚರಿಸಿದ್ದಾರೆ.

ಕಾರ್ಯಾಗಾರ ಇಂದು
ತಾಳಿಕೋಟೆ: ಸಮೀಪದ ಮಿಣಜಗಿಯ ಸಿದ್ಧಲಿಂಗೇಶ್ವರ ವಿಶ್ವಭಾರತಿ ವಿದ್ಯಾಮಂದಿರದಲ್ಲಿ  ಇದೇ 6 ಮತ್ತು 7ರಂದು ಎರಡು ದಿನಗಳ ಕಾಲ ವಿದ್ಯಾಭಾರತಿ ವಿಜಾಪುರ ಜಿಲ್ಲೆಯ ಶಿಕ್ಷಕರ ಪ್ರವರ್ಗಗಳ ಕಾರ್ಯಾಗಾರ ಜರುಗಲಿದೆ. ಮೊದಲ ದಿನ ಬೆಳಿಗ್ಗೆ 10.30ಕ್ಕೆ ಕಾರ್ಯಕ್ರಮವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎಲ್.ಭಜಂತ್ರಿ ಉದ್ಘಾಟಿ ಸುವರು. ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಜಿ.ಜಿ. ಯರನಾಳ ವಹಿಸುವರು. 

ಅತಿಥಿಗಳಾಗಿ ದೈಹಿಕ ಶಿಕ್ಷಣಾಧಿಕಾರಿ ಎಸ್.ಬಿ.ಚಲವಾದಿ, ಶಿಕ್ಷಣ ಸಂಯೋಜಕ ಎಸ್.ಎಸ್.ಗಡೇದ, ಸಿಆರ್‌ಪಿ. ಎಸ್.ಎಸ್. ಯಾಳವಾರ ಸಂಸ್ಥೆಯ ಉಪಾಧ್ಯಕ್ಷ ಜೆ.ಡಿ. ಪಾಟೀಲ, ಎಸ್.ಎಸ್.ಮ್ಯಾಗೇರಿ ಆಗಮಿಸುವರು. ಸಂಪನ್ಮೂಲ ಗುರು ಬಳಗವಾಗಿ ತಾಳಿಕೋಟೆಯ ನಿವೃತ್ತ ಉಪಪ್ರಾಂಶುಪಾಲ ಸಿ.ಆರ್.ಕಲಬುರ್ಗಿ, ಮಿಣಜಗಿ ಸರ್ಕಾರಿ ಪ್ರೌಢಶಾಲೆಯ ಸಹಶಿಕ್ಷಕರಾದ ಅಶೋಕ ಹಂಚಲಿ,  ಸುಮಂಗಲಾ ಕೋಳೂರ ಹಾಗೂ ಸುರೇಶ ನಾಯಕ, ಶ್ರಿಕಾಂತ ಪತ್ತಾರ,  ಬಸವರಾಜ ಚೋಕಾವಿ ಹಾಗೂ ಸಮೀರ ಹವಾಲ್ದಾರ ಭಾಗವಹಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT