ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವಿತ್ರಿಬಾಯಿ ಲಮಾಣಿ ಬಂಜಾರ ಗಾನ ಕೋಗಿಲೆ

Last Updated 7 ಅಕ್ಟೋಬರ್ 2012, 8:40 IST
ಅಕ್ಷರ ಗಾತ್ರ

ಲಂಬಾಣಿ ಪದಗಳನ್ನು ಯಾರು ಕೇಳಿಲ್ಲ ? ಗುಂಪು ಗುಂಪಾಗಿ ಹಾಡುತ್ತ ಜನಪದ ಕಲೆಯನ್ನು ಇವತ್ತಿಗೂ ಜೀವಂತವಾಗಿಟ್ಟ ಜನಾಂಗ ಲಂಬಾಣಿ ಯರು. ಹೀಗೆ ಹಾಡುವದನ್ನೇ ವೃತ್ತಿಯನ್ನಾಗಿಸಿಕೊಂಡಿರುವ ಸಾವಿತ್ರಿ ಬಾಯಿ ಗದಗ ಎಂದರೆ ಸಾಕು ಲಂಬಾಣಿ (ಬಂಜಾರ ) ಜನಾಂಗದ ಎಲ್ಲರ ಬಾಯಲ್ಲಿ ಥಟ್ಟನೇ ಬರುವ ಶಬ್ದವೇ ಹಾಡುವ ಕೋಗಿಲೆ  ಎಂದು. ಸಂಗೀತ ಕ್ಷೇತ್ರದಲ್ಲಿ ಲಂಬಾಣಿಗರು ತಮ್ಮದೆ ಆದ ವಿಶಿಷ್ಟ ಶೈಲಿಯ ವಾದ್ಯ ಸಾಮಗ್ರಿ ಗಳೂಂದಿಗೆ ವಿವಿಧ ಪೂಜಾ ಕಾರ್ಯ ಕ್ರಮದಲ್ಲಿ ಭಜನಾ ಪದಗಳನ್ನು (ವಾಜಾ) ಹಾಡಿ ಜನರಿಗೆ ರಸದೌತಣ ನೀಡುವಲಿ ಸಿದ್ಧಹಸ್ತರು.

ಈ ಸಂಗೀತ ಕ್ಷೇತ್ರದಲ್ಲಿ ತಮ್ಮದೆ ಆದ ಛಾಪನ್ನು ಮೂಡಿಸಿರುವ ಹಾಗೂ  ಹಾಡುವ ಕೋಗಿಲೆ   ಎಂದು ಚಿರಪರಿ ಚಿತರಾಗಿರುವ  ಸಾವಿತ್ರಿಬಾಯಿ ಮಹಾಂತೇಶ ಜಾಧವ (ಲಮಾಣಿ) ಧನುರಾಮ ಮತ್ತು ಸೊನಾಬಾಯಿ ದಂಪತಿಗಳಿಗೆ ಕೊನೆಯ  ಮಗಳಾಗಿ ಸಾವಿತ್ರಿಬಾಯಿ ಗದಗ ಜಿಲ್ಲೆಯ ಪಾಪನಾಸಿ ತಾಂಡಾದಲ್ಲಿ ಜನಿಸಿ ಬಡತನದಿಂದಾಗಿ ಪಿಯುಸಿವರೆಗೆ ಮಾತ್ರ ಶಿಕ್ಷಣ ಪಡೆದರೂ ತಮ್ಮ ಅಮೋಘ ಹಾಡಿನ ಪ್ರೀತಿಯಿಂದಾಗಿ ಇಂದು ಲಂಬಾಣಿ ಹಾಡು ಎಂದರೆ ನೆನ ಪಾಗುತ್ತಾರೆ.

ಅವರಿಗೆ ಬಾಲ್ಯದಿಂದಲೆ ಸಾಹಿತ್ಯ ಕ್ಷೇತ್ರದಲ್ಲಿ ಆಸಕ್ತಿ ಇದ್ದುದರಿಂದ ಸಂಗೀತದ ಕಡೆ ತಮ್ಮ ಗಮನವನ್ನು  ಕೇಂದ್ರಿಕರಿಸಿದರು. ಚಿಕ್ಕವಯಸ್ಸಿನಲ್ಲೆ ಲಂಬಾಣಿ ಭಜನಾ (ವಾಜಾ) ಗೀತೆ ಗಳನ್ನು ಲಂಬಾಣಿ ಶೈಲಿಯಲ್ಲಿ ರಚಿಸಿ ಹಾಡಲು ಪ್ರಾರಂಭಿಸಿದರು. ಗದಗದ  ಪಂಡಿತ ಪುಟ್ಟರಾಜ ಗವಾಯಿಗಳ ಆಶೀರ್ವಾದದಿಂದ ಅವರು ಲಂಬಾಣಿ ಭಜನಾ ಪದಗಳನ್ನು ರಚಿಸಿ ತಂಡವನ್ನು ಕಟ್ಟಕೊಂಡು ರಾಜ್ಯದ ಹಲವು ತಾಂಡಾಗಳಿಗೆ ಹೊಗಿ ಪೂಜಾ ಕಾರ್ಯಕ್ರಮಗಳಲ್ಲಿ ತಮ್ಮ ಸಂಗೀತ ಗೊಷ್ಠಿಯನ್ನು ನೀಡುತ್ತಿದ್ದಾರೆ.

ಲಂಬಾಣಿ ಭಜನಾ ಪದಗಳು ವಿವಿದ ತಾಂಡಾಗಳಲ್ಲಿ ಪುರುಷರಿಗೆ ಮಾತ್ರ ಸೀಮಿತವಾಗಿರುವ ಕಲೆ, ಆದರೆ ಸಾವಿತ್ರಿಬಾಯಿ ಲಂಬಾಣಿ ಮಹಿಳೆಯರು ಕೂಡ ಲಂಬಾಣಿ ಭಜನಾ (ವಾಜಾ) ಪದಗಳನ್ನು ಲಂಬಾಣಿ ಸಾಹಿತ್ಯದಲ್ಲಿ ಹಾಡಬಲ್ಲರು ಎಂದು ಸಾಬೀತು ಪಡಿಸಿದ್ದಾರೆ. ಸಾವಿತ್ರಬಾಯಿ ಗದಗ ಲಂಬಾಣಿ ಬಜನಾ (ವಾಜಾ) ಹಾಡಲು  ಪ್ರಾರಂಭಿಸಿದರೆ ಸಾಕು ನೆರೆದ ಜನರೆಲ್ಲಾ ಮೂಕ ವಿಸ್ಮಯರಾಗಿ ಬಿಡುತ್ತಾರೆ.

ಸಾವಿತ್ರಿಬಾಯಿ ಗದಗ ಲಂಬಾಣಿ ಭಜನೆಗಳನ್ನು ಹಿಂದಿ ಚಾಲನಲ್ಲಿ, ಕವ್ಹಾಲಿ ರೂಪದಲ್ಲಿ ಹಾಗೂ ಮೂಲ ಲಂಬಾಣಿ ಶೈಲಿಯಲ್ಲಿ ಹಾಡುವ ಕಲೆಯನ್ನು ಹೊಂದಿದ್ದಾರೆ. ಲಂಬಾಣಿ ಭಾಷೆಯಲ್ಲಿ ಅಷ್ಟೇ  ಅಲ್ಲದೆ ಪ್ರೇಕ್ಷಕರ ಒತ್ತಾಸೆಯಂತೆ, ಜನಪ್ರಿಯ ಕನ್ನಡ ಜಾನಪದ, ಭಾವಗೀತೆ , ಚಲನಚಿತ್ರ ಗೀತೆಗಳನ್ನು ಹಾಡುವ ರಾಗ ಹಾಗೂ ಕಂಠಸಿರಿಯನ್ನು ಹೋಲಿಸಿದರೆ ಅವರು ಸುಪ್ರಸಿದ್ದ ಕನ್ನಡದ ಹಿನ್ನಲೆ ಗಾಯಕಿ ಬಿ.ಆರ್. ಛಾಯಾ ಅವರನ್ನು ಹೋಲುತ್ತಾರೆ. ಕರ್ನಾಟಕ ಅಷ್ಟೇ ಅಲ್ಲದೆ ಆಂದ್ರಪ್ರದೇಶ ಮಹಾರಾಷ್ಟ್ರ ಹಾಗೂ ಗೊವಾ, ರಾಜ್ಯಗಳಿಗೆ ಹೋಗಿ ತಮ್ಮ ಬಂಜಾರ ಭಜನಾ (ವಾಜಾ) ಕಾರ್ಯಕ್ರಮಗಳನ್ನು ನೀಡುತ್ತಿದಾರೆ.

ಆಜೊ ಸೇವಾಬಾಯಾ  (ಲಂಬಾಣಿ),  ಈ ಮನಸು ಮುದಡಿ ಮಣ್ಣಾಗ ಇಟ್ಟು ಗೋರಿ ಕಟ್ಟಲೇನು,  ಏನಚೆಂದ ಕಾಣತದ ಮಲ್ಲಿಗೆ,  ಬೇಟಿ ಹುಟಿಚಕನ ಜುರಮತರೆ  (ಲಂಬಾಣಿ) ಹಾಗೂ ಹೆತ್ತ ತಾಯಿನ ಬೇರೆ ಇಟ್ಟರೆ ದೇವರೋಪ್ಪುವುದಿಲ್ಲ... ಇನ್ನು ಹಲವು ಗೀತೆ ಗಳನ್ನು ಮಾಧುರ್ಯವಾಗಿ ಸಂಗೀತದ ತಾಳ ಮೇಳದೊಂದಿಗೆ ಹಾಡುತ್ತಿದ್ದರೆ ಪ್ರೇಕ್ಷಕರಿಗೆ ರಸದೌತಣ ನೀಡಿದಂತೆ.

ಬಂಜಾರ ಶೈಲಿಯ ವಿಶಿಷ್ಟ ಸಂಗೀತ ಆರಾಧಕಿ ಸಾವಿತ್ರಿಬಾಯಿ ಮಹಾಂತೇಶ ಜಾಧವ  (ಲಮಾಣಿ) ಇವರಿಗೆ ಮುಂದೆ ಸಂಗೀತ  ಕ್ಷೇತ್ರದಲ್ಲಿ ಕೊಡ ಮಾಡುವ  ಪ್ರಶಸ್ತಿಗಳು ಸಿಗುವ ದಿಸೆಯಲ್ಲಿ ಸಂಬಂಧಪಟ್ಟ ಇಲಾಖೆಗಳು, ಜನಪ್ರತಿ ನಿಧಿಗಳು ಹಾಗೂ ಲಂಬಾಣಿ ಸಮಾಜದ ಧುರೀಣರು ಪ್ರಯತ್ನಿಸಬೇಕೆಂದು ಎಲ್ಲಾ ಬಂಜಾರರ ಮನದಾಸೆಯಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT