ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲ ನೀಡಿಕೆ: ಶೇ 126 ಪ್ರಗತಿ

Last Updated 9 ಜೂನ್ 2011, 10:05 IST
ಅಕ್ಷರ ಗಾತ್ರ

ಉಡುಪಿ: ಜಿಲ್ಲೆಯ 2010-11ರ ಡಿಸೆಂಬರ್ ಅಂತ್ಯದಲ್ಲಿ ಜಿಲ್ಲೆಯ ಬ್ಯಾಂಕ್‌ಗಳು ರೂ.1841 ಕೋಟಿ ಸಾಲ ವಿತರಿಸುವ ಮೂಲಕ ಶೇ. 126 ಸಾಧನೆ ಮಾಡಿವೆ~ಎಂದು ಸಿಂಡಿಕೇಟ್ ಬ್ಯಾಂಕ್‌ನ ಉಪ ಮಹಾ ಪ್ರಬಂಧಕ ಜಿ.ಪಿ.ಕ್ರಿಸ್ಟೋಫರ್ ಜೀವರಾಜ್ ಇಲ್ಲಿ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಜರುಗಿದ ಜಿಲ್ಲಾ ಮಟ್ಟದ ಬ್ಯಾಂಕ್‌ಗಳ 3ನೇ ತ್ರೈಮಾಸಿಕ ಸಭೆಯಲ್ಲಿ ಬ್ಯಾಂಕ್‌ಗಳ ಪ್ರಗತಿಯ ಅಂಕಿ ಅಂಶಗಳನ್ನು ಅವರು ಪ್ರಸ್ತುತ ಪಡಿಸಿದ ಅವರು, `ಕಳೆದ ವಿತ್ತ ವರ್ಷದಲ್ಲಿ ಮೂರನೇ ತ್ರೈಮಾಸಿಕ ಅವಧಿ ಅಂತ್ಯಕ್ಕೆ ರೂ.1458 ಕೋಟಿ ಸಾಲ ವಿತರಣೆ ಗುರಿ ಹೊಂದಲಾಗಿತ್ತು. ಸಾಲ ವಿತರಣೆಯಲ್ಲಿ ನಿರೀಕ್ಷೆಗೂ ಮೀರಿದ ಪ್ರಗತಿ ಸಾಧಿಸಲಾಗಿದೆ~ ಎಂದರು.

`ಜ್ಲ್ಲಿಲೆಯ ಬ್ಯಾಂಕ್‌ಗಳು 2010ರ ಡಿಸೆಂಬರ್ ಅಂತ್ಯಕ್ಕೆ ರೂ 8062 ಕೋಟಿ ಠೇವಣಿಯನ್ನು ಹಾಗೂ ರೂ 3831 ಕೋಟಿ ಮುಂಗಡವನ್ನು ಹೊಂದಿವೆ. ಕೃಷಿ ಕ್ಷೇತ್ರಕ್ಕೆ ರೂ 957 ಕೋಟಿ ಸಾಲ ನೀಡಿದ್ದು, ಗುರಿಯ ಶೇ 317 ರಷ್ಟು ಪ್ರತಿ ಸಾಧಿಸಿರುವುದು ಶ್ಲಾಘನೀಯ~ ಎಂದರು.

`ಇದಲ್ಲದೇ ಕೈಗಾರಿಕಾ ರಂಗಕ್ಕೆ ರೂ188 ಕೋಟಿ ಸಾಲ ನೀಡಿದ್ದು, ಆದ್ಯತಾ ರಂಗಕ್ಕೆ ರೂ 1398 ಕೋಟಿ ಸಾಲ ವಿತರಣೆ ಮಾಡಿ ನಿಗದಿತ ಗುರಿಯ ಶೇ 129 ಸಾಧನೆ ಮಾಡಲಾಗಿದೆ. ಆದ್ಯೇತೆಯೇತರ ರಂಗಕ್ಕೂ ರೂ 443 ಕೋಟಿ ಸಾಲ ನೀಡಲಾಗಿದೆ~ ಎಂದರು.

`ಬ್ಯಾಂಕ್‌ಗಳು ದುರ್ಬಲ ವರ್ಗದ 66,322 ಜನರಿಗೆ ರೂ 415 ಕೋಟಿ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದ 17,125 ಫಲಾನುಭವಿಗಳಿಗೆ ರೂ 63 ಕೋಟಿ ಮತ್ತು ಅಲ್ಪಸಂಖ್ಯಾತ ವರ್ಗದ 44,142 ಮಂದಿಗೆ ರೂ 393 ಕೋಟಿ ಸಾಲವನ್ನು ನೀಡಿವೆ~ ಎಂದರು.

`ಪ್ರಸಕ್ತ ಸಾಲಿನ ಮೊದಲ ಒಂಬತ್ತು ತಿಂಗಳಲ್ಲಿ ಬ್ಯಾಂಕ್‌ಗಳು 1,943 ವಿದ್ಯಾರ್ಥಿಗಳಿಗೆ ರೂ 34 ಕೋಟಿ ವಿದ್ಯಾಭ್ಯಾಸ ಸಾಲ ಮಂಜೂರು ಮಾಡಿವೆ. ವಿದ್ಯಾಭ್ಯಾಸಕ್ಕಾಗಿ ಹಾಲಿ 14,098 ವಿದ್ಯಾರ್ಥಿಗಳು ರೂ 183 ಕೋಟಿ ಸಾಲ ಪಡೆದಿದ್ದಾರೆ. ಇದೇ ಅವಧಿಯಲ್ಲಿ 2,452 ಹೊಸ ಕೃಷಿಕರು ಕಿಸಾನ್ ಕ್ರೆಡಿಟ್ ಕಾರ್ಡ್ ಸೌಲಭ್ಯ ಪಡೆದಿದ್ದಾರೆ. 19,916 ರೈತರು ಈ ಯೋಜನೆಯಡಿ ರೂ 178 ಕೋಟಿ ಸಾಲ ಪಡೆದುಕೊಂಡಿದ್ದಾರೆ~ ಎಂದರು.

ಕೇಂದ್ರ ಸರ್ಕಾರ ಹಾಗೂ ರಿಸರ್ವ್ ಬ್ಯಾಂಕ್‌ನ ಮಹತ್ವಾಕಾಂಕ್ಷಿ ಯೋಜನೆಯಾದ ವಿತ್ತೀಯ ಸೇರ್ಪಡೆ ಕಾರ್ಯಕ್ರಮದ ಕುರಿತು ಮಾತನಾಡಿದ ಅವರು, `ಪ್ರಸಕ್ತ ಸಾಲಿನಲ್ಲಿ ಬ್ಯಾಂಕ್ ಶಾಖೆ ಇಲ್ಲದ 1000-2000ದವರೆಗೆ ಜನಸಂಖ್ಯೆಯುಳ್ಳ ಹಳ್ಳಿಗಳಲ್ಲಿಯೂ ಬ್ಯಾಂಕಿಂಗ್ ಸೌಲಭ್ಯಗಳನ್ನು ಒದಗಿಸುವ ಕಾರ್ಯಕ್ರಮ ಕೈಗೊಳ್ಳಬೇಕಿದೆ~ ಎಂದರು.

ನಬಾರ್ಡ್ ಸಹಾಯಕ ಮಹಾಪ್ರಬಂಧಕ ಪ್ರಸಾದ್ ರಾವ್ ಪ್ರಸಕ್ತ ಸಾಲಿನ ತೃತೀಯ ತ್ರೈಮಾಸಿಕದ ಅಂತ್ಯದವರೆಗೆ ಜಿಲ್ಲಾ ಮುಂಗಡ ಯೋಜನೆ ಅನುಷ್ಠಾನದ ಪ್ರಗತಿ ಪರಿಶೀಲನೆ ನಡೆಸಿದರು.

ಬ್ಯಾಂಕ್‌ಗಳ ಪ್ರಗತಿ ಪರಿಶೀಲನೆ ನಡೆಸಿದ, ರಿಸರ್ವ್‌ಬ್ಯಾಂಕ್‌ನ ಎಂ.ಎನ್.ಹಸನ್ ಮಾತನಾಡಿ, `ಸರ್ಕಾರ ಕಡ್ಡಾಯವಾಗಿ ಸಾಧಿಸಬೇಕು ಎಂದು ನಿಗದಿಪಡಿಸಿದ ಕೆಲವು ಗುರಿಗಳನ್ನು ತಲುಪುವತ್ತ ಎಲ್ಲ ಬ್ಯಾಂಕ್‌ಗಳೂ ಶ್ರಮಿಸಬೇಕು~ ಎಂದು ಸೂಚಿಸಿದರು.

ಜಿ.ಪಂ.ನ ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಿ.ಪ್ರಾಣೇಶ್ ರಾವ್ ಅಧ್ಯಕ್ಷತೆ ವಹಿಸಿದ್ದರು. ಅಗ್ರಣಿ ಜಿಲ್ಲಾ ಪ್ರಬಂಧಕ ದಿವಾಕರ ಭಟ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT