ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವಯವ ಕೃಷಿಯಲ್ಲಿ ತೊಡಗಿಸಿಕೊಳ್ಳಿ: ನರಸಿಂಹನ್

Last Updated 8 ಅಕ್ಟೋಬರ್ 2011, 8:55 IST
ಅಕ್ಷರ ಗಾತ್ರ

ನಾಪೋಕ್ಲು: ಸಾವಯವ ಕೃಷಿಯತ್ತ ಒಲವು ಮೂಡಿಸಿಕೊಂಡರೆ ವಿಷಯುಕ್ತವಾದ ಆಹಾರದಿಂದ      ಮುಕ್ತಿ ಹೊಂದಲು ಸಾಧ್ಯ  ಎಂದು ವಿರಾಜಪೇಟೆಯ ವೈದ್ಯ ಡಾ. ಎಸ್.ವಿ. ನರಸಿಂಹನ್    ಹೇಳಿದರು.

ಐಕೊಳ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮೂರ್ನಾಡು ಪದವಿಪೂರ್ವ ಕಾಲೇಜಿನ               ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ನಡೆಯುತ್ತಿರುವ ವಿಶೇಷ ವಾರ್ಷಿಕ  ಶಿಬಿರದಲ್ಲಿ ಸಾವಯವ ಕೃಷಿಯ ಮಹತ್ವ ಎಂಬ ವಿಷಯದ ಕುರಿತು ಮಾತನಾಡಿದರು.

 ರೈತರು ಸ್ವಾವಲಂಬಿಗಳಾಗಿ ಸಾವಯವ ಕೃಷಿಯಲ್ಲಿ  ಆಸಕ್ತಿ ಹೊಂದುವುದಲ್ಲದೆ ರೈತನೇ ನಿಜವಾದ ಕೃಷಿ ವಿಜ್ಞಾನಿಯಾಗಬೇಕು ಎಂದರು.

ಐಕೊಳ ಗ್ರಾಮದ ಕಾಫಿ ಬೆಳೆಗಾರ ಎಂ. ಎಂ. ಅಪ್ಪಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕಾಫಿ ಬೆಳೆಗಾರ ಎಂ.ಜಿ. ಶಿವಕುಮಾರ್, ಮೂರ್ನಾಡು ಲಯನ್ಸ್ ಕ್ಲಬ್ ಅಧ್ಯಕ್ಷ ಎ.ಕೆ. ಮಂದಣ್ಣ, ಎನ್. ಎಸ್ ಎಸ್. ಕಾರ್ಯಕ್ರಮಾಧಿಕಾರಿ ಪಿ.ಎಂ ದೇವಕ್ಕಿ ಉಪಸ್ಥಿತರಿದ್ದರು. ಶಿಬಿರಾರ್ಥಿ ನವೀನ್ ಕುಮಾರ್ ಸ್ವಾಗತಿಸಿದರು. ಸಿಂಧು ವಂದಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT