ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲ ಮರುಪಾವತಿ ನಂತರವೂ ಬಡ್ಡಿ: ವಿಚಾರಣೆಗೆ ಆದೇಶ

Last Updated 27 ಸೆಪ್ಟೆಂಬರ್ 2011, 6:15 IST
ಅಕ್ಷರ ಗಾತ್ರ

ಮಡಿಕೇರಿ: ಕರಿಕೆಯ ಸ್ವಸಹಾಯ ಸಂಘವೊಂದು ಕರಿಕೆ ವ್ಯವಸಾಯ ಸೇವಾ ಸಹಕಾರ ಬ್ಯಾಂಕ್ ಮೂಲಕ ಪಡೆದ ಸಾಲವನ್ನು ಮರುಪಾವತಿ ಮಾಡಿದ್ದರೂ ಒಂದು ವರ್ಷದ ಬಡ್ಡಿಹಣವನ್ನು ಕಟ್ಟಿಸಿ ಕೊಂಡಿದ್ದಾರೆ ಎಂದು ದೂರಿದ ಮಡಿಕೇರಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಕವಿತಾ ಪ್ರಭಾಕರ್ ಹೊಸಮನೆ ಅವರು, ಈ ಪ್ರಕರಣದ ಬಗ್ಗೆ ಒಂದು ವಾರದೊಳಗೆ ಸಮಗ್ರವಾಗಿ ಪರಿಶೀಲಿಸಿ ವರದಿ ನೀಡುವಂತೆ ಸಹಕಾರ ಇಲಾಖೆಯ ಅಧಿಕಾರಿಗೆ ಸೂಚನೆ ನೀಡಿದರು.

ನಗರದ ತಾ.ಪಂ. ಸಭಾಂಗಣದಲ್ಲಿ ಸೋಮವಾರ ನಡೆದ ಮಡಿಕೇರಿ ತಾಲ್ಲೂಕು ಪಂಚಾಯಿತಿ ಕೆಡಿಪಿ ಸಭೆಯಲ್ಲಿ ಅವರು ಈ ಸೂಚನೆ ನೀಡಿದರು.

ಸಹಕಾರ ಸಂಘಗಳಿಗೆ ಇಲಾಖೆ ವತಿಯಿಂದ ಸಮರ್ಪಕವಾಗಿ ಹಣಕಾಸು ನೆರವು ನೀಡಲಾಗುತ್ತಿದೆ ಎಂದು ಇಲಾಖಾ ಅಧಿಕಾರಿ ಜಗದೀಶ್ ಸಭೆಗೆ ತಿಳಿಸಿದರು. ಈ ಸಂದರ್ಭದಲ್ಲಿ ಮಧ್ಯೆ ಪ್ರವೇಶಿಸಿದ ಕವಿತಾ ಅವರು, ಕರಿಕೆಯ ಸ್ವಸಹಾಯ ಸಂಘವೊಂದು ರೂ 1.50 ಲಕ್ಷ ಸಾಲ ಪಡೆದುಕೊಂಡಿತ್ತು.
 
ಆದರೆ, ಪ್ರತಿ ತಿಂಗಳು ಕಂತು ರೂಪದಲ್ಲಿ ಸಾಲ ಮರುಪಾವತಿಸಬೇಕೆಂದು ಬ್ಯಾಂಕ್ ಸೂಚಿಸಿತ್ತು. ಇದರ ಬಗ್ಗೆ ಸಮಾ ಲೋಚನೆ ನಡೆಸಿದ ಸದಸ್ಯರು ಯಾವುದೇ ಚಟುವಟಿಕೆ ಕೈಗೊಳ್ಳಲು ಸಾಧ್ಯವಿಲ್ಲ ವೆಂದು ತೀರ್ಮಾನಿಸಿದರು.

ಸಾಲ ಪಡೆದ ಒಂದೇ ತಿಂಗಳಿನಲ್ಲಿ ಬಡ್ಡಿ ಸಮೇತ ಹಣವನ್ನು ವಾಪಸ್ ಮರುಪಾವತಿ ಮಾಡಿದರು. ಆದಾಗ್ಯೂ, ಸಹಕಾರ ಸಂಘವು ಒಂದು ವರ್ಷದ ಬಡ್ಡಿಯನ್ನು ಕಟ್ಟಿಸಿಕೊಂಡಿದೆ ಎಂದು ದೂರಿದರು.
ಪ್ರತಿಕ್ರಿಯಿಸಿದ ಜಗದೀಶ್, ಅಸಲು ಕಟ್ಟಿದ ನಂತರ ಬಡ್ಡಿ ಪಡೆಯಲು ಸಾಧ್ಯವಿಲ್ಲ. ಇದರ ಬಗ್ಗೆ ಸಂಪೂರ್ಣ ವಾಗಿ ವಿಚಾರಣೆ ನಡೆಸಿ, ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಸುವರ್ಣ ಭೂಮಿಗೆ ಆಯ್ಕೆ

ರಾಜ್ಯ ಸರ್ಕಾರದ ಮಹತ್ವಾ ಕಾಂಕ್ಷೆಯ ಸುವರ್ಣ ಭೂಮಿ ಯೋಜ ನೆಗೆ ತಾಲ್ಲೂಕಿನ 1,009 ರೈತ ಫಲಾ ನುಭವಿಗಳು ಆಯ್ಕೆಯಾಗಿದ್ದಾರೆ ಎಂದು ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಪ್ರಮೋದ ಮಾಹಿತಿ ನೀಡಿದರು.

 ಸಣ್ಣ ರೈತರಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದೆ. ಇದರಡಿ ಎರಡು ಕಂತುಗಳಲ್ಲಿ ರೂ 10,000 ಹಣವನ್ನು ಕಷಿ ಚಟುವಟಿ ಕೆಗಾಗಿ ನೀಡಲಾಗುತ್ತದೆ. ಬಹುತೇಕ ರೈತರಿಗೆ ಚೆಕ್ ನೀಡಲಾಗಿದ್ದು, ಇನ್ನುಳಿದವರಿಗೆ ಚೆಕ್ ನೀಡಲು ಕ್ರಮಕೈಗೊಳ್ಳಲಾಗುತ್ತಿದೆ ಎಂದರು.

ಯೋಜನೆಯ ನಿಯಮಾವಳಿಗಳ ಪ್ರಕಾರ 5 ಎಕರೆಗಿಂತ ಕಡಿಮೆ ಜಮೀನು ಇರುವವರು ಸಣ್ಣ ರೈತರಾಗಿರುತ್ತಾರೆ. ಆದರೆ, ಪ್ಲಾಂಟೇಶನ್ ಭಾಗದಲ್ಲಿ ಅರ್ಧ ಎಕರೆಗಿಂತ ಕಡಿಮೆ ಇರುವವರನ್ನು ಸಣ್ಣ ರೈತರೆಂದು ಗುರುತಿಸಲಾಗಿದೆ. ಹೀಗಾಗಿ ಕೊಡಗಿನಲ್ಲಿ ಬಹಳಷ್ಟು ರೈತರಿಗೆ ಈ ಯೋಜನೆಯ ಪ್ರಯೋಜನ ದಕ್ಕುತ್ತಿಲ್ಲ ಎನ್ನುವ ಅಂಶವನ್ನು ಅವರು ಸಭೆಯ ಗಮನಕ್ಕೆ ತಂದರು.

ವಿಧಾನಸಭಾಧ್ಯಕ್ಷ ಕೆ.ಜಿ.ಬೋಪಯ್ಯ ಅವರ ಗಮನಕ್ಕೂ ಈ ವಿಷಯವನ್ನು ತರಲಾಗಿದ್ದು, ಶೀಘ್ರದಲ್ಲಿ ಈ ನಿಯಮಾ ವಳಿಗೆ ತಿದ್ದುಪಡಿ ತರುವ ಭರವಸೆಯನ್ನು ಅವರು ನೀಡಿದ್ದಾರೆ ಎಂದರು.

ಆಶಾ ಕಾರ್ಯಕರ್ತೆರಿಗೆ ನಿಗದಿತ ಸಂಬಳ?
ತಾಲ್ಲೂಕಿನ ಹಲವೆಡೆ ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಪ್ರತಿ ತಿಂಗಳು ನಿಗದಿತ ಸಂಬಳವೇಕೆ ನೀಡಬಾರದು? ಎಂದು ತಾ.ಪಂ. ಅಧ್ಯಕ್ಷೆ ಕವಿತಾ ಹೊಸಮನೆ ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ರವೀಂದ್ರ ಅವರು, ಆಶಾ ಕಾರ್ಯಕರ್ತೆಯರನ್ನು ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿ ನೇಮಕ ಮಾಡಿಕೊಂಡಿರುವುದರಿಂದ            ಹಾಗೂ ಈ ಯೋಜನೆಯ ನಿಯಮಾ ವಳಿಗಳ ಪ್ರಕಾರ ಅವರಿಗೆ ಸಂಭಾವನೆ ರೂಪದಲ್ಲಿ ಹಣ ನೀಡಲಾಗುತ್ತಿದೆ, ಹೊರತು ನಿಗದಿತ ಸಂಬಳ ನೀಡಲು ಸಾಧ್ಯವಿಲ್ಲ ಎಂದರು.

ನಾಪೋಕ್ಲು ಸಮುದಾಯ ಆರೋಗ್ಯ ಕೇಂದ್ರದ ವಿದ್ಯುತ್ ಸಮಸ್ಯೆ ಬಗೆಹರಿಸು ವಂತೆ ರವೀಂದ್ರ ಅವರು ಪಂಚಾಯಿತಿಗೆ ಮನವಿ ಮಾಡಿದರು. ಕೆಇಬಿ ಅಧಿಕಾರಿ ಪ್ರದೀಪ್ ಮಾತ ನಾಡಿ, ಶೀಘ್ರವೇ ಕ್ರಮಕೈಗೊಳ್ಳ ಲಾಗುವುದು ಎಂದು ಭರವಸೆ ನೀಡಿದರು.

ಆಹಾರ, ಕಂದಾಯ ಅಧಿಕಾರಿಗಳು ಗೈರು
ಸಭೆಯಲ್ಲಿ ಕಂದಾಯ ಹಾಗೂ ಆಹಾರ ಇಲಾಖೆಯ ಅಧಿಕಾರಿಗಳು ಗೈರುಹಾಜರಾಗಿದ್ದು ಕಂಡುಬಂದಿತು.
ಇತ್ತೀಚೆಗೆ ಜಿಲ್ಲೆಯಲ್ಲಿ ಗ್ರಾಮ ಲೆಕ್ಕಿಗರು ಹಾಗೂ ಕಂದಾಯ ನಿರೀಕ್ಷಕರನ್ನು ಅಮಾನತುಗೊಳಿಸಿರುವ ಕ್ರಮವನ್ನು ವಿರೋಧಿಸಿ ಇಲಾಖೆಯ ಸಿಬ್ಬಂದಿ ಮುಷ್ಕರ ನಡೆಸುತ್ತಿರುವುದರಿಂದ ಸಭೆಯಲ್ಲಿ ಪಾಲ್ಗೊಂಡಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT