ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವಿರ ಉದ್ಯಾನಗಳ ಊರು!

Last Updated 3 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಜಾರ್ಖಂಡ್ ರಾಜ್ಯದ ಹಜಾರಿಬಾಗ್ ಸಾವಿರ ಉದ್ಯಾನವನಗಳ ಊರು. ಇದು, ಪ್ರವಾಸಿಗರಿಗೆ ಅತ್ಯಂತ ಪ್ರಿಯವಾದ ತಾಣ. ಊರ ಮಧ್ಯೆ ಕೊನಾರ್ ಎನ್ನುವ ನದಿ ಹರಿದು ಸಾಗುತ್ತದೆ. ಅಲ್ಲದೇ ದೊಡ್ಡದೊಂದು ಸರೋವರವೂ ಅಲ್ಲಿದೆ. ಅಲ್ಲಿ ದೋಣಿ ವಿಹಾರ ಪ್ರವಾಸಿಗರಿಗೆ ಹಿತ ನೀಡುತ್ತದೆ.

ನಗರದಿಂದ ಐದು ಕಿಮೀ ಅಂತರದಲ್ಲಿ ಸಮುದ್ರಮಟ್ಟದಿಂದ 2019 ಅಡಿ ಎತ್ತರದ ಕ್ಯಾನರಿ ಬೆಟ್ಟ ಇದೆ. ಅಲ್ಲಿಂದ ಸೂರ್ಯೋದಯ ಮತ್ತು ಸೂರ್ಯಾಸ್ತದ ದೃಶ್ಯಗಳು ರಮಣೀಯವಾಗಿ ಕಾಣುತ್ತವೆ. ಬೆಟ್ಟದಲ್ಲಿ ಸಣ್ಣ ಸಣ್ಣ ಸರೋವರಗಳಿವೆ. ಹಸಿರಿನಿಂದ ಕೂಡಿದ ಈ  ಕ್ಯಾನರಿ ಬೆಟ್ಟಕ್ಕೆ 600 ಮೆಟ್ಟಿಲುಗಳು. ಬೆಟ್ಟದ ದಿವ್ಯ ಸೊಬಗನ್ನು ಕಣ್ತುಂಬಿಕೊಳ್ಳುತ್ತ, ಮೆಟ್ಟಿಲುಗಳನ್ನು ಏರುವುದು ಅವಿಸ್ಮರಣೀಯ ಅನುಭವವೇ ಸರಿ.

ಹೆಚ್ಚಾಗಿ ಸಾಲ್ ಮರಗಳಿಂದ ಆವೃತವಾಗಿರುವ ಹಜಾರಿಬಾಗ್ ವನ್ಯಜೀವಿ ಸಂರಕ್ಷಣಾ ವಲಯ ಅಪರೂಪದ ಔಷಧೀಯ ಸಸ್ಯಗಳಿಗೂ ತವರು. ಈ ದಟ್ಟ ಕಾಡಿನಿಂದಲೇ ಊರಿಗೆ ಅಷ್ಟು ತಂಪು ಹವೆ ಸಿಕ್ಕಿದೆ. ಸಂರಕ್ಷಣಾ ವಲಯದಲ್ಲಿ ಸಂಬಾರ್, ನೀಲ್‌ಗಾಯ್, ಚಿರತೆ, ಕಾಡು ಬೆಕ್ಕು, ಕಾಡು ಕರಡಿ, ಕರಿಚಿರತೆ, ಸರ್ಪಗಳು, ಹುಲಿಗಳು ಇವೆ. ಕಾಡಿನೊಳಗೆ ಹುಲಿ ಮತ್ತು ಜಿಂಕೆ ಸಫಾರಿಗೆ ಅವಕಾಶ ಕಲ್ಪಿಸಲಾಗಿದೆ.

ಬಂಡೆಗಳು, ಸರೋವರಗಳು, ಕಣಿವೆಗಳು, ಹುಲ್ಲುಗಾವಲಿನಿಂದ ಕೂಡಿದ ಈ ದಟ್ಟ ಕಾಡಿನ ಸಂಚಾರ ಅಪೂರ್ವ ಅನುಭವ ನೀಡುತ್ತದೆ. ಹಜಾರಿಬಾಗ್‌ಗೆ 60 ಕಿ.ಮೀ ದೂರದಲ್ಲಿ ಇರುವ ಸೂರಜ್‌ಕುಂಡ ಬಿಸಿನೀರಿನ ಬುಗ್ಗೆಗೆ ಪ್ರಸಿದ್ಧವಾದುದು. ಸಮೀಪದಲ್ಲೇ ಇರುವ ಪರಸನಾಥ ಬೆಟ್ಟ, ಹರಿಹರಧಾಮ ಕೂಡ ಪ್ರವಾಸಿಗರ ಸೆಳೆಯುವ ಚುಂಬಕಗಳೇ. ಅಂದಹಾಗೆ, ಹಜಾರಿಬಾಗ್‌ನಿಂದ ರಾಂಚಿಗೆ 100 ಕಿ.ಮೀ ದೂರ. ಪಟ್ನಾದಿಂದ 250 ಕಿ.ಮೀ ದೂರ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT