ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತಿ ಎಲ್.ಬಸವರಾಜು ಶೂನ್ಯದಲ್ಲಿ ಲೀನ

Last Updated 1 ಫೆಬ್ರುವರಿ 2012, 19:35 IST
ಅಕ್ಷರ ಗಾತ್ರ

ಮೈಸೂರು: ಹಿರಿಯ ಸಾಹಿತಿ, ವಿದ್ವಾಂಸ, ಪಂಪ ಪ್ರಶಸ್ತಿ ಪುರಸ್ಕೃತ ಡಾ. ಎಲ್.ಬಸವರಾಜು ಅವರ ಅಂತ್ಯಕ್ರಿಯೆ ವಿದ್ಯಾರಣ್ಯಪುರಂನ ವೀರಶೈವ ರುದ್ರಭೂಮಿಯಲ್ಲಿ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಬುಧವಾರ ನೇರವೇರಿತು.

ಇದಕ್ಕೂ ಮುನ್ನ ಬೆಳಿಗ್ಗೆ 8 ರಿಂದ 11.45ರ ವರೆಗೆ ಜಯಲಕ್ಷ್ಮೀಪುರಂನ ಅವರ ನಿವಾಸದಲ್ಲಿ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು.

ಭಾನುವಾರ (ಜ. 29) ರಾತ್ರಿ ಅನಾರೋಗ್ಯದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದ ಡಾ.ಎಲ್. ಬಸವರಾಜು ಅವರ ಪಾರ್ಥಿವ ಶರೀರವನ್ನು ವಿಕ್ರಂ ಆಸ್ಪತ್ರೆಯಲ್ಲಿ ಇಡಲಾಗಿತ್ತು.

ವಿದೇಶದಲ್ಲಿದ್ದ ಮಗಳು ನಳಿನಿ, ಅಳಿಯ ಮತ್ತು ಮೊಮ್ಮಗ ಪಿ.ಚಾರುಚಂದ್ರ ಬುಧವಾರ ಬೆಳಿಗ್ಗೆ ಆಗಮಿಸಿದರು. ಅಂತ್ಯ ಸಂಸ್ಕಾರದ ವೇಳೆ ಬಸವರಾಜು ಅವರ ಪತ್ನಿ ಬಿ.ವಿಶಾಲಾಕ್ಷಿ, ಸಾಕು ಮಗಳು ಸೌಭಾಗ್ಯ ಮತ್ತು ಕುಟುಂಬ ವರ್ಗದವರ ದುಃಖ ಕಟ್ಟೆಯೊಡೆದಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT