ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಸ ಕ್ರೀಡೆಗಳ ಛಾಯಾಚಿತ್ರ ಪ್ರದರ್ಶನ

Last Updated 3 ಜನವರಿ 2014, 19:41 IST
ಅಕ್ಷರ ಗಾತ್ರ

ಬೆಂಗಳೂರು: ಎಸ್ಸೆನ್ ಕಮ್ಯೂನಿಕೇಷನ್ಸ್ ನಗರದ  ಅಲಯನ್ಸ್ ಫ್ರಾನ್ಸೆಯಲ್ಲಿ  ಶುಕ್ರವಾರ ‘ದಿ ಗ್ರೇಟ್ ಔಟ್‌ಡೋರ್‌್ಸ 2014 – ಛಾಯಾ ಚಿತ್ರ ಪ್ರದರ್ಶನ’ ವನ್ನು ಏರ್ಪಡಿಸಿತ್ತು.

ಬೈಕ್‌ ರೈಡಿಂಗ್‌, ಹಳ್ಳಿಯ ಕಲ್ಲು ಮಣ್ಣಿನ ರಸ್ತೆಗಳಲ್ಲಿ ಸೈಕಲ್‌ ರೈಡಿಂಗ್‌,  ಬಂಡೆಗಳನ್ನು ಹತ್ತುವುದು, ಸಮುದ್ರ­ದಲ್ಲಿ ನಡೆಯುವ ಸಾಹಸ ಕ್ರೀಡೆಗಳ ಛಾಯಾಚಿತ್ರಗಳು  ಮನಸೆಳೆದವು.

ಛಾಯಾಚಿತ್ರ ಪ್ರದರ್ಶನ ಉದ್ಘಾ­ಟಿಸಿ ಮಾತನಾಡಿದ ಬ್ಯಾಡ್ಮಿಂಟನ್‌ ಆಟಗಾರ್ತಿ ಅಶ್ವಿನಿ ಪೊನ್ನಪ್ಪ, ‘ಛಾಯಾ­ಚಿತ್ರಗಳನ್ನು ನೋಡಿ­ದರೆ ಒಂದು ಕ್ಷಣ ಅಲ್ಲಿಗೆ ಹೋಗಿ ಬಂದ ಅನುಭವ­ವಾಗುತ್ತದೆ. ಛಾಯಾಚಿತ್ರಗಳು ಒಂದ­ಕ್ಕಿಂತ ಒಂದು ಅದ್ಭುತವಾಗಿವೆ’ ಎಂದು ಹೇಳಿದರು.
ಜಂಗಲ್ ಲಾಡ್ಜಸ್ ಅಂಡ್ ರೆಸಾರ್ಟ್ಸ್ ವ್ಯವಸ್ಥಾಪಕ ನಿರ್ದೇಶಕ ಅನೂರ್ ರೆಡ್ಡಿ, ‘ಸಾಹಸ ಕ್ರೀಡೆ ಅಥವಾ  ಆ ಛಾಯಾಚಿತ್ರಗಳನ್ನು ಸೆರೆಹಿಡಿ­ಯಲು ಹೋಗುವವರು ಸುರಕ್ಷತೆಯ ಬಗ್ಗೆ ಹೆಚ್ಚು ಗಮನ ನೀಡಬೇಕು’ ಎಂದರು.

ಛಾಯಚಿತ್ರಗಾರರಾದ ಅನೀತ್‌ ಬಿಸ್ವಾಸ್‌, ಅರುಣಾ ಚಂದರಾಜು, ಬಿ.ಎಸ್‌.ಪ್ರಸಾದ್‌, ಹೇಮಂತ್‌ ಸೋರೆಗ, ಎಸ್‌.ದೇವೇಂದ್ರ ಕುಮಾರ್‌, ಟಿ.ಕೇಶವಮೂರ್ತಿ, ಬಿ.ಮುರಳಿ ಕೃಷ್ಣನ್‌, ರಾಜೇಶ್‌ ಮಣಕ್ಕಲ್‌, ಸಿ.­ಆರ್‌.­ಸತ್ಯನಾರಾಯಣ, ಕೆ.ಶಿವು, ಸುಶೀಲಾ ನಾಯರ್‌, ಸುನಾದ್‌ ಸಂಪತ್‌, ತೌಶಿಕ್‌ ಮಂಡಲ್‌, ದಕ್ಷಿಣ ಆಫ್ರಿಕಾ, ಥೈಲ್ಯಾಂಡ್‌ನ ಪ್ರವಾಸೋ­ದ್ಯಮ ಇಲಾಖೆ,  ಜಂಗಲ್ ಲಾಡ್ಜಸ್,  ರೆಸಾರ್ಟ್ಸ್ ಮತ್ತು ಪ್ರವಾಸೋದ್ಯಮ ಇಲಾಖೆಯ ಛಾಯಾಚಿತ್ರಗಳು ಪ್ರದರ್ಶನದಲ್ಲಿವೆ.

ಪ್ರದರ್ಶನವು ವಸಂತನಗರದ ಅಲಯನ್ಸ್ ಫ್ರಾನ್ಸೆಯಲ್ಲಿ ಜನವರಿ 5 ರವರೆಗೆ ಬೆಳಿಗ್ಗೆ 10 ರಿಂದ ರಾತ್ರಿ 8 ರವರೆಗೆ ಇರಲಿದೆ. ಪ್ರದರ್ಶನಕ್ಕೆ ಪ್ರವೇಶ ಉಚಿತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT